KRS Dam Water Level Today: ವ್ಯಾಪಕ ಮಳೆಗೆ ಜಲಾಶಯದ ಒಳಹರಿವು ಏರಿಕೆ: ಜೂನ್ 10ರ ನೀರಿನ ಮಟ್ಟ ಎಷ್ಟಿದೆ?
ಮಂಡ್ಯ, ಜೂನ್ 10: ಹವಾಮಾನ ಇಲಾಖೆ ಮುನ್ಸೂಚನೆಯಂತೆ ರಾಜ್ಯದಲ್ಲಿ ಮಳೆ ಆರ್ಭಟಿಸುತ್ತಿದೆ. ಪೂರ್ವ ಮುಂಗಾರು ಕೊನೆ ಕೊನೆಗೆ ಉತ್ತಮ ಮಳೆ ಸುರಿಸಿದ ಪರಿಣಾಮ, ತುಂಗಾ, ಭದ್ರಾ, ಕೆಆರ್‌ಎಸ್, ಆಲಮಟ್ಟಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಕಾವೇರಿ ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಮುಂದುವರಿದ ಕಾರಣ ಕೃಷ್ಣ ರಾಜಸಾಗರ (KRS) ಆಣೆಕಟ್ಟಿನಲ್ಲಿ ಜೂನ್ 10ರಂದು ಒಳಹರಿವು ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.
ಒಂದು ತಿಂಗಳ ಹಿಂದೆ ಇದ್ದ ಬರದ ವಾತಾವರಣ ಈಗ ಮಾಯವಾಗಿದೆ. ಮೇ ಆರಂಭದಲ್ಲಿ ಜಲಾಶಯಗಳಲ್ಲಿ ಸ್ವಲ್ಪೇ ಸ್ವಲ್ಪ ನೀರು ಕಂಡು ಬಂದಿತ್ತು. ಇದೀಗ ಜೂನ್ ಮೊದಲ ವಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಹೆಚ್ಚುವರಿ ನೀರನ್ನು ಹೊರಕ್ಕೆ ಹರಿಸಲಾಗುತ್ತದೆ.

ಸದ್ಯ ಕೃಷ್ಣರಾಜ ಸಾಗರದಲ್ಲಿ (KRS) ಹೆಚ್ಚಾದ ನೀರಿನಿಂದ ಪಕ್ಕದಲ್ಲೇ ಇರುವ ವಿಶಾಲವಾದ KRS ಉದ್ಯಾನದಲ್ಲಿ ಹಸಿರು ಕಂಗೊಳಿಸುತ್ತಿದೆ. ಕಾವೇರಿ ಕೊಳ್ಳದ ಸುತ್ತಮುತ್ತ ಹಸಿರು ಹೊದಿಕೆ ಹೆಚ್ಚಾಗಿದೆ. ರೈತರಿ ಇನ್ನೊಂದು ವರ್ಷ ನೀರಾವರಿಗೆ ಯಾವುದೇ ಸಮಸ್ಯೆ ಆಗದು. ಹಾಗಾದರೆ ಕೆಆರ್ಎಸ್ ನೀರಿನ ಒಳ ಹರಿವು, ಹೊರ ಹರಿವು ಇಂದಿನ ಪ್ರಮಾಣದ ಪೂರ್ಣ ವಿವರ ಇಲ್ಲಿದೆ.
ಜೂನ್ 10ರ KRS ನೀರಿನ ಮಟ್ಟ ಎಷ್ಟಿದೆ?
ಸೋಮವಾರದ (ಜೂನ್ 10) ಮಾಹಿತಿ ಪ್ರಕಾರ, ಕೆಆರ್‌ಎಸ್ ಜಲಾಶಯದ ಒಟ್ಟು ಸಾಮರ್ಥ್ಯ 49.452 TMC ಇದೆ. ಭಾರಿ ಮಳೆ ಆಗುತ್ತಿರುವುದರಿಂದ ಒಹರಿವು ಇಂದು 1,141 ಕ್ಯೂಸೆಕ್ಸ್ ನಷ್ಟು ಹೆಚ್ಚಾಗಿದೆ. ಹೊರ ಹರಿವು 446 ಕ್ಯೂಸೆಕ್ಸ್ ಇದೆ.
ಇನ್ನೂ ಒಟ್ಟು ಹೊರ ಹರವಿನಲ್ಲಿ ಕಾವೇರಿ ನದಿಗೆ ಇದರಲ್ಲಿ 396 ಕ್ಯೂಸೆಕ್ಸ್ ಮತ್ತು 50 ಕ್ಯೂಸೆಕ್ಸ್ ನೀರನ್ನು ಕಣಿವೆ ಬಿಡಲಾಗಿದೆ. ಇದು ರೈತರ ಹೊಲಗಳಿಗೆ, ಕಬ್ಬು ಇನ್ನಿತರ ಹೆಚ್ಚು ನೀರು ಬೇಕಾದ ಜಮೀನುಗಳಿಗೆ ಬಳಕೆ ಆಗುತ್ತದೆ. ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ರಾಮನಗರ, ಬಿಡದಿ, ಚನ್ನಪಟ್ಟಣ ಸೇರಿದಂತೆ, ತಲಕಾಡು ಇನ್ನಿತರ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಈ ನೀರೆ ಆಧಾರವಾಗಿದೆ.

ಕೆಆರ್‌ಎಸ್ ಡ್ಯಾಂ ಗೆ ಸೋಮವಾರ ಶೇಕಡಾ 26.68 ರಷ್ಟು ಸಂಗ್ರಹವಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಇನ್ನಷ್ಟು ಮಳೆ ಬರಲಿದೆ. ಆಗ ಒಳಹರಿವು ಹೆಚ್ಚಾಗುವ ಸಂಬಂಧ, ಹೊರ ಹರಿವು ಏರಿಕೆ ಮಾಡುವ ಸಾಧ್ಯತೆ ಇದೆ. ಮುಂದಿ ಬೇಸಿಗೆ ವರೆಗೆ ಕಾವೇರಿ ಮೈದುಂಬಿ ಹರಿಯಲಿದ್ದಾಳೆ.
ಭದ್ರಾ ಜಲಾಶಯದಲ್ಲಿ ಒಳಹರಿವು ಏರಿಕೆ
ಅದೇ ರೀತಿ ತೀರ್ಥಹಳ್ಳಿಯಲ್ಲಿ ತುಂಗಾ ನದಿ, ಲಕ್ಕವಳ್ಳಿ ಭದ್ರಾ ನದಿ ನೀರು ಹೆಚ್ಚಾಗಿದೆ. ಹೀಗಾಗಿ ಲಕ್ಕವಳ್ಳಿ ಭದ್ರಾ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ. ಇವೆರಡು ನದಿಗಳು ಶಿವಮೊಗ್ಗದಲ್ಲಿ ಕೂಡಿಕೊಂಡು ತುಂಗಭದ್ರಾ ನದಿಯಾಗಿ ಒಂದಾಗಿ ಹರಿಯುತ್ತವೆ. ಈ ನದಿಗಳ ಕೊಳ್ಳದಲ್ಲಿ ಉತ್ತಮ ಮಳೆ ಆಗಿದ್ದರಿಂದ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ.












Click it and Unblock the Notifications