ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಧಾರೆಯಿಂದ ಉತ್ತಮ ಮಳೆ, ಪಂಚರತ್ನದಿಂದ ರಾಜ್ಯದ ಅಭಿವೃದ್ಧಿ; ನಿಖಿಲ್

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ನವೆಂಬರ್ 3: ನಾಡಿನ ರೈತರು, ಬಡವರು, ಶ್ರಮಿಕರು ಹಾಗೂ ನಿರುದ್ಯೋಗಿಗಳ ಪರವಾಗಿರುವ ಪಂಚರತ್ನ ಯೋಜನೆಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ದಿಯಾಗಲಿದೆ ಎಂದು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ನಟ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿ ಕೆಲಗೆರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಆದಿಶಕ್ತಿ ಹುಲಿಕೆರಮ್ಮ ದೇವಿಯ ಉತ್ಸವ ದೇವತೆಯ ನೂತನ ದೇವಾಲಯದ ಉದ್ಘಾಟನೆ ಹಾಗೂ ನೂತನ ಗೋಪುರದ ಕಳಶ ಸ್ಥಾಪನಾ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಧಾನಸಭೆ ಚುನಾವಣೆ: ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರ: ಶಿವರಾಮೇಗೌಡವಿಧಾನಸಭೆ ಚುನಾವಣೆ: ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರ: ಶಿವರಾಮೇಗೌಡ

ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜಲಧಾರೆ ಯಾತ್ರೆ ಆರಂಭವಾದಾಗಿನಿಂದ ಈವರೆಗೂ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಅದೆಷ್ಟೋ ವರ್ಷಗಳಿಂದ ಬತ್ತಿ ಹೋಗಿದ್ದ ಕೆರೆ-ಕಟ್ಟೆಗಳು ತುಂಬಿ ತುಳುಕುತ್ತಿವೆ. ಅದರಲ್ಲೂ ನಾಗಮಂಗಲದಲ್ಲಿ ಜೆಡಿಎಸ್ ಕಾರ್ಯಕ್ರಮವೆಂದರೆ ಸಾಕು ಮಳೆಯ ಸಿಂಚನದ ಶುಭ ಸೂಚನೆ ಇದ್ದೇ ಇರುತ್ತದೆ ಎಂದರು.

ಗ್ರಾಮಸ್ಥರ ಪರಿಶ್ರಮದಿಂದ ಇಂತಹ ಒಂದು ಉತ್ತಮವಾದ ದೇವಸ್ಥಾನ ನಿರ್ಮಾಣವಾಗಿದೆ. ಶಕ್ತಿ ದೇವತೆಯ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ನಾನು ಭಾಗಿಯಾಗಿರುವುದು ನನ್ನ ಸೌಭಾಗ್ಯ. ಈ ಕಾರ್ಯಕ್ರಮಕ್ಕೆ ಮೊದಲು ದೇವೇಗೌಡರು, ನಂತರ ಕುಮಾರಸ್ವಾಮಿ ಅವರು ನಿಗದಿಯಾಗಿದ್ದರು. ಆದರೆ ಅನಿವಾರ್ಯವಾಗಿ ನನಗೆ ಇಂತಹ ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಆ ದೇವಿಯೇ ನನ್ನನ್ನು ಕರೆಸಿಕೊಂಡಿರುವ ನಂಬಿಕೆ ನನಗಾಗಿದೆ ಎಂದು ಹೇಳಿದರು.

2023ಕ್ಕೆ ಜೆಡಿಎಸ್ ಸರಕಾರ ಬರುತ್ತೆ

2023ಕ್ಕೆ ಜೆಡಿಎಸ್ ಸರಕಾರ ಬರುತ್ತೆ

2023ಕ್ಕೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂದೇ ಬರುತ್ತದೆ. ಅಂತಹ ಸಂದರ್ಭದಲ್ಲಿ ಪಂಚರತ್ನ ಯೋಜನೆ ಅನುಷ್ಠಾನವಾಗುವುದು ಖಚಿತ. ಇದರಿಂದ ರೈತರು, ಬಡವರು, ಶ್ರಮಿಕರು ಹಾಗೂ ನಿರುದ್ಯೋಗಿ ಯುವಶಕ್ತಿಗೆ ಮಹತ್ತರವಾದ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ದೇವೇಗೌಡರ ಕುಟುಂಬದ ಗೌರವಕ್ಕೆ ಸಾಕ್ಷಿಯಾದ ಕಾರ್ಯಕ್ರಮ

ದೇವೇಗೌಡರ ಕುಟುಂಬದ ಗೌರವಕ್ಕೆ ಸಾಕ್ಷಿಯಾದ ಕಾರ್ಯಕ್ರಮ

ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಸುರೇಶ್‌ಗೌಡ, ನಾಗಮಂಗಲಕ್ಕೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಈ ಹಿಂದೆ 2018ರ ಚುನಾವಣೆ ಸಂದರ್ಭದಲ್ಲಿ ದೇವೇಗೌಡರು ಮತ್ತು ಕುಮಾರಣ್ಣರವರ ಮೇಲೆ ನೀವು ತೋರಿದ ಪ್ರೀತಿಗೆ ನಾನು ಪುಳಕಿತನಾಗಿದ್ದೆ. ಅದೇ ರೀತಿ ಈ ದಿನ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಆಗಮಿಸುವಾಗಲೂ ದಾರಿಯುದ್ದಕ್ಕೂ ನೀವು ತೋರಿದ ಅಭಿಮಾನ ಆ ಕುಟುಂಬದ ಮೇಲೆ ನೀವಿಟ್ಟಿರುವ ಗೌರವಕ್ಕೆ ಸಾಕ್ಷಿಯಾಗಿದೆ ಎಂದರು.

ಎಚ್‌ಡಿಕೆ ಸಿಎಂ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ

ಎಚ್‌ಡಿಕೆ ಸಿಎಂ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ

ನಾನು ಈ ದಿನ ಆದಿಶಕ್ತಿ ಹುಲಿಕೆರಮ್ಮ ದೇವಿಯ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ. ಕುಮಾರಣ್ಣರಿಗೆ ದೈವಶಕ್ತಿ ಇದೆ. 2023ರ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದ ಶಾಸಕರು, ಯಾವುದೇ ಕಾರಣಕ್ಕೂ ನೀವು ಕೊಡುವ ಅಧಿಕಾರವನ್ನು ಕಳೆದುಕೊಳ್ಳುವಂತಹ ಸಂಕಷ್ಟಕ್ಕೆ ಪುನಃ ಸಿಲುಕಬೇಡಿ. ಮಾಡುವುದಾದರೆ ಯೋಗ್ಯರ ಸಹವಾಸ ಮಾಡಿಎಂದು ಪರೋಕ್ಷವಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದರು.

ಕಳೆದ ಮೂರುವರೆ ವರ್ಷಗಳಿಂದಲೂ ವಿರೋಧ ಪಕ್ಷದ ಶಾಸಕನಾಗಿದ್ದರೂ ಕ್ಷೇತ್ರದಲ್ಲಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ನಾಗಮಂಗಲದ ಸರ್ವತೋಮುಖ ಅಭಿವೃದ್ದಿಯ ನನ್ನ ಉದ್ದೇಶ ಈಡೇರಲು ನಿಮ್ಮಗಳ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಆಶೀರ್ವಾದ ಹಾರೈಕೆ ಇರಲಿ ಎಂದರು.

ಕನ್ನಡ ಧ್ವಜಾರೋಹಣ ನೆರೆವೇರಿಸಿದ ನಿಖಿಲ್

ಕನ್ನಡ ಧ್ವಜಾರೋಹಣ ನೆರೆವೇರಿಸಿದ ನಿಖಿಲ್

ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಜಿ.ನಗರದಿಂದ ಗೋವಿಂದಘಟ್ಟ ಮಾರ್ಗವಾಗಿ ತೆರೆದ ವಾಹನದಲ್ಲಿ ನಿಖಿಲ್‌ರವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಗೋವಿಂದಘಟ್ಟ ಗ್ರಾಮದ ಸರ್ಕಾರಿ ಶಾಲೆಯಲ್ಲಿನ ಮಕ್ಕಳನ್ನು ಮಾತನಾಡಿಸಿದ ನಿಖಿಲ್, ಮೂಡಲಮೆಳ್ಳಹಳ್ಳಿ ಗ್ರಾಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.

ಶಾಸಕ ಸುರೇಶ್‌ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಡಿ. ಟಿ. ಶ್ರೀನಿವಾಸ್, ಕೆ. ಆರ್. ಪೇಟೆ ಜೆಡಿಎಸ್ ಮುಖಂಡ ಮಂಜು, ಜೆಡಿಎಸ್ ಮುಖಂಡ ಜವರನಹಳ್ಳಿ ಗೌರೀಶ್, ನೆಲ್ಲಿಗೆರೆ ಬಾಲು ಹಾಗೂ ಪುರಸಭೆ ಸದಸ್ಯ ಶಂಕರಲಿಂಗೇಗೌಡ ಸೇರಿದಂತೆ ಹಲವರು ಜೊತೆಗಿದ್ದರು.

English summary
Karnataka will developed under JD(S) pancharatna rath yatra yojana saud JD(S) youth wing president Nikhil Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X