karnataka elections 2023: ಮಂಡ್ಯದಲ್ಲಿ ಚುನಾವಣಾಧಿಕಾರಿಗಳ ಪ್ರತಿಭಟನೆ
ಮಂಡ್ಯ ಮೇ 9: ಮಂಡ್ಯದಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ನಿಗಧಿಯಾಗಿದ್ದ ಚುನಾವಣಾ ಅಧಿಕಾರಿಗಳು ಪ್ರತಿಭಟನೆ ಮಾಡಿರುವುದು ಬೆಳಕಿಗೆ ಬಂದಿದೆ. ಊಟದ ವ್ಯವಸ್ಥೆ ಸರಿಯಾಗಿ ಮಾಡಿಲ್ಲ ಎಂದು ಚುನಾವಣಾಧಿಕಾರಿಗಳು ಗಲಾಟೆ ಮಾಡಿದ್ದಾರೆ. ಕರ್ತವ್ಯಕ್ಕೆ ಹಾಜಾರಾಗುವುದಿಲ್ಲ ಎಂದು ಅಧಿಕಾರಿಗಳು ಪಟ್ಟು ಹಿಡಿದಿರುವುದು ಕಂಡುಬಂದಿದೆ.
ಬುಧವಾರ ಮೇ 10ರಂದು ರಾಜ್ಯ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯಲಿದೆ. ಹೀಗಾಗಿ ಇಂದಿನಿಂದಲೇ (ಮೇ 9) ಚುನಾವಣಾ ಅಧಿಕಾರಿಗಳನ್ನು ಬೂತ್‌ಗಳಿಗೆ ಕಳುಹಿಸುವ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಆದರೆ ಮಂಡ್ಯದಲ್ಲಿ ಚುನಾವಣಾ ಅಧಿಕಾರಿಗಳು ಗಂಭೀರ ಆರೋಪವನ್ನು ಮಾಡಿದ್ದಾರೆ.

'ವ್ಯವಸ್ಥಿತವಾದ ಊಟದ ವ್ಯವಸ್ಥೆ ಇಲ್ಲ, 50% ರಷ್ಟು ಚುನಾವಣಾ ಅಧಿಕಾರಿಗಳಿಗೆ ಊಟದ ವ್ಯವಸ್ಥೆಯೇ ಇಲ್ಲ. ಅರ್ದಮರ್ಧ ಬೆಂದ ಅನ್ನ ಹಾಕಿದ್ದಾರೆ. ಇದನ್ನು ನಾಯಿ ಕೂಡ ಮೂಸು ನೋಡಲ್ಲ' ಎಂದು ಚುನಾವಣಾ ಅಧಿಕಾರಿಗಳು ಆರೋಪ ಮಾಡಿದ್ದಾರೆ.
ಊಟಕ್ಕಾಗಿ ಮೂರು ಗಂಟೆ ಕಾದಿದ್ದೇವೆ. ಮೂರು ಗಂಟೆ ಬಳಿಕ ಅರ್ದಮರ್ದ ಬೆಂದ ಅನ್ನ ನೀಡಿದ್ದಾರೆ. ನಾವೇನ್ ಪುಕ್ಕಟೆ ಕೆಲಸಾ ಮಾಡ್ತೀವಾ? ನಮಗಾಗಿ ಇರುವ ಹಣ ಎಲ್ಲ ಏನು ಮಾಡುತ್ತಿದ್ದಾರೆ? ಸರಿಯಾದ ಊಟ ನೀಡದೇ ಇದ್ದಲ್ಲಿ ನಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಚುನಾವಣಾಧಿಕಾರಿಗಳು ಆಕ್ರೋಶ ಹೊರಹಾಕಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಮತದಾನ ಮಾಡಬೇಕೆಂಬ ಕಾರಣಕ್ಕಾಗಿ ಚುನಾವಣಾ ಆಯೋಗ ವಿಧವಿಧವಾಗಿ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದೆ. ಆದರೆ ಮತದಾರರನ್ನು ಸೆಳೆಯುವ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ಚುನಾವಣಾ ಕರ್ತವ್ಯದಲ್ಲಿರುವ ಚುನಾವಣಾ ಅಧಿಕಾರಿಗಳನ್ನೇ ಮರೆತುಬಿಟ್ಟಂತೆ ಕಾಣಿಸುತ್ತಿದೆ. ಸರಿಯಾದ ವ್ಯವಸ್ಥೆ ಇಲ್ಲದೆ ಪ್ರತೀ ಬಾರಿ ಚುನಾವಣೆ ಸಂದರ್ಭಗಳಲ್ಲಿ ಅಧಿಕಾರಿಗಳು ಸಂಕಷ್ಟದಲ್ಲೇ ಮತದಾನ ನಡೆಸುತ್ತಿರುವುದು ದರಾದೃಷ್ಟಕರ.












Click it and Unblock the Notifications