ಪೈಪೋಟಿ ಅಖಾಡದಲ್ಲಿ ಚೆಲುವರಾಯಸ್ವಾಮಿ ಆಟಕ್ಕೆ ಚಿತ್ತಾದ ಜೆಡಿಎಸ್

By: ಮಂಡ್ಯ ಪ್ರತಿನಿಧಿ
Subscribe to Oneindia Kannada
   ರೆಬೆಲ್ ಶಾಸಕ ಎನ್ ಚೆಲುವರಾಯಸ್ವಾಮಿ ಆಟಕ್ಕೆ ಜೆಡಿಎಸ್ ಸುಸ್ತು | Oneindia Kannada

   ನಾಗಮಂಗಲ (ಮಂಡ್ಯ ಜಿಲ್ಲೆ), ಫೆಬ್ರವರಿ 9: ಜೆಡಿಎಸ್ ನ ಭಿನ್ನಮತೀಯ ಶಾಸಕ ಚೆಲುವರಾಯ ಸ್ವಾಮಿ ತಮ್ಮ ರಾಜಕೀಯ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಜೆಡಿಎಸ್ ಗೆ ಈ ಘಟನೆಯಿಂದ ಭಾರೀ ಮುಖಭಂಗವಾಗಿದೆ. ಅಸಲಿಗೆ ಆಗಿದ್ದೇನು ಗೊತ್ತಾ? ಇಲ್ಲಿನ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನದಲ್ಲಿ ತಮ್ಮ ಬೆಂಬಲಿಗ ಅಭ್ಯರ್ಥಿಯನ್ನು ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ.

   ಮುಖ್ಯಮಂತ್ರಿ ಆಗೋದು ಕುಮಾರಸ್ವಾಮಿಯ ಭ್ರಮೆ: ಚೆಲುವರಾಯ ಸ್ವಾಮಿ

   ನಾಗಮಂಗಲದ ಶಾಸಕ ಚೆಲುವರಾಯ ಸ್ವಾಮಿ ತಮ್ಮ ಬೆಂಬಲಿಗರಾದ ದಾಸೇಗೌಡ ಅವರನ್ನು ಆಯ್ಕೆ ಮಾಡಿಸುವಲ್ಲಿ ಸಫಲರಾಗಿದ್ದಾರೆ. ಒಟ್ಟು 18 ಸದಸ್ಯ ಬಲದ ನಾಗಮಂಗಲ ತಾಲೂಕು ಪಂಚಾಯಿತಿಯಲ್ಲಿ ದಾಸೇಗೌಡರಿಗೆ 14, ಜೆಡಿಎಸ್ ಅಭ್ಯರ್ಥಿ ಹೇಮರಾಜ್ ಗೆ 4 ಮತಗಳು ಸಿಕ್ಕವು ಆ ಮೂಲಕ. ಚೆಲುವರಾಯಸ್ವಾಮಿ ಬೆಂಬಲಿಗ ದಾಸೇಗೌಡರು ಭರ್ಜರಿ ಗೆಲುವು ಪಡೆದರು.

   JDS rebel leader Cheluvarayaswamy upper hand in Taluk Panchayat election

   ಇದರಿಂದ ಜೆಡಿಎಸ್ ಗೆ ತೀವ್ರ ಮುಖಭಂಗವಾಗಿದೆ. ಜೆಡಿಎಸ್ ಪಕ್ಷದ ವಿಪ್ ಗೂ ತಲೆ ಕೆಡಿಸಿಕೊಳ್ಳದ ತಾಲೂಕು ಪಂಚಾಯಿತಿ ಸದಸ್ಯರು, ದಾಸೇಗೌಡರನ್ನು ಬೆಂಬಲಿಸಿದ್ದಾರೆ. ಜೆಡಿಎಸ್ ಪರವಾಗಿ 16 ಚುನಾಯಿತ ಸದಸ್ಯರು ಇದ್ದಾರೆ. ಆ ಪೈಕಿ 14 ಜೆಡಿಎಸ್ ಸದಸ್ಯರು ವಿಪ್ ಉಲ್ಲಂಘಿಸಿ ದಾಸೇಗೌಡರಿಗೆ ಮತ ಹಾಕಿದ್ದರೆ, ಇಬ್ಬರು ಕಾಂಗ್ರೆಸ್ ಸದಸ್ಯರು ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   JDS rebel leader and Nagamangala MLA N Cheluvarayaswamy upper hand in Nagamangala (Mandya district) Taluk Panchayat election. His supporter Dasegowda elected as president.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ