ತಮಿಳುನಾಡಿಗೆ ನೀರು ಕೊಟ್ಟರೆ ರಾಜ್ಯ ಬಂದ್: ವಾಟಾಳ್ ನಾಗರಾಜ್

ಮಂಡ್ಯ, ಮೇ 29: ಕೆ.ಆರ್‌.ಎಸ್‌ ನಲ್ಲಿ ಒಳಹರಿವು ಹೆಚ್ಚಾದರೆ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಸೂಚಿಸಿರುವುದನ್ನು ವಿರೋಧಿಸಿ ಮುಂದಿನ ಸೋಮವಾರ ಕೆ.ಆರ್‌.ಎಸ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

ಕೆ.ಆರ್‌.ಎಸ್‌ಗೆ ಒಳಹರಿವು ಹೆಚ್ಚಾದರೂ ತಮಿಳುನಾಡಿಗೆ ನೀರು ಬಿಡಬಾರದು, ಹಾಗೊಂದು ವೇಳೆ ಸರ್ಕಾರವು ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯ ಬಂದ್‌ಗೆ ಕರೆ ನೀಡಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ನಮ್ಮ ಜನರು ನೀರಿಲ್ಲದೆ ಸಂಕಷ್ಟದಲ್ಲಿರುವಾಗ ತಮಿಳುನಾಡಿಗೆ ನೀರು ಬಿಡಿ ಎಂದು ಹೇಳಿರುವ ಪ್ರಾಧಿಕಾರದ ಸೂಚನೆ ಅವೈಜ್ಞಾನಿಕ, ಅಮಾನವೀಯ ಎಂದು ವಾಟಾಳ್ ನಾಗರಾಜ್ ಖಂಡಿಸಿದರು.

If government leave water to Tamil Nadu we will call for state bandh: Vatal Nagraj

ಒಳಹರಿವು ಹೆಚ್ಚಿದರೆ ತಮಿಳುನಾಡಿಗೆ 9.19 ಟಿಎಂಸಿ ಕಾವೇರಿ ‌ನೀರು ಬಿಡುಗಡೆ ಮಾಡುವಂತೆ ಕಾವೇರಿ ಪ್ರಾಧಿಕಾರವು ನಿನ್ನೆ ಆದೇಶ ಹೊರಡಿಸಿದೆ. ಆದೇಶಕ್ಕೆ ಮಂಡ್ಯ, ಮೈಸೂರು, ಬೆಂಗಳೂರುಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ನಿನ್ನೆ ಮಂಡ್ಯ, ಮೈಸೂರುಗಳಲ್ಲಿ ಪ್ರತಿಭಟನೆಗಳು ಮಾಡಲಾಗಿದೆ.

ತಮಿಳುನಾಡಿಗೆ ನೀರು ಬಿಟ್ಟಿದ್ದೇ ಆದಲ್ಲಿ ಜನ ದಂಗೆ ಏಳುತ್ತಾರೆ ಎಂದು ಹಿರಿಯ ರೈತ ಮುಖಂಡ ಮಾದೇಗೌಡ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+