ಮಂಡ್ಯದಿಂದಲೇ ನನ್ನ ಸ್ಪರ್ಧೆ, ಮಗನ ಸಿನಿಮಾ ಸದ್ಯವೇ ಆರಂಭ: ಅಂಬಿ

Recommended Video

      ಮಂಡ್ಯದಿಂದಲ್ಲೇ ನನ್ನ ಸ್ಪರ್ಧೆ, ಮಗನ ಸಿನಿಮಾ ಸದ್ಯವೇ ಆರಂಭ : ಅಂಬಿ | Oneindia Kannada

      ಮಂಡ್ಯ, ಅಕ್ಟೋಬರ್ 20: "ಈ ಬಾರಿ ಮಂಡ್ಯದಿಂದಲೇ ಸ್ಪರ್ಧಿಸುವ ಉದ್ದೇಶ ಇದೆ. ಆದರೆ ಟಿಕೆಟ್ ಬಗ್ಗೆ ನಿರ್ಧಾರ ಮಾಡಬೇಕಿರುವುದು ಹೈಕಮಾಂಡ್. ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸುತ್ತೇನೆ" ಎಂಬ ಮಾತುಗಳನ್ನು ಮಾಜಿ ಸಚಿವ- ನಟ ಅಂಬರೀಶ್ ಶುಕ್ರವಾರ ಮಂಡ್ಯದಲ್ಲಿ ಮಾಧ್ಯಮಗಳೆದುರು ಹೇಳಿದ್ದಾರೆ.

      "ನನ್ನ ಕುಟುಂಬದಿಂದ ಬೇರೆ ಯಾರೂ ಸ್ಪರ್ಧೆ ಮಾಡುವುದಿಲ್ಲ. ನನ್ನ ಮಗ ಅಭಿಷೇಕ್ ಅಭಿನಯದ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಮಾತ್ರ ಸ್ಪರ್ಧಿಸುತ್ತೇನೆ" ಎಂದು ಅವರು ಹೇಳಿದ್ದಾರೆ. ಅಂಬರೀಶ್ ಅವರ ಪತ್ನಿ ಸುಮಲತಾ ಬಿಜೆಪಿ ಸೇರುತ್ತಾರೆ ಹಾಗೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಕೆಲ ಕಾಲ ಹರಿದಾಡುತ್ತಿತ್ತು.

      Ambareesh family

      ಸಚಿವ ಸಂಪುಟದಿಂದ ಅಂಬರೀಶ್ ರನ್ನು ಕೈ ಬಿಟ್ಟ ನಂತರ ಅವರು ಕಾಂಗ್ರೆಸ್ ತೊರೆಯುವ ಬಗ್ಗೆ ಕೂಡ ಮಾತುಗಳು ಕೇಳಿಬಂದಿದ್ದವು. ಬಿಜೆಪಿಯ ಪ್ರಮುಖ ನಾಯಕರೊಬ್ಬರು ಅಂಬಿಯನ್ನು ಕಮಲ ಪಕ್ಷಕ್ಕೆ ಸೆಳೆಯಲು ದುಬೈನಲ್ಲಿ ಭೇಟಿಯಾಗಿದ್ದಾರೆ ಎಂಬ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು. ಒಟ್ಟಾರೆ ಅಂಬರೀಶ್ ಕಾಂಗ್ರೆಸ್ ನಿಂದಲೇ ಹಾಗೂ ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ಹೇಳಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+