ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಕ್ಷ ಸೇರ್ಪಡೆಗೆ ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸುತ್ತೇನೆ; ಸುಮಲತಾ ಅಂಬರೀಶ್

|
Google Oneindia Kannada News

ಮಂಡ್ಯ, ಏಪ್ರಿಲ್ 28: ಪಕ್ಷ ಸೇರುವ ಸಮಯದಲ್ಲಿ ಯಾವ ಪಕ್ಷವನ್ನು ಸೇರುತ್ತೇನೆ ಎಂದು ನಾನೇ ಖುದ್ದಾಗಿ ಹೇಳುತ್ತೇನೆ. ಅದನ್ನು ಬೇರೆಯವರಿಂದ ಏಕೆ ಹೇಳಿಸಲಿ. ಚುನಾವಣೆಗೆ ಇನ್ನೂ ಎರಡು ವರ್ಷವಿದ್ದು, ಈಗಲೇ ಯಾವುದಾದರೂ ಪಕ್ಷ ಸೇರಲೇಬೇಕೆಂಬ ತುರ್ತು ಅವಶ್ಯಕತೆ ಏನಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದರು.

Recommended Video

ರಾಜಕೀಯಕ್ಕೆ ಬರೋದು ಬಿಡೋದು ಅವನಿಗೆ ಬಿಟ್ಟಿದ್ದು ! | Oneindia Kannada

ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ, ಯಾವ ಪಕ್ಷ ಸೇರಬೇಕು ಎನ್ನುವುದು ನನ್ನೊಬ್ಬಳ ನಿರ್ಧಾರವಲ್ಲ. ಅಂಬರೀಶ್ ಅಭಿಮಾನಿಗಳು, ಕಾರ್ಯಕರ್ತರು, ಜಿಲ್ಲೆಯ ಜನರ ಆಶಯದಂತೆ ತೀರ್ಮಾನ ಕೈಗೊಳ್ಳುತ್ತೇನೆ. ಜನರಿಂದ ನಾನೂ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ನಿಮಗೆ ಗೌರವ-ಮರ್ಯಾದೆ ಸಿಗುವ ಪಕ್ಷವನ್ನು ಸೇರುವಂತೆ ಹೇಳುತ್ತಿದ್ದಾರೆ. ಸಮಯ ಬಂದಾಗ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳಿದರು.

ಮದ್ದೂರಿನಲ್ಲಿ ಅಭಿಷೇಕ್ ಅಂಬರೀಷ್? ಮಗನ ಭವಿಷ್ಯಕ್ಕಾಗಿ ಬಿಜೆಪಿಯತ್ತ ಹೊರಟರಾ ಸಮಲತಾ?ಮದ್ದೂರಿನಲ್ಲಿ ಅಭಿಷೇಕ್ ಅಂಬರೀಷ್? ಮಗನ ಭವಿಷ್ಯಕ್ಕಾಗಿ ಬಿಜೆಪಿಯತ್ತ ಹೊರಟರಾ ಸಮಲತಾ?

ಕೇಂದ್ರ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿಯಾಗುವುದು ಸಹಜ
ನಾನು ಇದುವರೆಗೂ ನನಗೆ ಅಥವಾ ನನ್ನ ಮಗನಿಗೆ ಟಿಕೆಟ್ ಕೊಡುವಂತೆ ಯಾವುದೇ ಪಕ್ಷದ ಬಾಗಿಲು ತಟ್ಟಿಲ್ಲ. ಪಕ್ಷ ಸೇರ್ಪಡೆ ವಿಚಾರವಾಗಿಯೂ ಯಾವುದೇ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.

 I will Collect Opinion of The People For Party Joining; MP Sumalatha Ambarish

ಪಕ್ಷ ಸೇರುವ ಊಹಾಪೋಹಗಳಿಗೆಲ್ಲಾ ನಾನು ಉತ್ತರ ಕೊಡುವುದಿಲ್ಲ. ಮಂಡ್ಯ ಜಿಲ್ಲೆಯ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿಯಾಗುವುದು ಸಹಜ. ಅದಕ್ಕೆಲ್ಲಾ ಪಕ್ಷ ಸೇರ್ಪಡೆ ಉದ್ದೇಶದಿಂದಲೇ ಭೇಟಿಯಾಗಿದ್ದಾರೆಂದು ಬಣ್ಣ ಕಟ್ಟಿದರೆ ನಾನು ಹೊಣೆಯಲ್ಲ ಎಂದು ಖಡಕ್ ಆಗಿ ತಿಳಿಸಿದರು.

ಬಿಜೆಪಿ ಸಮಾವೇಶ ನನಗೆ ಗೊತ್ತಿಲ್ಲ
ನನ್ನ ಪಕ್ಷ ಸೇರ್ಪಡೆ ವಿಚಾರವಾಗಿ ಜನರು ತಲೆಕೆಡಿಸಿಕೊಂಡಿಲ್ಲ. ನಾನೂ ಆ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ. ಸುಮಲತಾ ಈ ಪಕ್ಷ ಸೇರುತ್ತಾರೆ, ಆ ಪಕ್ಷ ಸೇರುತ್ತಾರೆ ಅಂತ ವದಂತಿಗಳು, ಗಾಸಿಪ್ ಹರಿದಾಡುತ್ತಿವೆ. ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಪಕ್ಷ ಸೇರ್ಪಡೆ ಬಗ್ಗೆ ಜನರಿಗೆ ಸ್ಪಷ್ಟತೆ ನೀಡಬೇಕು ಅವಾಗ ಹೇಳುತ್ತೇನೆ ಎಂದರು.

ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಮಂಡ್ಯದಲ್ಲಿ ಸಮಾವೇಶ ನಡೆಸುತ್ತಿರುವ ವಿಚಾರ ನನಗೆ ಗೊತ್ತಿಲ್ಲ. ಸಮಾವೇಶಕ್ಕೆ ಬರುವಂತೆ ಯಾರೂ ನನಗೆ ಆಹ್ವಾನ ನೀಡಿಲ್ಲ. ಇಂತಹದ್ದೇ ಪಕ್ಷ ಸೇರುವಂತೆ ಯಾರೂ ನನ್ನ ಜೊತೆಗೆ ಮಾತನಾಡಿಲ್ಲ ಎಂದು ವಿವರಿಸಿದರು

 I will Collect Opinion of The People For Party Joining; MP Sumalatha Ambarish


ಪುತ್ರ ಅಭಿಷೇಕ್‌ಗೆ ಮದ್ದೂರು ವಿಧಾನಸಭೆ ಚುನಾವಣೆ ಟಿಕೆಟ್
ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಪುತ್ರ ಅಭಿಷೇಕ್ ಅಂಬರೀಶ್ ಸ್ಪರ್ಧಿಸಬೇಕೆಂಬ ಒತ್ತಡವಿರುವುದು ನಿಜ. ಆದರೆ, ರಾಜಕೀಯ ಪ್ರವೇಶಿಸುವ ಬಗ್ಗೆ ಅವನು ಕೈಗೊಳ್ಳುವ ನಿರ್ಧಾರಕ್ಕೆ ನಾನೆಂದೂ ಅಡ್ಡಿಪಡಿಸುವುದಿಲ್ಲ. ಆ ವಿಚಾರದಲ್ಲಿ ನನ್ನ ಹಸ್ತಕ್ಷೇಪವೂ ಇರುವುದಿಲ್ಲ. ಅದು ಅವನ ವೈಯಕ್ತಿಕ ನಿರ್ಧಾರವೆಂದು ಸುಮಲತಾ ಹೇಳಿದರು.

ಮದ್ದೂರು ಕ್ಷೇತ್ರದಲ್ಲಿ ಅಭಿಷೇಕ್ ಓಡಾಟ ಹೆಚ್ಚಾಗಿರುವ ಬಗ್ಗೆ ಪ್ರಶ್ನಿಸಿದಾಗ, ಅಭಿಷೇಕ್ ಚುನಾವಣೆಗೆ ಸ್ಪರ್ಧಿಸಬೇಕೆಂಬ ಉದ್ದೇಶದಿಂದ ಮದ್ದೂರು ಕ್ಷೇತ್ರದೊಳಗೆ ಓಡಾಡುತ್ತಿಲ್ಲ. ತನ್ನ ಊರಿನ ಮೇಲಿನ ಅಭಿಮಾನದಿಂದ ಓಡಾಡುತ್ತಿದ್ದಾನೆ ಎಂದು ಸಂಸದೆ ಸುಮಲತಾ ಪ್ರತಿಕ್ರಿಯಿಸಿದರು.

ಮದ್ದೂರು ಕ್ಷೇತ್ರದಲ್ಲಿ ಪಕ್ಷದ ಮುಖಂಡರ ಸಭೆ ನಡೆಸುತ್ತಿರುವ ಉದ್ದೇಶದ ಬಗ್ಗೆ ಕೇಳಿದ್ದಕ್ಕೆ, ಎರಡು ವರ್ಷದಿಂದ ಕೋವಿಡ್ ಕಾರಣದಿಂದ ಸಂಸದರ ನಿಧಿ ಕೊಟ್ಟಿರಲಿಲ್ಲ. ಈಗ ಆ ನಿಧಿಗೆ ಹಣ ಬಿಡುಗಡೆಯಾಗಿದ್ದು, ಕೆಲವರು ದೇವಸ್ಥಾನ, ಸಮುದಾಯ ಭವನ, ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಕೇಳಿದ್ದರು. ಅದನ್ನು ಹಂಚಿಕೆ ಮಾಡುವ ಸಲುವಾಗಿ ಸಭೆ ಕರೆದಿದ್ದೇನೆ ಎಂದು ಸ್ಪಷ್ಟಪಡಿಸಿದರು.

English summary
It is not my decision as to which party to join, I will take Ambarish fans, activists, people Opinion, Mandya MP Sumalatha Ambarish said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X