ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಜಾಬ್ ವಿವಾದ - ಏಕಾಏಕಿ ಸ್ಟಾರ್ ಆದ ಮುಸ್ಕಾನ್: ಮುಸ್ಲಿಂ ಮುಖಂಡರಿಂದ ಉಡುಗೊರೆ

|
Google Oneindia Kannada News

ಮಂಡ್ಯ ಫೆಬ್ರವರಿ 11: ಹಿಜಾಬ್ ವಿವಾದ ವಿಚಾರಕ್ಕೆ ಏಕಾಏಕಿ ಸ್ಟಾರ್ ಆದ ವಿದ್ಯಾರ್ಥಿನಿ ಮುಸ್ಕಾನ್‌ಗೆ ಸದ್ಯ ಮುಸ್ಲಿಂ ಮುಖಂಡರಿಂದ ಉಡುಗೊರೆಗಳು ಹರಿದು ಬರುತ್ತಿವೆ. ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಭೇಟಿ ನೀಡುತ್ತಿರುವ ಮುಸ್ಲಿಂ ಮುಖಂಡರು ಆಕೆಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ.

ಇಂದು ಮುಸ್ಕಾನ್ ನಿವಾಸಕ್ಕೆ ಭೇಟಿ ನೀಡಿದ ಎಂಎಲ್‌ಸಿ ಸಿಎಂ ಇಬ್ರಾಹಿಂ ಅವರು ಉಡುಗೊರೆ ನೀಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಒಬ್ಬ ಹುಡುಗಿ ಅಷ್ಟು ಜನ ಬಂದಾಗ ದಿಟ್ಟತನದಿಂದ ನಿಂತಳು. ಅದನ್ನು ಮೆಚ್ಚಿ ಉಡುಗೊರೆ ಕೊಟ್ಟರೆ ತಪ್ಪೇನಿದೆ. ನನಗೂ ಹೆಣ್ಣುಮಕ್ಕಳಿದ್ದಾರೆ. ಆಕೆಯ ಧೈರ್ಯವನ್ನು ಮೆಚ್ಚಿ ಉಡುಗೊರೆ ನೀಡಿದ್ದೇನೆ,'' ಎಂದಿದ್ದಾರೆ. ''ಆಕೆ ಕೂಗಿದ್ದು ಮಾತ್ರ ಪ್ರಚೋದನೆ ಆಗುತ್ತಾ? ಜೈ ಶ್ರೀರಾಮ್ ಅನ್ನೋದು ಪ್ರಚೋದನೆ ಆಗಲ್ವಾ. ಹರಹರ ಮಹದೇವ್ ಎನ್ನುತ್ತಾರೆ ಅದು ಪ್ರಚೋದನೆನಾ?,'' ಎಂದು ಪ್ರಶ್ನೆ ಮಾಡಿದರು.

ಹಿಜಾಬ್ ವಿವಾದ: 5 ಲಕ್ಷ ರೂ. ಘೋಷಿಸಿದ್ದ ಜಮಿಯತ್ ಉಲಮಾ-ಇ-ಹಿಂದ್ ವಿರುದ್ಧ ದೂರು
ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳು ಹಿಜಾಬ್ ಧರಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ಆಕೆಯನ್ನು ಸುತ್ತುವರಿದ ಕೆಲವರು 'ಜೈ ಶ್ರೀ ರಾಮ್' ಎಂದು ಕೂಗಲು ಪ್ರಾರಂಭಿಸಿದರು. ಇದಕ್ಕೆ ವಿದ್ಯಾರ್ಥಿನಿ ಕೂಡ 'ಅಲ್ಲಾ ಹು ಅಕ್ಬರ್' ಎಂದು ಪ್ರತಿಯಾಗಿ ಕೂಗಿದ್ದಾಳೆ. ಅಂದಿನಿಂದ ಈ ಹುಡುಗಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹುಡುಗಿಯ ಹೆಸರು ಮುಸ್ಕಾನ್. ಮಂಡ್ಯ ಪಿಇಎಸ್ ಕಾಲೇಜು ವಿದ್ಯಾರ್ಥಿನಿ. ಸಂಘಟನೆಯ ನಂತರ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಅಸೈನ್ಮೆಂಟ್ ಸಲ್ಲಿಸಲು ಕಾಲೇಜಿಗೆ ಹೋಗಿದ್ದೆ. ಈ ವೇಳೆ ಕೆಲವರು ಆಕೆಯನ್ನು ಸುತ್ತುವರಿದು ಬುರ್ಖಾ ತೆಗೆಯುವವರೆಗೂ ಆಕೆಯನ್ನು ಬಿಡುವುದಿಲ್ಲ ಎಂದು ಹೇಳಿದರು. ಅವಳು ಹಾಗೆ ಮಾಡಲು ನಿರಾಕರಿಸಿ ಆಕೆ ಮುಂದೆ ಹೋಗಿದ್ದಾಳೆ. ನಂತರ ಹುಡುಗರ ಗುಂಪು ಅವರನ್ನು ಹಿಂಬಾಲಿಸಿ 'ಜೈ ಶ್ರೀ ರಾಮ್' ಎಂದು ಕೂಗಲು ಪ್ರಾರಂಭಿಸಿದೆ. ಇದಕ್ಕೆ ವಿದ್ಯಾರ್ಥಿನಿ ಕೂಡ 'ಅಲ್ಲಾ ಹು ಅಕ್ಬರ್' ಎಂದು ಉತ್ತರಿಸಿದ್ದಾಳೆ. ಇದೊಂದೆ ಉತ್ತರ ಆಕೆಯ ಬಗ್ಗೆ ಭಾರತದಿಂದ ಪಾಕಿಸ್ತಾನದವರೆಗೆ ಚರ್ಚೆ ಕಾರಣವಾಗಿದೆ. ಇದೀಗ ಮುಸ್ಕಾನ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲವು ಪಾಕಿಸ್ತಾನಿ ಸಂಘಟನೆಗಳು ಆಕೆಯನ್ನು ಇಸ್ಲಾಮಿನ ಸಿಂಹಿಣಿ ಎಂದು ಕರೆದಿವೆ.

Hijab Controversy - Outbreak Stars Muskan: A Gift From Muslim Leaders

ಮಾತ್ರವಲ್ಲದೇ ರಾಜ್ಯದ ಮತ್ತು ಬೇರೆ ಬೇರೆ ರಾಜ್ಯದ ಮುಸ್ಲಿಂ ಮುಖಂಡರು ವಿದ್ಯಾರ್ಥಿಯ ಧೈರ್ಯವನ್ನು ಮೆಚ್ಚಿ ಖಾಸಗಿ ಗಿಫ್ಟ್‌ಗಳನ್ನು ನೀಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆ ನೀಡುತ್ತಿದ್ದಾರೆ. ಇನ್ನೂ ಇಂದು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಕಾನ್​ ಮನೆಗೆ ಮಹಾರಾಷ್ಟ್ರ ರಾಜ್ಯದ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೀಶನ್ ಸಿದ್ಧಿಕಿ ಭೇಟಿ ನೀಡಿದ್ದಾರೆ. ಈ ವೇಳೆ ಮುಸ್ಕಾನ್​ಗೆ ಐಪೋನ್, ಸ್ಮಾರ್ಟ್ ವಾಚ್ ಉಡುಗೊರೆ ನೀಡಿದ್ದಾರೆ.

Hijab Controversy - Outbreak Stars Muskan: A Gift From Muslim Leaders

ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್ ನಿವಾಸಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ಶಾಸಕ, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜೀಶನ್ ಸಿದ್ಧಿಕಿ, '' ಈ ಬಗ್ಗೆ ನನಗೆ ಗೊತ್ತಾಯ್ತು. ಆಗ ತುಂಬಾ ಗರ್ವ ಅನಿಸಿತು. ಅಷ್ಟು ಜನ ಅವರ ಎದುರು ಇದ್ದರೂ ಅಲ್ಲಾಹು ಅಕ್ಬರ್ ಅಂತ ಕೂಗಿದ್ದಾರೆ. ಹಿಜಾಬ್ ಹಾಕಿಕೊಳ್ಳೋದು ಅವರ ಹಕ್ಕು. ಅವರ ಹಕ್ಕಿನ ಬಗ್ಗೆ ಧೈರ್ಯದಿಂದ ಧ್ವನಿ ಎತ್ತಿದ್ದಾರೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗರ್ವ ಪಡುತ್ತೆ. ಎಲ್ಲಾ ಮಹಿಳೆಯರು ಈಕೆ ರೀತಿಯಲ್ಲೇ ಧೈರ್ಯದಿಂದ ಸಮಾಜವನ್ನು ಎದುರಿಸಬೇಕು,'' ಎಂದರು.

'ಜೈ ಶ್ರೀರಾಮ್ 'ಎಂದ ವಿದ್ಯಾರ್ಥಿಗಳು 'ಅಲ್ಲಾ ಹು ಅಕ್ಬರ್' ಎಂದ ವಿದ್ಯಾರ್ಥಿನಿ ಮುಸ್ಕಾನ್
ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಜಮಿಯತ್ ಉಲಾಮಾ-ಇ-ಹಿಂದ್ ಸಂಘಟನೆ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. ಇದಾದ ಬಳಿಕ ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ , ಮುಸ್ಕಾನ್​ಗೆ ಧೈರ್ಯ ಹೇಳಿ 1 ಲಕ್ಷ ರೂಪಾಯಿಯ ಚೆಕ್ ವಿತರಣೆ ಮಾಡಿದ್ದರು. ಇದೀಗ ಮಹಾರಾಷ್ಟ್ರ ಶಾಸಕ ಜೀಶನ್ ಸಿದ್ಧಿಕಿ ಐಪೋನ್, ಸ್ಮಾರ್ಟ್ ವಾಚ್ ಉಡುಗೊರೆ ನೀಡಿದ್ದಾರೆ.

Recommended Video

ಹಿಜಾಬ್ ವಿವಾದ: ಮಧ್ಯಂತರ ಆದೇಶ ಕೊಟ್ಟ ಹೈ ಕೋರ್ಟ್ ಹೇಳಿದ್ದೇನು? | Oneindia Kannada

English summary
The Muslim student, who is the star of the outbreak of the hijab controversy, is currently being gifted by Muslim leaders. A Muslim leader visiting a student's Muskan home is giving her expensive gifts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X