ಕೆ.ಆರ್.ಪೇಟೆ ತಲುಪಿದ ಹೇಮಾವತಿ ನೀರು, ಜನರ ಮುಖದಲ್ಲಿ ಮಂದಹಾಸ

ಮಂಡ್ಯ, ಸೆಪ್ಟೆಂಬರ್‌, 11: ಕೊನೆಗೂ ಜಿಲ್ಲೆಯ ಕೆ.ಆರ್.ಪೇಟೆ ನಗರದ ಜನರ ಬಹು ದಿನದ ಕನಸು ನನಸಾಗಿ ಶುದ್ಧ ಕುಡಿಯುವ ನೀರು ದೊರೆಯುವ ಲಕ್ಷಣಗಳು ಕಂಡುಬಂದಿವೆ. ಈಗಾಗಲೇ ಈ ಸಂಬಂಧ ನಡೆಯುತ್ತಿದ್ದ ಯೋಜನೆಯ ಕಾಮಗಾರಿ ಅಂತಿಮ ಘಟ್ಟವನ್ನು ತಲುಪಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೆ.ಆರ್.ಪೇಟೆ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ 3ನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು 28ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿದ್ದು ಅದು ಸಕಾರಗೊಂಡಿದೆ.

hemavati-river-water-reached-to-kr-pete

ಹೇಮಾವತಿ ನದಿ ದಡದಲ್ಲಿದ್ದರೂ ಕೆ.ಆರ್.ಪೇಟೆ ನಗರಕ್ಕೆ ಸಮರ್ಪಕವಾಗಿ ಶುದ್ಧ ನೀರು ಸರಬರಾಜು ಆಗುತ್ತಿಲ್ಲ ಎಂಬ ಆರೋಪಗಳಿದ್ದವು. ನಗರ ಬೆಳೆದಂತೆಲ್ಲ ಹಿಂದೆ ಮಾಡಿದ್ದ ಯೋಜನೆಗಳ ಮೂಲಕ ನೀರನ್ನು ತಲುಪಿಸುವುದು ಸುಲಭದ ಕೆಲಸವಾಗಿರಲಿಲ್ಲ. ಹೀಗಾಗಿ ಮೂರನೇ ಹಂತದ ನೀರಿನ ಯೋಜನೆಯನ್ನು ಮುಂದಿನ ತಲೆಮಾರನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಲಾಗಿತ್ತು.

ಬಾಣಂತಿಗುಡ್ಡದಲ್ಲಿ ಅತ್ಯಾಧುನಿಕ ಶುದ್ಧೀಕರಣ ಘಟಕ

ಆದರೆ ಈ ಯೋಜನೆ ಅಷ್ಟು ಸುಲಭವಾಗಿ ಅನುಷ್ಠಾನಗೊಂಡಿರಲಿಲ್ಲ. ಇದರ ಹಿಂದೆ ದೊಡ್ಡ ದೊಡ್ಡ ಹೋರಾಟಗಳೇ ನಡೆದಿವೆ. ನಗರ ಹಣಕಾಸು ಮೂಲ ಸೌಕರ್ಯ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಅವರ ಹೋರಾಟದ ಫಲವಾಗಿ ಈ ಯೋಜನೆ ಸುಮಾರು 28 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದಿದೆ ಎನ್ನುವುದನ್ನು ನಾವು ಸ್ಮರಿಸಲೇಬೇಕಾಗುತ್ತದೆ.

ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಸಾಧುಗೋನಹಳ್ಳಿಯ ಬಳಿ ಬಾಣಂತಿಗುಡ್ಡದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಿರುವ ನೀರು ಶುದ್ಧೀಕರಣ ಘಟಕವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆ.ಆರ್.ಪೇಟೆ ಪಟ್ಟಣದ ಮುತ್ತುರಾಯಸ್ವಾಮಿ ದೇವಾಲಯದ ಬಳಿ ನಿರ್ಮಿಸಿರುವ 5ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ವಾಟರ್ ಟ್ಯಾಂಕಿನಲ್ಲಿ ಸಂಗ್ರಹವಾಗುವ ನೀರು ಪಟ್ಟಣದ ವಿವಿಧ ಬಡಾವಣೆಗಳಿಗೆ ಸರಬರಾಜಾಗುತ್ತಿದೆ.

ಹೇಮಾವತಿ ನದಿಯಿಂದ ಬರುವ ನೀರು

ಇಲ್ಲಿಗೆ ನೀರನ್ನು ಕೆ.ಆರ್.ಪೇಟೆ ಪಟ್ಟಣದಿಂದ 10ಕಿಲೋ ಮೀಟರ್ ದೂರದಲ್ಲಿರುವ ಹೇಮಗಿರಿಯ ಬಳಿ ಹೇಮಾವತಿ ನದಿಯಿಂದ ನೀರನ್ನು ಪಂಪ್ ಮಾಡಿ ಸರಬರಾಜು ಮಾಡಲಾಗುತ್ತಿದೆ. ಈ ಯೋಜನೆಯಿಂದ ಪಟ್ಟಣದಲ್ಲಿ ವಾಸವಾಗಿರುವ 30 ಸಾವಿರಕ್ಕೂ ಹೆಚ್ಚು ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತಾಗಿದೆ. ಈ ಯೋಜನೆಯು ಮುಂದಿನ ಮೂರು ದಶಕಗಳ ಜನಸಂಖ್ಯೆಯನ್ನು ಆಧರಿಸಿದೆ ಎಂಬುದೇ ವಿಶೇಷ.

ಇದೀಗ ಕೆ.ಆರ್.ಪೇಟೆ ಹಾಗೂ ಹೊಸಹೊಳಲು ವ್ಯಾಪ್ತಿಯ 23 ವಾರ್ಡ್‌ಗಳ ಜನರು ಶುದ್ಧ ಕುಡಿಯುವ ನೀರನ್ನು ಉಪಯೋಗಿಸುವಂತಾಗಿದೆ. ಸದ್ಯ ವಾರದ 7 ದಿನದ 24 ಗಂಟೆಗಳ ಕಾಲವೂ ಪರಿಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಬೇಕೆಂಬ ಆಶಯದಿಂದ ಆರಂಭ ಮಾಡಲಾಗಿದೆ. ಮೂರನೇ ಹಂತದ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ಮುಗಿದಿದ್ದು, ಕೆ.ಆರ್.ಪೇಟೆ ವ್ಯಾಪ್ತಿಯ 17 ವಾರ್ಡ್‌ಗಳು ಹಾಗೂ ಹೊಸಹೊಳಲು ಭಾಗದ 6 ವಾರ್ಡ್‌ಗಳಲ್ಲಿ ವಾಸವಾಗಿರುವ 30 ಸಾವಿರಕ್ಕೂ ಹೆಚ್ಚಿನ ಜನರಿಗೆ ನೀರು ತಲುಪಿದೆ.

ಯೋಜನೆ ಯಶಸ್ವಿ ಅನುಷ್ಠಾನವಾಗಿದ್ದು ಹೇಗೆ?

ಈ ಯೋಜನೆ ಕುರಿತಂತೆ ಮಾತನಾಡಿರುವ ಎಂ.ಡಿ.ಕೃಷ್ಣಮೂರ್ತಿ ಅವರು ನಾನು ನಗರ ಹಣಕಾಸು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದಾಗ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿ ಒಂದೇ ಕಂತಿನಲ್ಲಿ 55 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿಕೊಟ್ಟಿದ್ದೆ.

ಕೆ.ಆರ್.ಪೇಟೆ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ 9ನಗರ ಕುಡಿಯುವ ನೀರು ಸರಬರಾಜು ಕಾರ್ಯಕ್ರಮವನ್ನು ಮಂಜೂರು ಮಾಡಿದ್ದೆ. ಮಾಜಿ ಸಚಿವ ನಾರಾಯಣಗೌಡರ ಇಚ್ಛಾಶಕ್ತಿಯ ಫಲವಾಗಿ ಕುಡಿಯುವ ನೀರು ಸರಬರಾಜು ಯೋಜನೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಅದು ಏನೇ ಇರಲಿ ಪಟ್ಟದ ಜನರಿಗೆ ಶುದ್ಧ ನೀರು ತಲುಪಿತ್ತಲ್ಲ ಎನ್ನುವುದೇ ಸಂತಸದ ವಿಚಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+