Get Updates
Get notified of breaking news, exclusive insights, and must-see stories!

ಪುತ್ರನ ಗೆಲುವಿಗಾಗಿ ಮಂಡ್ಯದಲ್ಲಿ ಕುಮಾರಸ್ವಾಮಿ ರಹಸ್ಯ ಸಭೆ!

Recommended Video

      ಮಂಡ್ಯದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ನಾಯಕರ ಜೊತೆ ರಹಸ್ಯ ಸಭೆ ನಡೆಸಿದ ಎಚ್ ಡಿ ಕುಮಾರಸ್ವಾಮಿ

      ಮಂಡ್ಯ, ಏಪ್ರಿಲ್ 10: ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗಾಗಿ ಪಣತೊಟ್ಟಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರೊಂದಿಗೆ ರಹಸ್ಯ ಸಭೆ ನಡೆಸಿದ ವಿಷಯ ಬೆಳಕಿಗೆ ಬಂದಿದೆ. ಮಂಡ್ಯದ ಕೆಆರ್ ಎಸ್ ನ ರಾಯಲ್ ಆರ್ಕಿಡ್ ನಲ್ಲಿ ಬುಧವಾರ ಬೆಳಿಗ್ಗೆ ಸಭೆ ನಡೆದಿದ್ದು, ಇಂದು ಕೆಆರ್ ಎಸ್ ಸುತ್ತಮುತ್ತ ಕುಮಾರಸ್ವಿ ಅವರು ಪುತ್ರ ನಿಖಿಲ್ ಪರವಾಗಿ ಮತ ಯಾಚಿಸಲಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಆದರೆ ಸಭೆಯಲ್ಲಿ ಆಪ್ತರಲ್ಲದೆ, ಬೇರೆ ಯಾರಿಗೂ ಪ್ರವೇಶವಿರಲಿಲ್ಲ. ಮಾಧ್ಯಮಗಳನ್ನೂ ಸಭೆಯಿಂದ ದೂರವುಳಿಸಲಾಗಿತ್ತು ಎನ್ನಲಾಗಿದೆ. ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರು ಮತ್ತು ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು. ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಗಂಗಾಧರ ಅವರೂ ಸಭೆಯಲ್ಲಿದ್ದರು.

      ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವುದು ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರ ಪರ ಜನರಲ್ಲಿ ಅನುಕಂಪದ ಅಲೆ ಇದ್ದು, ಅವರ ಪರವಾಗಿ ನಟರಾದ ದರ್ಶನ್ ಮತ್ತು ಯಶ್ ರಂಥವರು ಪ್ರಚಾರ ಸಹ ಮಾಡುತ್ತಿರುವುದರಿಂದ ಜೆಡಿಎಸ್-ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಆತಂಕ ಶುರುವಾಗಿದೆ.

      HD Kumaraswamy holds a secret meeting in Mandya with Congress leaders

      ಅದರೊಟ್ಟಿಗೆ ಮಂಗಳವಾರ ಮೈಸೂರಿನಲ್ಲಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರೂ 'ಸುಮಲತಾ ಅವರನ್ನು ಗೆಲ್ಲಿಸುತ್ತೀರಿ ಅಂದುಕೊಂಡಿದ್ದೇನೆ' ಎಂದ ಮೇಲಂತೂ ಮೈತ್ರಿ ಸರ್ಕಾರದ ನಿದ್ದೆಕೆಟ್ಟಿದೆ. ಆದ್ದರಿಂದಲೇ ತರಾತುರಿಯಲ್ಲಿ ಎಚ್ ಡಿ ಕೆ ಸಭೆ ನಡೆಸಿದ್ದಾರೆ.

      ಬಿಜೆಪಿಯಂತೂ ಈಗಾಗಲೇ ಸುಮಲತಾ ಅವರಿಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿ, ತನ್ನ ಅಭ್ಯರ್ಥಿಯನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಿಲ್ಲ. ಈ ಎಲ್ಲಾ ಬೆಳವಣಿಗೆಗಳೂ ಜೆಡಿಎಸ್ ಗೆ ಪೂರಕವಂತೂ ಅಲ್ಲ ಎಂಬುದನ್ನು ಅರಿತ ಕುಮಾರಸ್ವಾಮಿ ರಹಸ್ಯ ಸಭೆ ನಡೆಸಿ, ಪುತ್ರನ ಗೆಲುವಿಗಾಗಿ ಹೊಸ ಕಾರ್ಯತಂತ್ರವನ್ನು ರೂಪಿಸಿರಬಹುದು ಎಂದು ಅಂದಾಜಿಸಲಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+