ಜೀವಂತವಿರುವಾಗಲೇ ನವ ಜೋಡಿಯ ಕಾಲುಕಟ್ಟಿ ನದಿಗೆ ಎಸೆದ ಪಾಪಿಗಳು

ಮಂಡ್ಯ, ನವೆಂಬರ್ 21: ಮಂಡ್ಯ ಜಿಲ್ಲೆಯ ಶಿವನ ಸಮುದ್ರ ಎಸ್‌ಬಿಆರ್ ಕೆರೆಯಲ್ಲಿ ಜೋಡಿ ಶವ ಪತ್ತೆಯಾಗಿತ್ತು. ಮೊದಲ ದಿನ ಗಂಡನ ಶವ ಪತ್ತೆಯಾದರೆ ಒಂದು ದಿನದ ಬಳಿಕ ಪತ್ನಿಯ ಶವ ಪತ್ತೆಯಾಗಿತ್ತು.

ಇಬ್ಬರನ್ನೂ ಜೀವಂತವಿರುವಾಗಲೇ ಕಾಲುಗಳನ್ನು ಕಟ್ಟಿ ನದಿಗೆ ಎಸೆದಿದ್ದರು. ಆ ತಂದೆಗೆ ಮಗಳ ಜೀವಕ್ಕಿಂತಲೂ ಜಾತಿಯೇ ದೊಡ್ಡದಾಯ್ತಾ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

ಬೆಳಕವಾಡಿ ಪೊಲೀಸರು ಯುವತಿ ತಂದೆ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೂಸೂರು ತಾಲ್ಲೂಕಿನ ಚೂಡಗೌಂಡನಹಳ್ಳಿ ಗ್ರಾಮದವರಾದ ನಂದೀಶ್ ಹಾಗೂ ಸ್ವಾತಿ ಮೃತಪಟ್ಟಿದ್ದರು.

Girls father arrested in honour killing of newly married TN couple

ಪ್ರಕರಣವನ್ನು ಬೆಳಕವಾಡಿ ಪೊಲೀಸರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡು ಮೃತ ಸ್ವಾತಿಯ ತಂದೆ ಶ್ರೀನಿವಾಸ್, ದೊಡ್ಡಪ್ಪಂದಿರಾದ ವೆಂಕಟೇಶ್, ಅಶ್ವಥ್, ಚಿಕ್ಕಪ್ಪ ವೆಂಕರಾಮು, ಸಂಬಂಧಿ ಕೃಷ್ಣಸ್ವಾಮಿ, ಸ್ನೇಹಿತ ಲಕ್ಷಣ್ ಎಂಬುವರನ್ನು ಬಂಧಿಸಿದ್ದಾರೆ.

ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಸ್ವಾತಿ ತಿಗಳ ಸಮುದಾಯಕ್ಕೆ ಸೇರಿದ್ದು ಅದೇ ಗ್ರಾಮದಪರಿಶಿಷ್ಟ ಜಾತಿಯ ಯುವಕ ನಂದೀಶನನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದು ಪೋಷಕರ ವಿರೋಧದ ನಡುವೆಯೂ ಮದುವೆಯಾಗಿ ಹೊಸೂರಿನಲ್ಲಿ ವಾಸವಾಗಿದ್ದರು.

ಹೊಸೂರಿನಲ್ಲಿ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ತೆರಳಿದ್ದ ಸಂಧರ್ಭದಲ್ಲಿ ಗ್ರಾಮದವರು ನೋಡಿದ್ದು ಸ್ವಾತಿಯ ತಂದೆಗೆ ವಿಷಯವನ್ನು ತಿಳಿಸಿದ್ದಾರೆ ಅವರಿಬ್ಬರನ್ನು ಪತ್ತೆ ಹಚ್ಚಿದ ಸ್ವಾತಿಯ ತಂದೆ ಹಾಗೂ ಸಂಬಂಧಿಕರು ಇವರಿಬ್ಬರನ್ನು ಹೊಸೂರಿನಿಂದ ಕನಕಪುರ ಮಾರ್ಗವಾಗಿ ಟಾಟಾ ಸುಮೋದಲ್ಲಿ ಶಿವನಸಮುದ್ರ ಬಳಿ ಕರತಂದು ಹಲ್ಲೆ ಮಾಡಿ ಜೀವಂತವಾಗಿ ನದಿಗೆ ಎಸೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+