ಅಂಬಿ ಹುಟ್ಟೂರಲ್ಲಿ ಸುಮಲತಾ-ನಿಖಿಲ್ ಬೆಂಬಲಿಗರ ನಡುವೆ ಮಾರಾ-ಮಾರಿ
Recommended Video
ಮಂಡ್ಯ, ಏಪ್ರಿಲ್ 18: ಅಂಬರೀಶ್ ಹುಟ್ಟೂರಾದ ದೊಡ್ಡರಸಿನಕೆರೆಯಲ್ಲಿ ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಬೆಂಬಲಿಗರ ನಡುವೆ ಮಾರಾ-ಮಾರಿ ನಡೆದಿದೆ.
ದೊಡ್ಡರಸಿನಕೆರೆಯಲ್ಲಿ ಸುಮಲತಾ ಅವರ ಪರವಾಗಿ ಪ್ರಚಾರಕ್ಕೆ ಪೊಲೀಸರು ಅಡ್ಡಿ ಪಡಿಸಿದರು ಎಂಬ ಕಾರಣಕ್ಕೆ ಶುರುವಾದ ಗಲಾಟೆ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅವರ ಬೆಂಬಲಿಗರ ನಡುವೆ ವಾಗ್ವಾದ ಆರಂಭವಾಗಿ ನೂಕಾಟ-ತಳ್ಳಾಟ ಸಹ ನಡೆದು, ಕೈ-ಕೈ ಮಿಲಾಯಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ದೊಡ್ಡರಸಿನಕೆರೆಗೆ ಬಂದಾಗ ಅವರ ಪರ ಕೆಲವರು ಘೋಷಣೆಗಳನ್ನು ಕೂಗಿದ್ದಾರೆ ಆಗ ಸುಮಲತಾ ಅವರ ಪರ ಘೋಷಣೆಗಳನ್ನು ಕೂಗಿದರು. ಆದರೆ ಇದಕ್ಕೆ ಪೊಲೀಸರು ಅಡ್ಡಿ ಪಡಿಸಿದರು ಎಂದು ಸುಮಲತಾ ಪರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು.

ನಿಖಿಲ್ ಕುಮಾರಸ್ವಾಮಿ-ಸುಮಲತಾ ಬೆಂಬಲಿಗರ ನಡುವೆ ವಾಗ್ವಾದ ಮೇರೆ ಮೀರಿ, ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಲಘು ಲಾಠಿ ಪ್ರಹಾರ ನಡೆಸಿದರು.
ದೊಡ್ಡರಸಿನಕೆರೆಯಲ್ಲಿ ಸುಮಲತಾ ಅವರು ಕೆಲವು ಸಮಯದ ಮುಂದೆ ಅಷ್ಟೆ ಮತಚಲಾಯಿಸಿ ಹೋಗಿದ್ದರು, ಅವರು ಅಲ್ಲಿಂದ ತೆರಳಿದ ಸ್ವಲ್ಪ ಹೊತ್ತಲ್ಲೆ ಗಲಾಟೆ ಪ್ರಾರಂಭವಾಗಿದೆ. ದೊಡ್ಡರಿನಕೆರೆಯು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ.












Click it and Unblock the Notifications