Get Updates
Get notified of breaking news, exclusive insights, and must-see stories!

ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ ರಾಜಣ್ಣ ವಿರುದ್ದ ಕಾಂಗ್ರೆಸ್ ಕ್ರಮಕ್ಕೆ ಆಗ್ರಹ

ಮಂಡ್ಯ, ಜು. 2: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಲಘು ಹೇಳಿಕೆ ನೀಡಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿ.ಎಸ್. ಪುಟ್ಟರಾಜು ಒತ್ತಾಯಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡು ಕಂಡ ಮುತ್ಸದ್ದಿ ರಾಜಕಾರಣಿ ದೇವೇಗೌಡರು. ಜಿಲ್ಲಾ ಪಂಚಾಯಿತಿ ಸದಸ್ಯರಾಗಲು, ಶಾಸಕರಾಗಲು ದೇವೇಗೌಡರ ಸಹಿಯುಳ್ಳ ಬಿ ಫಾರಂ ರಾಜಣ್ಣನವರಿಗೆ ಬೇಕಾಗಿತ್ತು. ಈಗ ಎಲ್ಲವನ್ನೂ ಅನುಭವಿಸಿದ ಮೇಲೆ ಇಂತಹ ನಿಕೃಷ್ಟ ಮಾತುಗಳನ್ನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿರಾಗಾಂಧಿ, ವಾಜಪೇಯಿ ಅವರ ಸಮಕಾಲೀನರಾಗಿರುವ ದೇವೇಗೌಡರು ರಾಷ್ಟ್ರದ ಅಭ್ಯುದಯಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇದನ್ನು ತಿಳಿದೂ ಒಬ್ಬರು ಸಾಯುವಂತಹ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ದೇವೇಗೌಡರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಶನಿವಾರ ಪಾಂಡವಪುರ ಮತ್ತು ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜುಲೈ 3ರಂದು ಮಂಡ್ಯ, ಮಳವಳ್ಳಿ ಹಾಗೂ ನಾಗಮಂಗಲ ತಾಲೂಕಿನಲ್ಲೂ ಬೃಹತ್ ಪ್ರತಿಟನೆ ನಡೆಯಲಿದೆ. ಸೋಮವಾರ ಮದ್ದೂರು ಮತ್ತು ಶ್ರೀರಂಗಪಟ್ಟಣಲ್ಲಿ ಅಲ್ಲಿನ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯಲಿವೆ.

ಹಿರಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಸಲ್ಲದು

ಹಿರಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಸಲ್ಲದು

ರಾಜಕಾರಣಿಗಳು ಮತ್ತೊಬ್ಬರ ಕಾಲೆಳೆಯಲು ಟೀಕೆ ಟಿಪ್ಪಣಿಗಳನ್ನು ಮಾಡುತ್ತಾರೆ. ಆದರೆ ಇಂತಹ ಕೀಳು ಮಟ್ಟದ ಹೇಳಿಕೆಯನ್ನು ನೀಡಿ ಹಿರಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುವುದಿಲ್ಲ. ರಾಜಣ್ಣನ ಹೇಳಿಕೆಯಿಂದ ಈ ನಾಡಿನ ಜನತೆಗೆ, ದೇವೇಗೌಡರ ಅಭಿಮಾನಿಗಳಿಗೆ ಅಪಾರವಾದ ನೋವು ಉಂಟಾಗಿದೆ. ಇಂತಹ ಮನುಷ್ಯನನ್ನು ಕಾಂಗ್ರೆಸ್ ಪಕ್ಷ ಇನ್ನೂ ಇಟ್ಟುಕೊಡಿದೆ ಎಂದು ಕಿಡಿಕಾರಿದರು.

ಎಚ್.ಡಿ. ದೇವೇಗೌಡರು ಸೂರ್ಯ ಇದ್ದಂಗೆ

ಎಚ್.ಡಿ. ದೇವೇಗೌಡರು ಸೂರ್ಯ ಇದ್ದಂಗೆ

ದೇವೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ರಾಜಣ್ಣನ ಕ್ರಮ ಖಂಡಿಸಿ ಇಂದು ಪಾಂಡವಪುರ ಮತ್ತು ಕೆ.ಆರ್.ಪೇಟೆಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ಭಾನುವಾರ ಮಂಡ್ಯ, ಮಳವಳ್ಳಿ ಹಾಗೂ ನಾಗಮಂಗಲ ತಾಲೂಕಿನಲ್ಲೂ ಬೃಹತ್ ಪ್ರತಿಟನೆ ನಡೆಯಲಿದೆ. ಸೋಮವಾರ ಮದ್ದೂರು ಮತ್ತು ಶ್ರೀರಂಗಪಟ್ಟಣಲ್ಲಿ ಅಲ್ಲಿನ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

ಎಚ್.ಡಿ. ದೇವೇಗೌಡರು ಸೂರ್ಯ ಇದಂತೆ. ಸೂರ್ಯನನ್ನು ನೋಡಿ ಉಗಿದರೆ ಅದು ನಮ್ಮ ಮುಖಕ್ಕೇ ಬೀಳುವುದು ಎಂದು ರಾಜಣ್ಣನಂತರವರು ಅರಿತುಕೊಳ್ಳಬೇಕು. ನಡೆಯುತ್ತಿದ್ದ ಆನೆಯನ್ನು ಕಂಡ ನಾಯಿಗಳು ಬೊಗಳುತ್ತವೆ. ರಾಜಣ್ಣನಂತಹವರು ಆನೆಯ ಲದ್ದಿಯನ್ನೂ ಮುಟ್ಟಲು ಸಾಧ್ಯವಿಲ್ಲ, ವಿಕೃತ ಮನಸ್ಸಿನವರು ಮಾತನಾಡುತ್ತಾರೆ. ಅವರ ಶಾಪ ನಿಮ್ಮನ್ನು ಬಿಡದು, ಇನ್ನೂ ನೂರ್ಕಾಲ ಬಾಳಿ ಬದುಕುತ್ತಾರೆ. ಶತಾಯುಷಿಗಳಾಗಿ ನಾಡಿನ ಅನೇಕ ನಮ್ಮಂತಹವರಿಗೆ ಮಾರ್ಗದರ್ಶನ ಮಾಡುತ್ತಾರೆ ಎಂದು ತಿಳಿಸಿದರು.

ಹೇಳಿಕೆಗೆ ಶಾಸಕ ಎಂ.ಶ್ರೀನಿವಾಸ್ ಖಂಡನೆ

ಹೇಳಿಕೆಗೆ ಶಾಸಕ ಎಂ.ಶ್ರೀನಿವಾಸ್ ಖಂಡನೆ

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ದೇವೇಗೌಡರ ಕಾರ್ಯವನ್ನು ಮೆಚ್ಚಿದ ವಿರೋಧ ಪಕ್ಷಗಳು ಎಚ್.ಡಿ. ದೇವೇಗೌಡರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಲು ಹೊರಟಿದ್ದವು. ಅಂತಹ ವ್ಯಕ್ತಿತ್ವ ಹೊಂದಿರುವ ಧೀಮಂತ ನಾಯಕನ ಬಗ್ಗೆ ರಾಜಣ್ಣ ಲಘುವಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು. ದೇವೇಗೌಡರಂತಹ ಹಿರಿಯ ಮುತ್ಸದ್ದಿ ರಾಜಕಾರಣಿಗಳ ಬಗ್ಗೆ ಲಘುವಾಗಿ ಹೇಳಿಕೆ ನೀಡಿರುವುದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದರು. ಒಬ್ಬ ವ್ಯಕ್ತಿಯ ಸಾವನ್ನು ನಿರೀಕ್ಷೆ ಮಾಡುತ್ತಾರೆ ಎಂದರೆ ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಜಾತಶತೃ ನಾಯಕನ ಬಗ್ಗೆ ಹೇಳಿಕೆಗೆ ಖಂಡನೀಯ

ಅಜಾತಶತೃ ನಾಯಕನ ಬಗ್ಗೆ ಹೇಳಿಕೆಗೆ ಖಂಡನೀಯ

ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, "ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವ ಕೆ.ಎನ್. ರಾಜಣ್ಣ ಒಬ್ಬ ಅನಾಗರೀಕ ವ್ಯಕ್ತಿ. ದೇಶದ ಪ್ರಧಾನಿಗಳೇ ದೇವೇಗೌಡರನ್ನು ಪಾರ್ಲಿಮೆಂಟಿನ ಬಾಗಿಲ ಬಳಿ ತೆರಳಿ ಕರೆದೊಯ್ಯುತ್ತಾರೆ. ಅಂತಹ ಅಜಾತಶತೃ ನಾಯಕನ ಬಗ್ಗೆ ಹೀಯಾಳಿಸಿ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ," ಎಂದರು.

ರಾಷ್ಟ್ರ ಕಂಡ ಅಪ್ರತಿಮ ನಾಯಕನಾಗಿರುವ ದೇವೇಗೌಡರು ಕೇವಲ ಆರೇಳು ವರ್ಷಗಳ ಕಾಲ ಮಾತ್ರ ಅಧಿಕಾರ ಉಂಡವರು. ಉಳಿದ ಅವಧಿಯ ಆರು ದಶಕಗಳ ಕಾಲ ದೇಶದ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಿದವರು. ಕೃಷ್ಣ ಯೋಜನೆಗಾಗಿ 16 ಸಾವಿರ ಕೋಟಿ ನೀಡಿದರು. ಈ ದೇಶದ ನೀರಾವರಿ ಯೋಜನೆಗಾಗಿ ಒಂದೂವರೆ ಲಕ್ಷ ಕೋಟಿ ರೂ.ಗಳು ಸರ್ಕಾರ ನೀಡುವಂತೆ ಮಾಡಿದವರು. ಇಂತಹ ನಾಯಕರ ಬಗ್ಗೆ ಲಘು ಹೇಳಿಕೆ ನೀಡಿರುವ ರಾಜಣ್ಣನನ್ನು ಕಾಂಗ್ರೆಸ್ ಪಕ್ಷ ಪ್ರಾಥಮಿಕ ಸದಸ್ಯತ್ವದಿಂದಲೇ ಕಿತ್ತುಹಾಕಬೇಕು ಎಂದು ಕಿಡಿಕಾರಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಮುಖಂಡ ಲಿಂಗರಾಜು ಗೋಷ್ಠಿಯಲ್ಲಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+