ಐಟಿ ದಾಳಿ ನಿರೀಕ್ಷಿತ, ಆತಂಕವಿಲ್ಲ, ಹೋರಾಡುವೆ: ಸಿಎಸ್ ಪುಟ್ಟರಾಜು
Recommended Video

ಮಂಡ್ಯ, ಮಾರ್ಚ್ 28: 'ಇದು ರಾಜಕೀಯ ಪ್ರೇರಿತವಾಗಿ ನಡೆದಿರುವ ದಾಳಿ ಇದು, ಇದು ನಿರೀಕ್ಷಿತವಾದ ದಾಳಿ, ಹಾಗಾಗಿ ಯಾವುದೇ ಆತಂಕವಾಗಿಲ್ಲ. ಒಟ್ಟು ಮೂರು ಕಡೆಗಳಲ್ಲಿ ದಾಳಿ, ಚಿನಕುರಳಿಯ ನಮ್ಮ ಮನೆಯಲ್ಲಿ ನಾಲ್ವರು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಅಣ್ಣ ಮಕ್ಕಳ ಮನೆ ಮೇಲೂ ದಾಳಿ ನಡೆಸಿದ್ದಾರೆ' ಎಂದು ಸಣ್ಣ ನೀರಾವರಿ ಸಚಿವ, ಮಂಡ್ಯ ಜಿಲ್ಲಾ ಉಸ್ತುವಾರಿ ಸಿ.ಎಸ್ ಪುಟ್ಟರಾಜು ಅವರು ಪ್ರತಿಕ್ರಿಯಿಸಿದ್ದಾರೆ.
ಮಂಡ್ಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಅವರ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ ಚಿನಕುರಳಿಯ ಮನೆ, ಮೈಸೂರಿನಲ್ಲಿರುವ ಅವರ ಸಂಬಂಧಿ ಅಶೋಕ್ ಎಂಬುವರ ಮನೆ ಮೇಲೆ ದಾಳಿ ನಡೆದಿದೆ. ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಕೇಂದ್ರ ಮೀಸಲು ಪಡೆ (ಸಿಆರ್ ಪಿಎಫ್) ಸಿಬ್ಬಂದಿಗಳ ನೆರವಿನಿಂದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹೋರಾಟ ಮುಂದುವರೆಸುತ್ತೇವೆ: ಇವತ್ತು ಮೀಟಿಂಗ್ ಕರೆದು ಮುಂದೆ ಏನ್ ಮಾಡಬೇಕು ಎಂಬುದನ್ನು ನಿರ್ಧಾರ ಮಾಡುತ್ತೇವೆ. ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ನನ್ನ ಬಳಿ ಇರುವ ದಾಖಲೆಗಳೆಲ್ಲವೂ ಸರಿಯಾಗಿದ್ದು, ನಾನು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಸ್ ಪುಟ್ಟರಾಜು ಹೇಳಿದರು.
ಬಿಜೆಪಿಯೇತರ ಸರ್ಕಾರ/ ಪಕ್ಷಗಳ ವಿರುದ್ಧ CBI, IT, ED ಗಳೇ ಚುನಾವಣಾ ಅಸ್ತ್ರಗಳೇನು?
— Karnataka Congress (@INCKarnataka) March 27, 2019
ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಇತಿಹಾಸದಲ್ಲೇ ಅತಿ ಹೆಚ್ಚು ನರೇಂದ್ರ ಮೋದಿ ಅವರಿಂದ ಆಗಿದೆ.
ಮೈತ್ರಿ ಸರ್ಕಾರದ ನಾಯಕರುಗಳ ವಿರುದ್ಧ ವೈಫಲ್ಯದ ನಾಯಕ @narendramodi ಯವರ ದುಸ್ಸಾಹಸಕ್ಕೆ ಕರ್ನಾಟಕದ ಜನ ತಕ್ಕ ಪಾಠ ಕಲಿಸಲಿದ್ದಾರೆ. pic.twitter.com/LqouKXAUYs
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಮತ್ತು ಗೋವಾ ತೆರಿಗೆ ಇಲಾಖೆ ಉಸ್ತುವಾರಿ ಡಿ.ಜಿ ಬಾಲಕೃಷ್ಣನ್ ಅವರನ್ನು ವರ್ಗಾವಣೆ ಮಾಡುವಂತೆ ಕೇಂದ್ರ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಪತ್ರ ಬರೆದಿತ್ತು. ಆದರೆ, ಚುನಾವಣೆ ಆಯೋಗ ವರ್ಗಾವಣೆ ಮಾಡಲಿಲ್ಲ. ಈಗ ಇದೇ ಬಾಲಕೃಷ್ಣನ್ ಅವರ ನಿರ್ದೇಶನದಂತೆ 200-300 ಅಧಿಕಾರಿಗಳ ತಂಡದಿಂದ ಕರ್ನಾಟಕದಲ್ಲಿ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.











Click it and Unblock the Notifications