ವಿಡಿಯೋ : ಪುಟ್ಟಣ್ಣಯ್ಯ ಸಮಾಧಿ ಬಳಿ ಶಪಥಗೈದ ದರ್ಶನ್
Recommended Video

ದರ್ಶನ್ ಪುಟ್ಟಣ್ಣಯ್ಯ ತಮ್ಮ ತಂದೆ ಸಮಾಧಿ ಎದುರಿಗೆ ಕೂತು ಹೇಳಿದ್ದೇನು?| Oneindia Kannada
ಮಂಡ್ಯ, ಮೇ 09: ಕರ್ನಾಟಕ ರಾಜ್ಯ ರೈತರ ಪಾಲಿನ ಏಕೈಕ ಆಶಾಕಿರಣವಾಗಿದ್ದ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಸ್ಥಾನ ತುಂಬಲು ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಅವರು ಚುನಾವಣಾ ಅಖಾಡಕ್ಕಿಳಿದಿದ್ದಾರೆ.
ಇಂದು ತಮ್ಮ ತಂದೆ ಸಮಾಧಿ ಬಳಿ ಕುಳಿತ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರಮಾಣ ಮಾಡಿದ್ದಾರೆ. ನಾನೂ ಎಲ್ಲಿಗೂ ಹೋಗೋದಿಲ್ಲ. ನಿಮ್ಮಗಳ ಜೊತೆಯೇ ಸದಾ ಕಾಲ ಇರ್ತೀನಿ.

ನಿಮಗಾಗಿ ಕೆಲಸ ಮಾಡ್ತೀನಿ, ದುಡೀತೀನಿ. ತಂದೆಯವರ ಹಲವಾರು ಕನಸು ಈಡೇರಿಸಲು ಪಣ ತೊಟ್ಟಿದ್ದೇನೆ. ರೈತ ಹೋರಾಟಕ್ಕೆ ಹಾಗು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸ್ತೀನಿ.
ನಾನು ದರ್ಶನ್ ಪುಟ್ಟಣ್ಣಯ್ಯ, ನಾನು ಎಲ್ಲೂ ಹೋಗಲ್ಲ ಇಲ್ಲೆ ಇದ್ದು, ಕೆಲ್ಸ ಮಾಡ್ತೀನಿ, ದುಡಿತ್ತೀನಿ, ತಂದೆಯವರಿಗೆ ಹಲವಾರು ಕನಸುಗಳಿತ್ತು. ರೈತ ಹೋರಾಟ, ಅಭಿವೃದ್ಧಿ ಕನಸು ನನಸು ಮಾಡಬೇಕಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಅಪಘಾತಕ್ಕೀಡಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಗೆ ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು ಇತ್ತೀಚೆಗೆ ನೆರವಾಗಿದ್ದರು. ಕಾವೇರಿ ನದಿ ನೀರು ಹಂಚಿಕೆ ವಿವಾದದ ಬಿಸಿ ನಡುವೆಯೂ ತಮಿಳುನಾಡಿನ ರೈತರು, ಮಂಡ್ಯಕ್ಕೆ ಬಂದು ದರ್ಶನ್ ಪರ ಪ್ರಚಾರ ಕೈಗೊಂಡಿದ್ದರು.












Click it and Unblock the Notifications