ಮದ್ದೂರಿನಲ್ಲಿ ಗುಂಪು ಘರ್ಷಣೆ: ಇಬ್ಬರ ಕೊಲೆ, ಐವರ ಬಂಧನ

Posted By:
Subscribe to Oneindia Kannada

ಮದ್ದೂರು, ಡಿಸೆಂಬರ್ 26: ಚುನಾವಣೆಗೆ ಹಾಕಿದ್ದ ಫ್ಲೆಕ್ಸ್ ಹರಿದ ಘಟನೆ ಕುರಿತು ಮದ್ದೂರು ತಾಲ್ಲೂಕಿನ ತೊಪ್ಪನಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಚಾಕುವಿನಿಂದ ಇರಿದು ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು ಈ ಕುರಿತು ಐವರನ್ನು ಬಂಧಿಸಲಾಗಿದೆ

ತೊಪ್ಪನಹಳ್ಳಿಯ ಪುಟ್ಟಸ್ವಾಮಿ ಅವರ ಮಗ ನಂದೀಶ್ (18), ಹೊನ್ನಯ್ಯ ಅವರ ಮಗ ಮುತ್ತುರಾಜು ಆಲಿಯಾಸ್ ಕೋಟಿ (45) ಚುನಾವಣೆಯ ಗುಂಪು ಘರ್ಷಣೆಗೆ ಬಲಿಯಾದವರು.[ರಾತ್ರೋರಾತ್ರಿ ಟಿಪ್ಪು ಚೌಕ್ ನಿರ್ಮಾಣ: ಗುಂಪು ಘರ್ಷಣೆ]

ಕೊಲೆಯಾಗಿರುವ ನಂದೀಶ್, ಮುತ್ತುರಾಜು ಮತ್ತು ರಾಮಲಿಂಗು ನೇತೃತ್ವದ ಮತ್ತೊಂದು ಗುಂಪಿನ ನಡುವೆ ಕಳೆದ ಗ್ರಾ.ಪಂ ಚುನಾವಣೆ ಸಮಯದಲ್ಲಿ ಜಗಳ ನಡೆದಿತ್ತು. ಅಲ್ಲದೆ ಐದು ದಿನಗಳ ಹಿಂದೆ ನೀರಿಗಾಗಿ ಇದೇ ಎರಡು ಗುಂಪುಗಳ ನಡುವೆ ಕದನವೂ ಜರುಗಿತ್ತು ಎಂದು ಮಂಡ್ಯ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.

Election related conflict: two dead, police arrested five in maddur

ಗ್ರಾಮದಲ್ಲಿ ದ್ವೇಷಕ್ಕೆ ಕಾರಣ ಹಾಕಿದ್ದ ಫ್ಲೆಕ್ಸ್ ಅನ್ನು ಶನಿವಾರ ರಾತ್ರಿ ಹರಿದು ಹಾಕಿರುವುದು ಎನ್ನಲಾಗಿದ್ದು ಆದರೆ ಭಾನುವಾರ ಸಂಜೆ ಗುಂಪು ಘರ್ಷಣೆ ನಡೆದಿದ್ದು, ಇಬ್ಬರ ಕೊಲೆಯಲ್ಲಿ ಪರ್ಯವಸಾನವಾಗಿತ್ತು. ಈ ಸಂಬಂಧ ಎಸ್ಪಿ ವಿಚಾರಣೆ ನಡೆಸಿದ್ದು ಐವರನ್ನು ಬಂಧಿಸಲಾಗಿದೆ.[ಬೆಳಗಾವಿಯಲ್ಲಿ ಗುಂಪು ಘರ್ಷಣೆ, 12 ಜನರಿಗೆ ಗಾಯ]

ಘಟನೆ ನಂತರ ತೊಪ್ಪನಹಳ್ಳಿ ಡಿವೈಎಸ್ ಪಿ ತೀವ್ರ ಭದ್ರತೆಗೆ ಸೂಚಿಸಿದ್ದು, ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Election related conflicts between the two groups in toppanahalli, maddur taluk. two people brutally murdered, the police arrested five
Please Wait while comments are loading...