ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ; ಡಾ. ಸಿ.ಎನ್. ಮಂಜುನಾಥ್ ಹೇಳಿದ್ದೇನು?
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಾನು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜನರ ಒತ್ತಡ ಇದೆ. ಆದರೆ ನಾನು ಇನ್ನು ತೀರ್ಮಾನ ಮಾಡಿಲ್ಲ ಎಂದರು.

ನನ್ನ ಪ್ರಕಾರ ಲೋಕಸಭೆ ಬೇರೆ, ರಾಜಕೀಯವೇ ಬೇರೆ, ನಾನು ಇನ್ನು ಸ್ಪರ್ಧೆ ಬಗ್ಗೆ ಆಲೋಚನೆ ಮಾಡುತ್ತಿದ್ದೇನೆ. ಇದರ ಬಗ್ಗೆ ಸ್ಪಷ್ಟವಾದ ನಿಲುವು ತೆಗೆದುಕೊಂಡು ತಿಳಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸ್ನೇಹಿತರು, ಹಿತೈಷಿಗಳು ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದಂತೆ ರಾಜಕೀಯ ಕ್ಷೇತ್ರದಲ್ಲೂ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ಜನರು ಚರ್ಚೆ ಮಾಡುತ್ತಿದ್ದಾರೆ. ಮಾಧ್ಯಮ ಸುದ್ಧಿ ಮಾಡುತ್ತಿವೆ. ಆದರೆ, ರಾಜಕೀಯಕ್ಕೆ ಹೋಗಬೇಕಾ ಅಥವಾ ಬೇಡವಾ ಎಂಬ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇಡೀ ರಾಷ್ಟ್ರದಲ್ಲಿ ಜಯದೇವ ಸಂಸ್ಥೆಯನ್ನು ಮಾದರಿ ಸಂಸ್ಥೆಯಾಗಿ ಅಭಿವೃದ್ಧಿಗೊಳಿಸಿದ್ದೇವೆ. ಈ ಸರ್ಕಾರ ಹಾಗೂ ಹಿಂದಿನ ಸರ್ಕಾರ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೂ ಯಾವ ಕಾರಣಕ್ಕೆ ತನಿಖೆ ಮಾಡಬೇಕು ಅಂದುಕೊಂಡಿದ್ದಾರೋ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಆರೋಗ್ಯ ಸ್ಥಾಯಿ ಸಮಿತಿ ನಮ್ಮ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಆಸ್ಪತ್ರೆ ಕಾರ್ಯವೈಖರಿ ನೋಡಿ ಓನರ್ ಯಾರು ಅಂದಿದ್ದರು. ಸರ್ಕಾರಕ್ಕೆ ಈ ಸಂಸ್ಥೆ ಶೋಕೇಸ್ ಆಗಿದೆ ಎಂದಿದ್ದರು. ಜಯದೇವ ರೀತಿ ಸರ್ಕಾರಿ ಸಂಸ್ಥೆಗಳನ್ನು ಯಾಕೆ ಅಭಿವೃದ್ಧಿ ಮಾಡಬಾರದು ಎಂದು ಸರ್ಕಾರವೇ ತಿಳಿಸಿತ್ತು. ಆದರೂ ತನಿಖೆ ಏಕೆ ಎಂಬುದು ತಿಳಿದಿಲ್ಲ ಎಂದು ಹೇಳಿದರು.
ಡಾ. ಸಿ.ಎನ್. ಮಂಜುನಾಥ್ ಪತ್ನಿ ಅನಸೂಯ ಮಾತನಾಡಿ, ನಾನು ಹುಟ್ಟುತ್ತಲೇ ರಾಜಕೀಯ ನೋಡಿಕೊಂಡು ಬಂದಿದೇನೆ. ನಾನು ಹುಟ್ಟಿದ ಮರು ದಿನನೇ ನನ್ನ ತಂದೆ ಶಾಸಕರಾಗಿದ್ದರು. ಸದ್ಯ ನನ್ನ ಪತಿ ವೈದ್ಯರಾಗಿ ಸೇವೆ ಮಾಡಿದ್ದು ನೆಮ್ಮದಿ ತಂದಿ ಎಂದರು.
ಅವರು ರಾಜಕೀಯಕ್ಕೆ ಬರುವ ಬಗ್ಗೆ ಆಲೋಚನೆ ಮಾಡಲು ಸಮಯ ಸಿಕ್ಕಿಲ್ಲ. ಜನಸೇವೆ ಮಾಡಿದ್ದರ ಬಗ್ಗೆ ಸಂತೋಷವಾಗಿದೆ. ಅದರ ಅಸ್ವಾದನೆ ಮಾಡೋಕೆ ಬಿಡುತ್ತಿಲ್ಲ. ಪದೇ ಪದೇ ಹೊರಗಡೆಯಿಂದ ಒತ್ತಡ ಹೆಚ್ಚಾಗುತ್ತಿದೆ ಎಂದು ಉತ್ತರಿಸಿದರು.











Click it and Unblock the Notifications