ಫಲಿಸಿದ ಕೈ ತಂತ್ರಗಾರಿಕೆ: ಮನ್ಮುಲ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ತೆಕ್ಕೆಗೆ, ಜೆಡಿಎಸ್‌ಗೆ ಮುಖಭಂಗ

ಮಂಡ್ಯ, ಜುಲೈ 24: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾಗಿರುವ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮನ್ಮುಲ್‌) ಗದ್ದುಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪಾಲಾಗಿದ್ದು, ಶ್ರೀರಂಗಪಟ್ಟಣ ತಾಲೂಕಿನ ನಿರ್ದೇಶಕ ಬೋರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಾತ್ಯತೀತ ಜನತಾದಳ ಹಾಗೂ ಕಾಂಗ್ರೆಸ್ ನಡುವೆ ಅಧಿಕಾರ ಗಿಟ್ಟಿಸಿಕೊಳ್ಳಲು ಹಲವು ತಂತ್ರಗಾರಿಕೆ ಹೆಣೆಯಲಾಗಿತ್ತು. ಆದರೆ, ಅಂತಿಮವಾಗಿ ಮನ್‌ಮುಲ್ ಆಡಳಿತ ಕಾಂಗ್ರೆಸ್‌ಗೆ ಒಲಿದಿದೆ. ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಬೋರೇಗೌಡ 9 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ನಿರ್ದೇಶಕ ಮದ್ದೂರಿನ ಎಸ್.ಪಿ. ಸ್ವಾಮಿ ಬೆಂಬಲ ಗಿಟ್ಟಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಜಾತ್ಯತೀತ ಜನತಾದಳಕ್ಕೆ ಮುಖಭಂಗವನ್ನುಂಟು ಮಾಡಿದೆ.

Congress Leader Boregowda Is The President Of Mandya District Milk Union

ಮೂವರು ಚುನಾಯಿತ ನಿರ್ದೇಶಕ, ಓರ್ವ ನಾಮನಿರ್ದೇಶಕ, ನಾಲ್ವರು ಅಧಿಕಾರಿ ಸೇರಿ 8 ಮತದ ಬಲವಿದ್ದ ಕಾಂಗ್ರೆಸ್‌ಗೆ ಬಿಜೆಪಿಯ ಸಾದೊಳಲು ಸ್ವಾಮಿ ಬೆಂಬಲ ನೀಡಿದ್ದರಿಂದ ಮನ್ಮುಲ್‌ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಒಲಿದಿದೆ.

ಮನ್ಮುಲ್‌ನಲ್ಲಿ ಬಿ.ಆರ್. ರಾಮಚಂದ್ರ, ರಘುನಂದನ್, ಎಚ್.ವಿಶ್ವನಾಥ್, ನೆಲ್ಲಿಗೆರೆ ಬಾಲಕೃಷ್ಣ, ಕೋಟೆ ರವಿ, ಎಚ್.ಟಿ. ಮಂಜು, ಡಾಲು ರವಿ ಜಾ.ದಳ ಬೆಂಬಲಿತ ಚುನಾಯಿತ ನಿರ್ದೇಶಕರಾಗಿದ್ದು, ಯು.ಸಿ. ಶಿವಕುಮಾರ್, ಬೋರೇಗೌಡ ಮತ್ತು ಕಾಡೇನಹಳ್ಳಿ ರಾಮಚಂದ್ರು, ಕಾಂಗ್ರೆಸ್ ಬೆಂಬಲಿತ ಚುನಾಯಿತ ನಿರ್ದೇಶಕರಾಗಿದ್ದರೆ, ಕದಲೂರು ರಾಮಕೃಷ್ಣ ನಾಮನಿರ್ದೇಶನ ನಿರ್ದೇಶಕರಾಗಿದ್ದಾರೆ. 12 ಚುನಾಯಿತ ನಿರ್ದೇಶಕರು ಮತ್ತು ನಾಲ್ವರು ಅಧಿಕಾರಿಗಳು ಮತದಾನದ ಹಕ್ಕು ಹೊಂದಿದ್ದರು.

ಅಧ್ಯಕ್ಷರ ಆಯ್ಕೆಗೆ ಕಳೆದ ಜು. 6 ರಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧೆ ಬಯಸಿ ಜಾ.ದಳ ಬೆಂಬಲಿತ ರಘುನಂದನ್, ನೆಲ್ಲಿಗೆರೆ ಬಾಲು, ಶಾಸಕ ಎಚ್.ಟಿ. ಮಂಜು ಹಾಗೂ ಕಾಂಗ್ರೆಸ್ ಬೆಂಬಲಿತ ಬೋರೇಗೌಡ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ಪ್ರಕ್ರಿಯೆ ಮಧ್ಯೆ ನಿರ್ದೇಶಕರಾದ ಬಿ. ಆರ್.ರಾಮಚಂದ್ರ ಮತ್ತು ವಿಶ್ವನಾಥ್ ರವರನ್ನು ಸಹಕಾರ ಸಂಘಗಳ ಆಡಳಿತ ಮಂಡಳಿಯ ಸಭೆಯಲ್ಲಿ ಭಾಗವಹಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಉಪ ವಿಭಾಗ ನ್ಯಾಯಾಲಯ ನಿರ್ಬಂಧ ಆದೇಶಿಸಿತ್ತು.

Congress Leader Boregowda Is The President Of Mandya District Milk Union

ಚುನಾವಣೆ ಸಭೆಗೆ ಕೋರಂ ಅಭಾವ ಉಂಟಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ಅಧ್ಯಕ್ಷರ ಚುನಾವಣೆಯನ್ನು ಮುಂದೂಡಿದ್ದರು. ಮುಂದೂಡಿದ ಚುನಾವಣೆ ಸಭೆ ಸೋಮವಾರ ನಿಗದಿಯಾಗಿತ್ತು. ಸಭೆಯಲ್ಲಿ ಮತಕ್ಕೆ ಹಾಕಿದಾಗ ಕಾಂಗ್ರೆಸ್ ಬೆಂಬಲಿತ ಬೋರೇಗೌಡ 9 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಿಜೆಪಿ ಬೆಂಬಲಿತ ಸದಸ್ಯ ಎಸ್.ಪಿ. ಸ್ವಾಮಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದರಿಂದ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ಗೆ ವರದಾನವಾಯಿತು.

ಮನ್ಮುಲ್‌ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ನಾನಾ ತಂತ್ರಗಾರಿಕೆ ಮಾಡಿದ್ದ ಕಾಂಗ್ರೆಸ್ ಕೊನೆಗೂ ಯಶಸ್ವಿಯಾಗಿದ್ದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ಗಿಟ್ಟಿಸಲು ಪ್ರಯತ್ನಿಸಿದ ಜಾ.ದಳ ನಡೆಗೆ ಹಿನ್ನಡೆಯುಂಟಾಗಿ ಮುಖಭಂಗವಾಗಿದೆ. ನೂತನ ಅಧ್ಯಕ್ಷ ಬೋರೇಗೌಡ ಅವರು ನಾಲ್ಕನೇ ಬಾರಿ ಮನ್ಮುಲ್‌ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+