ಮಂಡ್ಯದಲ್ಲಿ ಜ್ವರದಿಂದ ಮಗು ಸಾವು : ಡೆಂಗ್ಯೂ ಶಂಕೆ

ಮಂಡ್ಯ/ಕೆ.ಆರ್.ಪೇಟೆ, ಜುಲೈ 30: ಜ್ವರದಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕಮಂದಗೆರೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಡೆಂಗ್ಯೂ ಜ್ವರದ ಶಂಕೆ ವ್ಯಕ್ತವಾಗಿದೆ.

ಚಿಕ್ಕಮಂದಗೆರೆ ಕೊಪ್ಪಲಿನ ಹೇಮ ಮತ್ತು ಪ್ರಸನ್ನ ನಾಯಕ ದಂಪತಿಗಳ ಪುತ್ರಿ ನಮಿತನಾಯಕ್ (8) ಮೃತ ಪಟ್ಟ ಬಾಲಕಿ

ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿ ನಮಿತಾಳನ್ನು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಮೃತರ ಪೋಷಕರು ತಿಳಿಸಿದ್ದಾರೆ.

Child death from fever in Mandya: Dengue suspect

ಗ್ರಾಮದಲ್ಲಿ ಡೆಂಗ್ಯೂ ವ್ಯಾಪಕವಾಗಿ ಹರಡಿದ್ದು ಸಾಕಷ್ಟು ರೋಗಿಗಳು ಹಾಸನ, ಮೈಸೂರು, ಮಂಡ್ಯ, ಕೆ.ಆರ್.ಪೇಟೆ, ಚನ್ನರಾಯಪಟ್ಟಣ ಸೇರಿದಂತೆ ವಿವಿಧೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರ ಮಾಹಿತಿ ಕಲೆ ಹಾಕುವ ಕೆಲಸವನ್ನು ಆರೋಗ್ಯ ಇಲಾಖೆಯು ಮಾಡಬೇಕು. ಅಲ್ಲದೆ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಕಿರುಚಿತ್ರ ಮತ್ತು ಬೀದಿ ನಾಟಕಗಳ ಮೂಲಕ ಡೆಂಗ್ಯೂ ಹರಡುವ ಕ್ರಮಗಳು ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿಕೊಡುವ ಮೂಲಕ ಅರಿವು ಮೂಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+