• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯದಲ್ಲಿ ಇಂದು ನಿಖಿಲ್ ಕುಮಾರಸ್ವಾಮಿ ಬದಲು ಅನಿತಾ ಪ್ರಚಾರ!

|
   Lok Sabha Elections 2019 : ನಿಖಿಲ್ ಕುಮಾರಸ್ವಾಮಿ ಪ್ರಚಾರ ನಿಲ್ಲಿಸಿದ್ದರ ಹಿಂದಿನ ಕಾರಣವೇನು?

   ಮಂಡ್ಯ, ಏ.12: ಮಂಡ್ಯದಲ್ಲಿ ಇಂದು ನಿಖಿಲ್ ಕುಮಾರಸ್ವಾಮಿ ಬಹಿರಂಗ ಪ್ರಚಾರ ರದ್ದುಗೊಂಡಿದ್ದು, ನಿಖಿಲ್ ತೆರಳಬೇಕಿದ್ದ ಸ್ಥಳಗಳಲ್ಲಿ ಅನಿತಾ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ.

   ನಿಖಿಲ್ ಕುಮಾರಸ್ವಾಮಿಗೆ ಮೂರು ದಿನಗಳ ಹಿಂದೆ ಬಹಿರಂಗ ಪ್ರಚಾರ ವೇಳೆ ಕೈಗೆ ಪೆಟ್ಟಾಗಿತ್ತು. ನೋವು ಹೆಚ್ಚಾಗಿರುವ ಕಾರಣ ವೈದ್ಯರ ಸಲಹೆ ಮೇರೆಗೆ ಒಂದು ದಿನ ವಿಶ್ರಾಂತಿ ಪಡೆಯಲಿದ್ದಾರೆ.

   ಇಂದು ಕೆಆರ್ ಪೇಟೆ ಭಾಗದಲ್ಲಿ ನಿಖಿಲ್ ಪ್ರಚಾರ ನಡೆಸಬೇಕಿತ್ತು. ಮಳವಳ್ಳಿಯಿಂದ ಪ್ರಚಾರ ಆರಂಭವಾಗಬೇಕಿತ್ತು. ಅನಿತಾ ಕುಮಾರಸ್ವಾಮಿಯವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಚಾರ ಆರಂಭಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

   ಒಂದೇ ಕ್ಷೇತ್ರದಲ್ಲಿ ಸುಮಲತಾ, ನಿಖಿಲ್ ಪ್ರಚಾರ: ಮುಖಾಮುಖಿಯಾಗ್ತಾರಾ?

   ಇಂದು ಸುಮಲತಾ ಅಂಬರೀಶ್ ಕೂಡ ಕೆಆರ್ ಪೇಟೆ ಲೋಕಸಭಾ ಕ್ಷೇತ್ರದಲ್ಲಿಯೇ ಪ್ರಚಾರ ನಡೆಸಲಿದ್ದಾರೆ, ನಿಖಿಲ್ ಹಾಗೂ ಸುಮಲತಾ ಮುಖಾಮುಖಿಯಾಗಬಹುದೇ ಎಂದು ಅಂದಾಜಿಸಲಾಗಿತ್ತು. ಆದರೆ ನಿಖಿಲ್‌ಗೆ ಆರೋಗ್ಯ ಸರಿ ಇಲ್ಲದ ಕಾರಣ ಇಂದು ವಿಶ್ರಾಂತಿ ಪಡೆಯಲಿದ್ದಾರೆ.

   ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ, ಮೊದಲು ಹಂತದಲ್ಲಿ ಏ.18ರಂದು ಎರಡನೇ ಹಂತದಲ್ಲಿ ಏ.23ರಂದು ನಡೆಯಲಿದೆ.

   English summary
   Lok sabha elections 2019, Anitha Kumaraswamy will campaign for her son Nikhil Kumaraswamy in Mandya Today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X