ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯಕ್ಕೆ ಮೃತದೇಹ ಕರೆತನ್ನಿ: ಅಂಬರೀಶ್ ಅಭಿಮಾನಿಗಳ ಒತ್ತಾಯ

|
Google Oneindia Kannada News

Recommended Video

Ambareesh, Kannada Actor Demise : ಮಂಡ್ಯಕೆ ಅಂಬರೀಶ್ ಮೃತ ದೇಹ ತರುವಂತೆ ಅಭಿಮಾನಿಗಳ ಒತ್ತಾಯ

ಬೆಂಗಳೂರು, ನವೆಂಬರ್ 25: 'ನಮ್ಮ ಪ್ರೀತಿಯ 'ಮಂಡ್ಯದ ಗಂಡು'ವನ್ನು ನಾವೆಲ್ಲ ಕೊನೆಯ ಬಾರಿ ಕಣ್ತುಂಬಿಕೊಳ್ಳಬೇಕು. ದಯವಿಟ್ಟು ಅವರನ್ನು ಮಂಡ್ಯಕ್ಕೆ ಕರೆದುಕೊಂಡು ಬನ್ನಿ'- ಇದು ಇಡೀ ಮನೆಗೆ ಪ್ರೀತಿ ತುಂಬುತ್ತಾ, ಮಾರ್ಗದರ್ಶನ ನೀಡುತ್ತಿದ್ದ ಹಿರಿಯನೊಬ್ಬನನ್ನು ಕಳೆದುಕೊಂಡ ಕುಟುಂಬದಂತಾಗಿರುವ ಮಂಡ್ಯ ಜಿಲ್ಲೆಯ ಜನರ ಮಾತು.

ನಟ-ಮಾಜಿ ಸಚಿವ ಅಂಬರೀಶ್ ಹೃದಯಾಘಾತದಿಂದ ನಿಧನನಟ-ಮಾಜಿ ಸಚಿವ ಅಂಬರೀಶ್ ಹೃದಯಾಘಾತದಿಂದ ನಿಧನ

ಮಂಡ್ಯದ ಪಾಲಿಗೆ ನವೆಂಬರ್ 24 ದುರಂತದ ದಿನ. ಬಸ್ ನಾಲೆಗೆ ಬಿದ್ದು 30 ಮಂದಿ ಮೃತಪಟ್ಟ ದುರಂತದ ಸುದ್ದಿಯ ಆಘಾತದ ಮಧ್ಯೆಯೇ ಎಲ್ಲನ ನೆಚ್ಚಿನ ನಾಯಕ ಅಂಬರೀಶ್ ಅವರನ್ನು ಕಳೆದುಕೊಂಡ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ.

ಅಂಬರೀಶ್ ಇಡೀ ಕರ್ನಾಟಕದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಸಿನಿಮಾ ನಟನಾಗಿ ಮತ್ತು ರಾಜಕಾರಣಿಯಾಗಿ ಅವರು ತಮ್ಮದೇ ಛಾಪು ಮೂಡಿಸಿದ್ದವರು. ಆದರೆ, ಮಂಡ್ಯದ ಜನತೆಗೆ ಅಂಬರೀಶ್ ಕಂಡರೆ ಅತಿಯಾದ ಪ್ರೀತಿ.

ambarish no more fans wants final cremation in mandya

ಒಂದು ಕಾಲದಲ್ಲಿ ಸಿನಿಮಾರಂಗವನ್ನು ಆಳಿದ ಅಂಬರೀಶ್‌ ಅವರಿಗೆ 'ಮಂಡ್ಯದ ಗಂಡು' ಎಂಬ ಹೆಸರು ಸಹಜವಾಗಿಯೇ ಒಲಿದಿತ್ತು. ಮಂಡ್ಯದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರೂ, ಮಂಡ್ಯದ ಅಭಿಮಾನ ಕಡಿಮೆಯಾಗಿರಲಿಲ್ಲ.

ಈಗಲೂ ಮಂಡ್ಯದ ಜನರಲ್ಲಿ ಅಂಬರೀಶ್ ಅವರ ಕಡೆಗೆ ಪ್ರೀತಿ ಕಡಿಮೆಯಾಗಿರಲಿಲ್ಲ. ಅಂಬರೀಶ್ ಅವರಿಗೂ ಮಂಡ್ಯದ ಒಲವು ಕುಗ್ಗಿರಲಿಲ್ಲ. ಹೀಗಾಗಿಯೇ ಅವರು ಅಂಬರೀಶ್ ಅವರನ್ನು ಕಳೆದುಕೊಂಡ ಮಂಡ್ಯ ಅಕ್ಷರಶಃ ದುಃಖಿತಗೊಂಡಿದೆ.

ಬೆಂಗಳೂರಿನಲ್ಲಿಯೇ ಅಂಬರೀಶ್ ಅಂತ್ಯಕ್ರಿಯೆ : ಎಚ್.ಡಿ.ಕುಮಾರಸ್ವಾಮಿಬೆಂಗಳೂರಿನಲ್ಲಿಯೇ ಅಂಬರೀಶ್ ಅಂತ್ಯಕ್ರಿಯೆ : ಎಚ್.ಡಿ.ಕುಮಾರಸ್ವಾಮಿ

ಮಂಡ್ಯದಲ್ಲಿ ಹುಟ್ಟಿ ಬೆಳೆದ ಅಂಬರೀಶ್ ಅವರ ಮೃತದೇಹವನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಇರಿಸುವ ಮೊದಲು ಭಾನುವಾರ ಬೆಳಿಗ್ಗೆಯೇ ಮಂಡ್ಯಕ್ಕೆ ತೆಗೆದುಕೊಂಡು ಬರಬೇಕು ಎಂದು ಒತ್ತಾಯಿಸಿದ್ದಾರೆ.

ಅಂಬರೀಶ್ ಅವರ ಅಂತ್ಯ ಸಂಸ್ಕಾರವನ್ನು ಮಂಡ್ಯದಲ್ಲಿಯೇ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.

ಮಂಡ್ಯದಲ್ಲಿ ಎಲ್ಲೆಡೆ ಈಗ ಜನರು ಸೇರಿಕೊಂಡಿದ್ದಾರೆ. ಅನೇಕರು ಬೆಂಗೂರಿನತ್ತ ವಾಹನಗಳಲ್ಲಿ, ಬಸ್‌ಗಳಲ್ಲಿ ಧಾವಿಸುತ್ತಿದ್ದಾರೆ. ಈಗಾಗಲೇ ಆಸ್ಪತ್ರೆಯ ಮುಂಭಾಗದಲ್ಲಿ ಭಾರಿ ಸಂಖ್ಯೆಯ ಜನರು ಸೇರಿದ್ದಾರೆ.

ಅಂತ್ಯಸಂಸ್ಕಾರ ಬೆಂಗಳೂರಿನಲ್ಲಿಯೇ ನಡೆಯಲಿ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ಅಲ್ಲದೆ, ಮಂಡ್ಯಕ್ಕೆ ಮೃತದೇಹವನ್ನು ಕೊಂಡೊಯ್ಯಲು ಅನಾನುಕೂಲಗಳಿವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

English summary
Demised Actor, politician Ambarish is no more: Fans of the actor wants final cremation to be done in Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X