ತಮ್ಮ ರಾಜಕೀಯ ಪ್ರವೇಶಕ್ಕೆ ಕಾರಣಕೊಟ್ಟ ಸುಮಲತಾ ಅಂಬರೀಶ್

ಮಂಡ್ಯ, ಫೆಬ್ರವರಿ 21: ರಾಜಕೀಯಕ್ಕೆ ಬರಬೇಕೆಂಬುದರ ಹಿಂದಿನ ಉದ್ದೇಶವನ್ನು ಸುಮಲತಾ ಅಂಬರೀಶ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ರಾಜಕೀಯಕ್ಕೆ ಬರಬೇಕೆಂಬ ಉದ್ದೇಶಕ್ಕೆ ಮಂಡ್ಯಕ್ಕೆ ಬರುತ್ತಿಲ್ಲ ಬದಲಾಗಿ ಮಂಡ್ಯ ಜನತೆಗೋಷ್ಕರ ರಾಜಕೀಯಕ್ಕೆ ಬರುತ್ತಿದ್ದೇನೆ, ನಮ್ಮ ಮೇಲಿರುವ ಋಣವನ್ನು ತೀರಿಸಿಲು ನಾನು ಸಿದ್ಧವಾಗಿದ್ದೇನೆ ಎಂದು ಅಂದು ನಟಿ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ನಮ್ಮನ್ನು ಗುರುತಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಜೆಡಿಎಸ್​ನಿಂದ ಸ್ಪರ್ಧಿಸಲು ಆಹ್ವಾನ ಬಂದಿಲ್ಲ. ಕಾಂಗ್ರೆಸ್​ನಿಂದಲೇ ಸ್ಪರ್ಧಿಸುವ ಬಗ್ಗೆ ಉತ್ಸುಕಳಾಗಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದರು.

Actress Sumalatha to contest Lok Sabha polls from Mandya

ಅಂಬರೀಶ್ ಹುಟ್ಟೂರು ಬಿಟ್ಟರೆ ಇನ್ನೆಲ್ಲೂ ನನಗೆ ಈ ಪ್ರೀತಿ ಸಿಗುವುದಿಲ್ಲ. ನಾನು ಏನೇ ತೀರ್ಮಾನ ತೆಗೆದುಕೊಂಡರೂ ನಿಮ್ಮೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳುತ್ತೇನೆ. ಮಂಡ್ಯ ಜನರ ಆಸೆ ಮತ್ತು ಅಪೇಕ್ಷೆಯನ್ನು ಮಾಜಿ ಸಿಎಂ ಹಾಗೂ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಅಂಬಿ ಮೇಲಿಟ್ಟಿದ್ದ ಪ್ರೀತಿ ಹಾಗೂ ವಿಶ್ವಾಸ ನಮ್ಮ ಕುಟುಂಬದ ಮೇಲಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+