ಐಟಿ ದಾಳಿ ಬಗ್ಗೆ ವದಂತಿ ಬಲೂನಿಗೆ ಸೂಜಿ ಚುಚ್ಚಿದ ಅಂಬಿ ಮಗ!

Recommended Video

      ಐಟಿ ದಾಳಿ ವಿಷಯದಲ್ಲಿ ಅಭಿಷೇಕ್ ಅಂಬರೀಶ್ ಪ್ರತಿಕ್ರಿಯಿಸಿದ್ದು ಹೀಗೆ | Oneindia Kannada

      ಮದ್ದೂರು (ಮಂಡ್ಯ), ಮಾರ್ಚ್ 29: ರೇಡ್ ಮಾಡ್ಸೋಕೆ ನಾವು ಐಟಿ ಅಧಿಕಾರಿಗಳಾ, ನಾವು ಹೇಳಿದರೆ ಅಧಿಕಾರಿಗಳು ರೇಡ್ ಮಾಡುತ್ತಾರಾ ನೀವೇ ಹೇಳಿ? ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮೇಲಿನ ಐಟಿ ರೇಡ್ ಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಹೇಳಿದ್ದಾರೆ.

      ಹೆಚ್ಚೂ ಕಡಿಮೆ ಇದೇ ಧಾಟಿಯಲ್ಲಿ ಸುಮಲತಾ ಅವರು ಕೂಡ ನೀಡಿದ್ದಾರೆ. ಗುರುವಾರದಂದು ನಡೆದ ಆದಾಯ ಇಲಾಖೆ ಅಧಿಕಾರಿಗಳ ದಾಳಿ ವಿಚಾರದ ಬಗ್ಗೆ ಅಭಿಷೇಕ್ ಪ್ರತಿಕ್ರಿಯಿಸಿದ್ದು ಹೀಗೆ.

      ಮದ್ದೂರು ಪಟ್ಟಣದ ಎಳನೀರು ಮಾರುಕಟ್ಟೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಮಂಡ್ಯದಲ್ಲಿ ಅಂಬರೀಶ್ ಅವರ ಶಕ್ತಿ ಏನು ಎಂಬುದನ್ನು ಮತದಾರರು ಏಪ್ರಿಲ್ ಹದಿನೆಂಟರಂದು ನಡೆಯುವ ಚುನಾವಣೆಯಲ್ಲಿ ತೋರಿಸುವ ಮೂಲಕ ಮೇ ಇಪ್ಪತ್ಮೂರರಂದು ಹೊರಬೀಳಲಿರುವ ಫಲಿತಾಂಶದಲ್ಲಿ ನಮ್ಮ ತಾಯಿಯನ್ನು ಅಧಿಕ ಮತಗಳ ಅಂತರದಿಂದ ಗೆಲ್ಲುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

      Abhishekh Aambareesh denied the role in IT raid

      ಜಿಲ್ಲೆಯಲ್ಲಿ ಹೋದ ಕಡೆಯೆಲ್ಲ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ಜನರೇ ನಮ್ಮ ಬಳಿ ಬಂದು ಸ್ವಯಂಪ್ರೇರಿತರಾಗಿ ಬೆಂಬಲ ನೀಡುತ್ತಿದ್ದಾರೆ. ದಿನದಿಂದ ದಿನಕ್ಕೆ ನಮಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಮಂಡ್ಯ ಜಿಲ್ಲೆಯ ಜನರು ನಮಗೆ ತೋರಿಸುತ್ತಿರುವ ಪ್ರೀತಿ-ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಿಮ್ಮ ಸೇವೆ ಮಾಡಲು ನನ್ನ ತಾಯಿಗೆ ಒಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

      ಏಪ್ರಿಲ್ ಎರಡರಿಂದ ಚಿತ್ರನಟ ದರ್ಶನ್ ಅವರು ಮಂಡ್ಯಕ್ಕೆ ಪ್ರಚಾರಕ್ಕೆ ಬರುತ್ತಿದ್ದಾರೆ. ಯಶ್ ಅವರು ದಿನಾಂಕ ತಿಳಿಸಲಿದ್ದಾರೆ. ಸುದೀಪ್ ಅವರು ಪ್ರಚಾರಕ್ಕೆ ಬರುವ ವಿಚಾರವಾಗಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾತನಾಡಲಿದ್ದಾರೆ. ಜತೆಗೆ ಸುದೀಪ್ ಅವರೊಂದಿಗೆ ನಾನು ಸಹ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

      ನಾವು ಹಣ ನೀಡಿ ಯಾವುದೇ ಜನರನ್ನು ಸೇರಿಸುತ್ತಿಲ್ಲ. ಎಲ್ಲರೂ ಅವರಾಗಿಯೇ ನಮ್ಮ ಪ್ರಚಾರ ಸಂದರ್ಭದಲ್ಲಿ ಬರುತ್ತಿದ್ದಾರೆ. ಇದರಿಂದ ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+