ಕಾರವಾರ: ಸಾಗುವಾನಿ ಮರ ಸಾಗಾಟ ಯತ್ನ, ಓರ್ವ ಬಂಧನ
ಕಾರವಾರ, ಸೆಪ್ಟೆಂಬರ್ 25: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸೀಸಂ ಹಾಗೂ ಸಾಗುವಾನಿ ಕಟ್ಟಿಗೆಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಬೇಡ್ತಿ ಸೇತುವೆ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಜುನಾಥ ಪಟಗಾರ ತೇಲಂಗಾರ ಎಂದು ಗುರುತಿಸಲಾಗಿದೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ. ಯಲ್ಲಾಫುರ ತಾಲ್ಲೂಕಿನ ಮಂಚಿಕೇರಿ ಬಳಿಯ ಬಿಳ್ಕಿ ಅರಣ್ಯದಿಂದ ಸುಮಾರು 5.5 ಲಕ್ಷ ರು. ಮೌಲ್ಯದ 22 ಸಾಗವಾನಿ ಹಾಗೂ 2 ಸೀಸಂ ತುಂಡುಗಳನ್ನು ಪಿಕ್‍ಅಪ್ ವಾಹನದಲ್ಲಿ ಯಲ್ಲಾಪುರದ ಕಡೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ.

ಖಚಿತ ಮಾಹಿತಿ ಪಡೆದಿದ್ದ ಡಿಎಫ್‍ಒ ಡಿ.ಯತೀಶಕುಮಾರ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಪ್ರಶಾಂತ, ಆರ್‍ಎಫ್‍ಒ ಶ್ರೀಧರ ತೆಗ್ಗಿನಮನೆ, ಡಿಆರ್‍ಎಫ್‍ಒಗಳಾದ ಮಂಜುನಾಥ ಆಗೇರ, ವಿನಯ ಶಿವಣಗಿ, ಕಲ್ಲಪ್ಪ ಬರಗೂರ, ಅರಣ್ಯ ರಕ್ಷಕರಾದ ಜಗದೀಶ ಪಾಲಕನವರ್, ವಿಷ್ಣು ಪೂಜಾರಿ, ಸತ್ಯಪ್ಪ ಉಪ್ಪಾರ, ಮಂಜುನಾಥ ನಾಯ್ಕ ಕಾರ್ಯಾಚರಣೆ ನಡೆಸಿ ಅರಣ್ಯ ಸಂಪತ್ತನ್ನು ರಕ್ಷಿಸಿದ್ದಾರೆ.












Click it and Unblock the Notifications