ಕೊಡಗು ಪ್ರವಾಸಿ ತಾಣಗಳಿಗೆ ನಿರ್ಬಂಧ; ವಿವರ ನೀಡಿದ ಜಿಲ್ಲಾಡಳಿತ

ಮಡಿಕೇರಿ, ಏಪ್ರಿಲ್ 05; ಎರಡು ದಿನಗಳ ಹಿಂದೆ ಕೊಡಗು ಜಿಲ್ಲಾಧಿಕಾರಿಗಳು ಆದೇಶವೊಂದನ್ನು ಹೊರಡಿಸಿ ಎಲ್ಲಾ ಪ್ರವಾಸಿ ತಾಣಗಳಿಗೂ ಏಪ್ರಿಲ್‌ 20ರ ವರೆಗೆ ಪ್ರವೇಶವನ್ನು ನಿರ್ಬಂಧಿಸಿದ್ದರು.

ಈ ಆದೇಶದ ಗೊಂದಲವನ್ನು ನಿವಾರಿಸಲು ಸೋಮವಾರ ಸ್ಪಷ್ಟೀಕರಣ ನೀಡಿದ್ದಾರೆ. ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ರಾಜ್ಯ / ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿ ಈ ಆದೇಶ ನೀಡಲಾಗಿದೆ.

ಈ ಸಂಬಂಧ ಕೊಡಗು ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮುಂಜಾಗ್ರತೆ ಕೈಗೊಳ್ಳುವ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಿತ್ತು. ಉಲ್ಲೇಖದಂತೆ ಹೊರಡಿಸಲಾದ ಆದೇಶಗಳ ಬಗ್ಗೆ ಈ ಕೆಳಕಂಡಂತೆ ಸ್ಪಷ್ಟೀಕರಣ ನೀಡಲಾಗಿದೆ.

Tourist Entry Banned For Kodagu Clarification

* ಜಿಲ್ಲೆಯ ಪ್ರವಾಸಿ ತಾಣಗಳಾದ ಅಬ್ಬಿ ಫಾಲ್ಸ್, ಮಾಂದಾಲ್‌ಪಟ್ಟಿ, ರಾಜಾಸೀಟ್, ಸನ್ನಿಸೈಡ್ ಮ್ಯೂಸಿಯಂ, ಚೇಲಾವರ ಫಾಲ್ಸ್, ನಾಲ್ಕು ನಾಡು ಅರಮನೆ, ದುಬಾರೆ, ಚಿಕ್ಲಿಹೊಳೆ ಡ್ಯಾಂ, ಹಾರಂಗಿ, ಮಲ್ಲಳ್ಳಿ ಫಾಲ್ಸ್, ಇರ್ಪು ಫಾಲ್ಸ್, ಮಡಿಕೇರಿಯ ರಾಜರ ಗದ್ದುಗೆಗಳಿಗೆ 20/4/2021ರ ವರೆಗೆ ಪ್ರವಾಸಿಗರ ಮತ್ತು ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿದೆ.

* ರೆಸಾರ್ಟ್‌, ಹೋಂ ಸ್ಟೇ ಇತ್ಯಾದಿ ಆತಿಥ್ಯ ಸೇವೆಗಳನ್ನು ಒದಗಿಸುವ ಸ್ಥಳಗಳಲ್ಲಿ ಶಿಷ್ಟಾಚಾರದನ್ವಯ ಕೋವಿಡ್ ಮುನ್ನೆಚ್ಚರಿಕೆಗಾಗಿ ಸೂಕ್ತ ವರ್ತನೆಗಳನ್ನು ಅಂದರೆ, ಕಡ್ಡಾಯವಾಗಿ ಮುಖಗವಸು, ದೈಹಿಕ ಅಂತರ ಪಾಲನೆ, ಸ್ಯಾನಿಟೈಸ್, ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಷ್‌ಗಳ ಬಳಕೆ ಮಾಡುವುದು.

* ಎಲ್ಲಾ ಸ್ವಿಮ್ಮಿಂಗ್ ಫೂಲ್‌ಗಳು ದಿನಾಂಕ 20/4/2021ರ ವರೆಗೆ ಕಾರ್ಯಾಚರಿಸತಕ್ಕದಲ್ಲ.

ಸರ್ಕಾರದ ಇತ್ತೀಚಿನ ಆದೇಶದಂತೆ ಜಿಮ್‌ಗಳು ಈ ಕೆಳಕಂಡ ಕ್ರಮಗಳಂತೆ ಕಾರ್ಯಾಚರಿಸುವುದು.

* ಆಗಮಿತರ ಸಂಖ್ಯೆ ಏಕಕಾಲದಲ್ಲಿ ಒಟ್ಟು ಸಾಮರ್ಥ್ಯ ಬಲದ 50% ಮೀರದಂತೆ ಕಾರ್ಯಾಚರಿಸುವುದು. ಪ್ರತಿ ಬಳಕೆಯ ನಂತರ ಉಪಕರಣಗಳನ್ನು ಸ್ಯಾನಿಟೈಸ್ ಮಾಡುವುದು.

* ಶಿಷ್ಠಾಚಾರದನ್ವಯ ಕೋವಿಡ್ ಮುನ್ನಚ್ಚರಿಕೆಗಾಗಿ ಸೂಕ್ತ ವರ್ತನೆಗಳನ್ನು ಅಂದರೆ, ಕಡ್ಡಾಯವಾಗಿ ಮುಖಗವಸು, ದೈಹಿಕ ಅಂತರ ಪಾಲನೆ, ಸ್ಯಾನಿಟೈಸೇಷನ್, ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಷ್‌ಗಳ ಬಳಕೆಯನ್ನು ಮಾಡುವುದು.

* ಮೇಲಿನ ಆದೇಶವನ್ನು ಉಲ್ಲಂಘಿಸಿದಲ್ಲಿ ಸದರಿ ಜಿಮ್‌ಗಳನ್ನು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಮುಚ್ಚಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+