ಜೀವನದಲ್ಲಿ ಜಿಗುಪ್ಸೆ; ಮಡಿಕೇರಿಯಲ್ಲಿ ಗುಂಡು ಹಾರಿಸಿಕೊಂಡು ವೃದ್ಧೆ ಆತ್ಮಹತ್ಯೆ
ಮಡಿಕೇರಿ, ಮೇ 02; ಜೀವನದಲ್ಲಿ ಜಿಗುಪ್ಸೆಗೊಂಡ ವೃದ್ಧೆಯೊಬ್ಬರು ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಣಿಕೊಪ್ಪ ಸಮೀಪದ ಹೈಸೊಡ್ಲೂರಿನಲ್ಲಿ ನಡೆದಿದೆ.
Recommended Video
ಬಾಲಿವುಡ್ ದಂತಕಥೆ ರಿಷಿ ಕಪೂರ್ ಇನ್ನಿಲ್ಲ | Rishi Kapoor Filmibeat
ಇಲ್ಲಿನ ಕಾಫಿ ಬೆಳೆಗಾರ ಬಯವಂಡ ಪಿ ಲಕ್ಷ್ಮಣ ಎಂಬುವವರ ಪತ್ನಿ ತಾರಾ (71) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಂಟಿ ನಳಿಗೆಯ ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇವರ ಪತಿ ಎರಡು ವರ್ಷಗಳ ಹಿಂದಷ್ಟೇ ನಿಧನರಾಗಿದ್ದರು. ಅವರ ಪತಿ ನಿಧನದ ನಂತರ ಇವರು ಮಾನಸಿಕ ಖಿನ್ನತೆಯಿಂದ ಬಳಲುತಿದ್ದರೆಂದು ಕೌಟುಂಬಿಕ ಮೂಲಗಳು ತಿಳಿಸಿವೆ. ಶ್ರೀಮಂಗಲ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications