ಕೊಡಗು ವಿದ್ಯಾರ್ಥಿಗಳಿಗೆ ಹೊಸ ಅಂಕಪಟ್ಟಿ ನೀಡಲು ಸರ್ಕಾರ ಸೂಚನೆ
ಬೆಂಗಳೂರು, ಆಗಸ್ಟ್ 22: ಪ್ರವಾಹದಲ್ಲಿ ಅಂಕಪಟ್ಟಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಹೊಸ ಅಂಕಪಟ್ಟಿ ನೀಡುವಂತೆ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಸೂಚಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹದಿಂದಾಗಿ ಕೊಡಗು ಜನರು ಮನೆ, ಆಸ್ತಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ, ವಿದ್ಯಾರ್ಥಿಗಳ ಅಂಕಪಟ್ಟಿ, ಮೂಲ ದಾಖಲೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ, ಇದರಿಂದ ವಿದ್ಯಾರ್ಥಿಗಳು ಆತಂಕಪಡುವುದು ಬೇಡ, ಹೊಸ ಅಂಕಪಟ್ಟಿಯನ್ನು ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಳೆದ ಒಂದು ತಿಂಗಳಿಂದೀಚೆಗೆ ಕೊಡಗಿನಲ್ಲಿ ಸುರಿದ ಮಳೆಯಿಂದ ಜನತೆ ತತ್ತರಿಸಿ ಹೋಗಿದೆ, ಕೇರಳದಲ್ಲಿ ಸಂಭವಿಸಿದ ಪ್ರವಾಹದ ಬಳಿಕ ಶಾಲಾ, ಕಾಲೇಜು ದಾಖಲೆಗಳೆಲ್ಲವನ್ನೂ ಕಳೆದುಕೊಂಡ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ, ಕರ್ನಾಟಕದಲ್ಲಿಯೂ ಇಂತಹ ಘಟನೆ ಸಂಭವಿಸದಂತೆ ಎಚ್ಚರವಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೊಗು, ದಕ್ಷಿಣ ಕನ್ನಡದಲ್ಲಿ ಭಾರಿ ಮಳೆಗೆ ಸಾವಿರಾರು ಎಕರೆ ಜಮೀನು ನಾಶವಾಗಿದೆ, ಜನರು ನಿರಾಶ್ರಿತರಾಗಿದ್ದಾರೆ, ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ನೆಲೆಸಿದ್ದಾರೆ, ರೋಗ-ರುಜಿನೆ ಭೀತಿ ಎದುರಾಗಿದೆ, ಮನೆಗಳೆಲ್ಲವೂ ನೆಲಸಮವಾಗಿರುವ ಕಾರಣ, ಆಸ್ತಿಪತ್ರವಾಗಲಿ, ಮಾರ್ಕ್ಸ್‌ಕಾರ್ಡ್ ಇನ್ನಿತರೆ ಮೂಲ ದಾಖಲೆಗಳು ಕಾಣೆಯಾಗಿದೆ.












Click it and Unblock the Notifications