ಮಡಿಕೇರಿಯಲ್ಲಾಯ್ತು ವಿರಾಜಪೇಟೆ ಶಾಸಕ ಕೆಜಿ ಬೋಪಯ್ಯ ಮಗಳ ಮದುವೆ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜನವರಿ 30: ಮಾಜಿ ಸ್ಪೀಕರ್, ವಿರಾಜಪೇಟೆ ಕ್ಷೇತ್ರದ ಹಾಲಿ ಶಾಸಕರಾದ ಕೊಂಬಾರನ ಜಿ.ಬೋಪಯ್ಯ ಹಾಗೂ ಕುಂತಿ ದಂಪತಿ ಪುತ್ರಿ ಪ್ರಜ್ಞಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಚೆಟ್ಟಿಮಾಡ ಪ್ರಭಾ ಮತ್ತು ದಿ. ಕಾರ್ಯಪ್ಪ ಅವರ ಪುತ್ರ ವೈಭವ್ ಅವರೊಂದಿಗೆ ಜನವರಿ 29ರಂದು ಮಡಿಕೇರಿಯ ಕ್ರಿಸ್ಟಲ್ ಹಾಲ್ ನಲ್ಲಿ ಸಂಪ್ರದಾಯಬದ್ಧವಾಗಿ ವಿಜೃಂಭಣೆಯಿಂದ ವಿವಾಹ ಮಹೋತ್ಸವ ನಡೆಯಿತು.

ವಿವಾಹ ಮಹೋತ್ಸವದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳುವುದರೊಂದಿಗೆ ನೂತನ ವಧು-ವರರಿಗೆ ಶುಭ ಹಾರೈಸಿದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಅಧ್ಯಕ್ಷ ಡಿ.ಎಚ್.ಶಂಕರ್ ಮೂರ್ತಿ, ಶಾಸಕ ಅಪ್ಪಚ್ಚು ರಂಜನ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ, ಚಿತ್ರ ನಟ ಅಂಬರೀಶ್,[ನೂರು ಬಗೆ ಖಾದ್ಯ, 20 ಸಾವಿರ ಅತಿಥಿಗಳು: ಕೇರಳದಲ್ಲಿ ಮದುವೆ ವೈಭೋಗ]

ಮಾಜಿ ಸ್ಪೀಕರ್, ವಿರಾಜಪೇಟೆ ಕ್ಷೇತ್ರದ ಹಾಲಿ ಶಾಸಕರಾದ ಕೊಂಬಾರನ ಜಿ.ಬೋಪಯ್ಯ ಹಾಗೂ ಕುಂತಿ ದಂಪತಿ ಪುತ್ರಿ ಪ್ರಜ್ಞಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಚೆಟ್ಟಿಮಾಡ ಪ್ರಭಾ ಮತ್ತು ದಿ. ಕಾರ್ಯಪ್ಪ ಅವರ ಪುತ್ರ ವೈಭವ್ ಅವರೊಂದಿಗೆ ಜನವರಿ 29ರಂದು ಮಡಿಕೇರಿಯ ಕ್ರಿಸ್ಟಲ್ ಹಾಲ್ ನಲ್ಲಿ ಸಂಪ್ರದಾಯಬದ್ಧವಾಗಿ ವಿಜೃಂಭಣೆಯಿಂದ ವಿವಾಹ ಮಹೋತ್ಸವ ನಡೆಯಿತು.

ಮಾಜಿ ಸಚಿವರಾದ ಸಿ.ಟಿ.ರವಿ, ವಿ.ಸೋಮಣ್ಣ, ಎಂ.ಸಿ.ನಾಣಯ್ಯ, ಬಿ.ಎ.ಜೀವಿಜಯ, ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಎಂಎಲ್ ಸಿಗಳಾದ ಸುನಿಲ್ ಸುಬ್ರಮಣಿ, ಚಿಕ್ಕಮಗಳೂರು ಎಂ.ಎಲ್.ಸಿ ಪ್ರಾಣೇಶ್, ಮಾಜಿ ಎಂಎಲ್.ಸಿ ಅರುಣ್ ಮಾಚಯ್ಯ, ಕೆಪಿಎಸ್ ಸಿಯ ಶ್ಯಾಮ್ ಭಟ್ ಸೇರಿದಂತೆ ಹಲವಾರು ರಾಜಕಾರಣಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Virajpet MLA KG Boppaiah's daughter Prajna marriage held in Madikeri on Sunday.
Please Wait while comments are loading...