ಪ್ರವಾಸಿಗರ ಗಮನಕ್ಕೆ: ಕೊಡಗು ಈ ರಸ್ತೆಗಳು ಒಂದು ತಿಂಗಳು ಬಂದ್

ಮಡಿಕೇರಿ, ಏಪ್ರಿಲ್ 09: ಕೊಡಗು ಜಿಲ್ಲೆಗೆ ಬೇಸಿಗೆ ರಜೆಯ ಸಂದರ್ಭದಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಸಿಹಿಸುದ್ದಿಯೊಂದಿದೆ. ಎರಡು ರಸ್ತೆಗಳು ಒಂದು ತಿಂಗಳ ಕಾಲ ಬಂದ್ ಆಗಲಿದ್ದು, ಪ್ರವಾಸಿಗರು ಈ ಕುರಿತು ಮಾಹಿತಿ ತಿಳಿದು ಸಂಚಾರವನ್ನು ನಡೆಸಬಹುದು. ಮಡಿಕೇರಿ-ಕುಟ್ಟ ಹೆದ್ದಾರಿ, ವಿರಾಜಪೇಟೆ-ಕರಡ ಜಿಲ್ಲಾ ಮುಖ್ಯ ರಸ್ತೆಯು ಬಂದ್ ಆಗಲಿದ್ದು, ಜಿಲ್ಲಾಡಳಿತ ಪರ್ಯಾಯ ಮಾರ್ಗವನ್ನು ಸಹ ತಿಳಿಸಿದೆ.

ಮಡಿಕೇರಿ-ಕುಟ್ಟ ಹೆದ್ದಾರಿ ಸಂಖ್ಯೆ 89ರ ಕಿ. ಮೀ. 80.40 ರಲ್ಲಿನ (ಮಂಚಳ್ಳಿ ಗ್ರಾಮ, ಶ್ರೀಮಂಗಲ ಹೋಬಳಿ) ರಸ್ತೆ ಭಾಗದಲ್ಲಿ ಮಳೆಹಾನಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ಮತ್ತು ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ (ತಿದ್ದುಪಡಿ ನಿಯಮಗಳು 1990) ನಿಯಮ 221 ಎ(5) ರಲ್ಲಿ ಪ್ರದತ್ತವಾದ ಅಧಿಕಾರದಂತೆ ರಸ್ತೆಯನ್ನು ಬಂದ್ ಮಾಡಲಾಗಿದೆ.

Kodagu Road Closed From April 8 To May 10

ಏಪ್ರಿಲ್ 8 ರಿಂದ ಮೇ 10ರ ತನಕ ಪೊನ್ನಂಪೇಟೆ ತಾಲ್ಲೂಕು ಮಡಿಕೇರಿ ಕುಟ್ಟ ಹೆದ್ದಾರಿ ಸಂಖ್ಯೆ 89ರ ಕಿ. ಮೀ. 80.40 ರಲ್ಲಿನ(ಮಂಚಳ್ಳಿ ಗ್ರಾಮ, ಶ್ರೀಮಂಗಲ ಹೋಬಳಿ) ರಸ್ತೆ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.

ಈ ಸಮಯದಲ್ಲಿ ವಾಹನ ಸವಾರರು ಶ್ರೀಮಂಗಲ-ನಾಲ್ಕೇರಿ ಜಿಲ್ಲಾ ಮುಖ್ಯ ರಸ್ತೆಯ ಮುಖಾಂತರ (6 ಕಿ. ಮೀ.), ಕಾಕೂರು-ಹೆರ್ಮಾಡು-ಬೊಳ್ಳರಿಗೇಟ್ ಜಿಲ್ಲಾ ಮುಖ್ಯ ರಸ್ತೆಯ ಮುಖಾಂತರ (6.90 ಕಿ. ಮೀ.) ಮಾರ್ಗವನ್ನು ಬಳಸಬೇಕು ಎಂದು ಸೂಚನೆ ನೀಡಲಾಗಿದೆ.

ಈ ಬಗ್ಗೆ ಮೋಟಾರ್ ವಾಹನ ಕಾಯ್ದೆ 1988 ರ ಸೆಕ್ಷನ್ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989ರ (ತಿದ್ದುಪಡಿ ನಿಯಮಗಳು 1990) ನಿಯಮ 221ಎ(2) ರಂತೆ ಅವಶ್ಯವಿರುವ ಸಂಜ್ಞೆ/ ಸೂಚನಾ ಫಲಕವನ್ನು ಅಳವಡಿಸಲು ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕೊಡಗು ವಿಭಾಗ, ಮಡಿಕೇರಿ ಇವರಿಗೆ ಸೂಚನೆ ನೀಡಲಾಗಿದೆ.

ವಿರಾಜಪೇಟೆ-ಕರಡ ಮುಖ್ಯ ರಸ್ತೆ: ವಿರಾಜಪೇಟೆ ತಾಲೂಕಿನ ವಿರಾಜಪೇಟೆ-ಕರಡ ಜಿಲ್ಲಾ ಮುಖ್ಯ ರಸ್ತೆಯ ಕಿ. ಮೀ.16.40ರಲ್ಲಿ (ಸರಪಳಿ 16.40 ಕಿ. ಮೀ. ತೋರ ಹತ್ತಿರ) ರಸ್ತೆ ಭಾಗದಲ್ಲಿ ಮಳೆಹಾನಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ಮತ್ತು ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ (ತಿದ್ದುಪಡಿ ನಿಯಮಗಳು 1990) ನಿಯಮ 221ಎ(5) ರಲ್ಲಿ ಪ್ರದತ್ತವಾದ ಅಧಿಕಾರದಂತೆ ರಸ್ತೆಯನ್ನು ಬಂದ್ ಮಾಡಲಾಗಿದೆ.

ಏಪ್ರಿಲ್ 8ರಿಂದ ಮೇ 10ರ ತನಕ ವಿರಾಜಪೇಟೆ ತಾಲ್ಲೂಕಿನ ವಿರಾಜಪೇಟೆ-ಕರಡ ಜಿಲ್ಲಾ ಮುಖ್ಯ ರಸ್ತೆಯ ತೆರಮೆಮೊಟ್ಟಿಯ 16.40 ಕಿ. ಮೀ.ರಲ್ಲಿ (ತೋರ ಹತ್ತಿರ) ರಸ್ತೆ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.

ರಸ್ತೆ ಬಂದ್ ಆಗಿರುವ ಸಂದರ್ಭದಲ್ಲಿ ವಾಹನ ಸವಾರರು ತೋರ-ಕೆದಮುಳ್ಳೂರು-ಬೋಯಿಕೇರಿ ಕಡೆಯಿಂದ ವಿರಾಜಪೇಟೆ 10.30 ಕಿ. ಮೀ. ದೂರ ವಿರುತ್ತದೆ. ತೋರ-ಹೆಗ್ಗಳ-ಆರ್ಜಿ ಕಡೆಯಿಂದ ವಿರಾಜಪೇಟೆಗೆ 19.40 ಕಿ. ಮೀ. ದೂರ ವಿರುತ್ತದೆ ಈ ಮಾರ್ಗವನ್ನು ಬಳಸುವುದು.

ಈ ಬಗ್ಗೆ ಮೋಟಾರ್ ವಾಹನ ಕಾಯ್ದೆ 1988 ರ ಸೆಕ್ಷನ್ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989 ರ (ತಿದ್ದುಪಡಿ ನಿಯಮಗಳು 1990) ನಿಯಮ 221ಎ(2) ರಂತೆ ಅವಶ್ಯವಿರುವ ಸಂಜ್ಞೆ/ ಸೂಚನಾ ಫಲಕವನ್ನು ಅಳವಡಿಸಲು ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಕೊಡಗು ವಿಭಾಗ, ಮಡಿಕೇರಿ ಇವರಿಗೆ ಸೂಚನೆ ಕೊಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+