ಇದಪ್ಪಾ ವರಸೆ..!: ಗ್ರಾ.ಪಂ ಚುನಾವಣೆಯಲ್ಲಿ ಪತಿಗೆ ಪತ್ನಿಯೇ ಪ್ರತಿಸ್ಪರ್ಧಿ

ಮಡಿಕೇರಿ, ಡಿಸೆಂಬರ್ 17: ಕೊಡಗು ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಪರೂಪದ ಸ್ಪರ್ಧೆಯೊಂದರಲ್ಲಿ ಗಂಡನ ವಿರುದ್ಧವೇ ಹೆಂಡತಿಯೊಬ್ಬರು ಸ್ಪರ್ಧೆಗೆ ಇಳಿದಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್ ನಲ್ಲಿ ಪರಸ್ಪರ ಪತಿ-ಪತ್ನಿ ಸ್ಪರ್ಧೆಗೆ ವೇದಿಕೆ ರೆಡಿಯಾಗಿದೆ.

ಸೋಮವಾರಪೇಟೆ ತಾಲೂಕಿನ ಕಂಬಿಬಾಣೆ ಗ್ರಾಮದ ನಿವಾಸಿ ಕಿಶೋರ್ ಅವರು ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅದೇ ವಾರ್ಡಿನಿಂದಲೇ ಅವರ ಪತ್ನಿ ಶ್ರೀಜಾ ಕೂಡ ಸಾಮಾನ್ಯ ಅಭ್ಯರ್ಥಿಯಾಗಿ ಗಂಡನ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ.

Kodagu: Grama Panchayat Election: Husband And Wife Contesting In Same Ward

ಇದೇ ಡಿ.22 ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಪತಿ-ಪತ್ನಿ ಇಬ್ಬರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇಬ್ಬರೂ ಒಂದೇ ವಾರ್ಡಿನಿಂದ ಸ್ಪರ್ಧಿಸಿರುವ ಬಗ್ಗೆ ಪ್ರಶ್ನಿಸಿದರೆ, ""ಮನೆಯಲ್ಲಿ ಅಷ್ಟೇ ನಾವು ಪತಿ-ಪತ್ನಿ. ಹೊರಗೆ ಚುನಾವಣಾ ಕಣದಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳು'' ಎನ್ನುತ್ತಾರೆ.

ಜನರಿಗೆ ಯಾರ ಮೇಲೆ ಒಲವಿದೆಯೋ ಅವರಿಗೆ ಮತಹಾಕಿ ಗೆಲ್ಲಿಸುತ್ತಾರೆ. ಇಬ್ಬರಲ್ಲಿ ಯಾರು ಗೆದ್ದರೂ ಸಂತೋಷವೇ. ಆದರೆ ಜನರಿಗೆ ಯಾರು ಬೇಕಾಗಿದೆಯೋ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭ್ಯರ್ಥಿ ಕಿಶೋರ್.

Kodagu: Grama Panchayat Election: Husband And Wife Contesting In Same Ward

ಮತ್ತೊಂದು ವಿಶೇಷವೆಂದರೆ ಇಬ್ಬರು ಒಟ್ಟೊಟ್ಟಿಗೆ ಹೋಗಿ ಮತಯಾಚನೆ ಮಾಡುತ್ತಿದ್ದು, ಇಬ್ಬರು ನಮಗೆ ಮತ ನೀಡಿ ಅಂತ ಕೇಳುತ್ತಿದ್ದಾರೆ. ಇನ್ನು ಇದೇ ವಾರ್ಡ್ ನಿಂದ ಇನ್ನೂ 9 ಜನರು ಕಣದಲ್ಲಿದ್ದು, ಜನರು ಮಾತ್ರ ಯಾರನ್ನು ಆಯ್ಕೆ ಮಾಡುತ್ತಾರೋ ಫಲಿತಾಂಶ ಬಂದ ನಂತರವೇ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+