ದೀರ್ಘ ರಜೆಯ ಮೇಲೆ ತೆರಳಿದ ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ
ಕೊಡಗು, ಜನವರಿ 11 : ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸುಧೀರ್ಘ ರಜೆಯ ಮೇಲೆ ತೆರಳಿದ್ದಾರೆ. ಕೆ.ಲಕ್ಷ್ಮೀ ಪ್ರಿಯ ಅವರು ಪ್ರಭಾರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಎರಡು ತಿಂಗಳ ರಜೆಯ ಮೇಲೆ ಪಿ.ಐ.ಶ್ರೀವಿದ್ಯಾ ಅವರು ತೆರಳಿದ್ದಾರೆ. ತಂದೆಯ ಅನಾರೋಗ್ಯದ ಹಿನ್ನಲೆಯಲ್ಲಿ ಅವರು ರಜೆ ಪಡೆದಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಓ ಕೆ.ಲಕ್ಷ್ಮೀ ಪ್ರಿಯ ಅವರು ಪ್ರಭಾರಿ ಜಿಲ್ಲಾಧಿಕಾರಿಯಾಗಿದ್ದಾರೆ.
2018ರ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳ ತಂಡ ರಚನೆ ಮಾಡಿ ಅವರು ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದಾರೆ.

ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಶ್ರೀವಿದ್ಯಾ ಅವರು ಕೆಲಸ ಮಾಡಿದ ರೀತಿ ಸರ್ಕಾರ ಮತ್ತು ಜನರ ಪ್ರಶಂಸೆಗೆ ಕಾರಣವಾಗಿತ್ತು. ಈಗ ತುರ್ತು ಕೆಲಸ ವಿರುವ ಕಾರಣ ಅವರು ಸುಧೀರ್ಘ ರಜೆಯ ಮೇಲೆ ತೆರಳಿದ್ದಾರೆ.
ಪಾಕೃತಿಕ ವಿಕೋಪದಿಂದ ನೆಲ ಕಚ್ಚಿರುವ ಕೊಡಗು ಪ್ರವಾಸೋದ್ಯಮವನ್ನು ಉತ್ತೇಜಿಸಲು ಜನವರಿ 11ರ ಶುಕ್ರವಾರದಿಂದ ಮೂರು ದಿನಗಳ 'ಕೊಡಗು ಪ್ರವಾಸಿ ಉತ್ಸವ' ನಡೆಯುತ್ತಿದೆ. ಉತ್ಸವನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ಕೆ.ಲಕ್ಷ್ಮೀ ಪ್ರಿಯ ಅವರಿಗೆ ವಹಿಸಲಾಗಿದೆ.
ಕೊಡಗಿನಲ್ಲಿ ಪಾಕೃತಿಕ ವಿಕೋಪದಿಂದ ಸಂತ್ರಸ್ತಗೊಂಡವರಿಗೆ 840 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಮನೆಗಳ ನಿರ್ಮಾಣದ ಉಸ್ತುವಾರಿಯನ್ನು ಪ್ರಭಾರಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯ ಅವರು ನೋಡಿಕೊಳ್ಳುತ್ತಾರೆ.












Click it and Unblock the Notifications