ಕೊಡಗಿನಲ್ಲಿ ಭೂಕಂಪ: ವದಂತಿಗೆ ಕಿವಿಗೊಡದಂತೆ ಡಿಸಿ ಮನವಿ

ಬೆಂಗಳೂರು, ಆಗಸ್ಟ್ 18: ಕೊಡಗು ಜಿಲ್ಲೆಯಲ್ಲಿ ಭೂಕಂಪವಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು, ಇದನ್ನು ಸಾರ್ವಜನಿಕರು ನಂಬಬೇಡಿ ಎಂದು ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಮನವಿ ಮಾಡಿದ್ದಾರೆ.ಈ ಕುರಿತು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಕೂಡ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಡಿದ್ದು ಇಂತಹ ಸುದ್ದಿಗೆ ಕಿವಿಗೊಡದಂತೆ ಜನತೆಗೆ ತಿಳಿಸಿದ್ದಾರೆ.

Kodagu DC clarifies no earthquake in the district

ಕಳೆದ ಮೂರ್ನಾಲ್ಕು ದಿನಗಳಿಂದ ಕೊಡಗು ಜಿಲ್ಲೆಯನ್ನು ಭೂಕಂಪವಾಗುತ್ತದೆ ಎನ್ನುವ ಸುಳ್ಳು ಸುದ್ದಿ ವಾಟ್ಸ್‌ ಆಪ್‌, ಫೇಸ್‌ಬುಕ್‌ ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ, ಇಂತಹ ಸುದ್ದಿಗಳನ್ನು ನಂಬಬೇಡಿ, ಕೊಡಗಿನಲ್ಲಿ ಭೂಕಂಪವಾಗುವ ಕುರಿತು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವಾಗಲಿ ಅಥವಾ ಭೂ ವಿಜ್ಞಾನ ಇಲಾಖೆಯಾಗಲಿ ಯಾವುದೇ ಮುನ್ಸೂಚನೆ ನೀಡಿಲ್ಲ, ಸಾರ್ವಜನಿಕರು ಹೆದರುವ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದು ಭೂಕಂಪ ಕುರಿತು ಯಾವುದೇ ಮುನ್ಸೂಚನೆ ದೊರೆತಿಲ್ಲ ಇದೊಂದು ಸುಳ್ಳುಸುದ್ದಿ ಯಾರೂ ಭಯಪಡುವ ಅಗತ್ಯವಿಲ್ಲ, ಯಾವುದೇ ಭೂಕಂಪ ಸಂಭವಿಸುವುದಿಲ್ಲ ಎಂದು ಧೈರ್ಯತುಂಬಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+