Earthquake: ರಾಜ್ಯದ ಕೊಡಗು ಜಿಲ್ಲೆಯಲ್ಲಿ ಇಂದು ಲಘು ಭೂಕಂಪ, ಹವಾಮಾನ ವರದಿ
ಮಡಿಕೇರಿ, ಮಾರ್ಚ್ 12: ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯ ಮಡಿಕೇರಿ ಭಾಗದಲ್ಲಿ ಬುಧವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಮಡಿಕೇರಿ ತಾಲೂಕಿನ ಎರಡು ಮೂರು ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಒಟ್ಟು 1.6 ತೀವ್ರತೆ ದಾಖಲಾಗಿದೆ. ಮದೆ ಗ್ರಾಮ ವ್ಯಾಪ್ತಿಯ ವಾಯವ್ಯಕ್ಕೆ 2.4 ದೂರದಲ್ಲಿ ಭೂಮಿ ಕಂಪಿಸಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಡಿಕೇರಿ ತಾಲೂಕಿನ ಮದೆನಾಡು, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ 10.49ಕ್ಕೆ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವ ಗ್ರಾಮಸ್ಥರಿಗಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ನಗರದದಿಂದ ಈಶಾನ್ಯಕ್ಕೆ 4.0 ಕಿ.ಮೀ. ದೂರದಲ್ಲಿ ಭೂಕಂಪನ ಸಂಭವಿಸಿದೆ. ಮಡಿಕೇರಿ ತಾಲ್ಲೂಕಿನ ಕುಶಾಲನಗರ ತಾಲ್ಲೂಕಿನ ಹಾರಂಗಿ ಅಣೆಕಟ್ಟು ವೀಕ್ಷಣಾಲಯದ 23.8 ಕಿ.ಮೀ. ದೂರದಲ್ಲಿ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಗುಡ್ಡಗಾಡು ಪ್ರದೇಶವಾದ್ದರಿಂದ ಕಡಿಮೆ ತೀವ್ರತೆಯ ಭೂಕಂಪನ ಇದಾಗಿದ್ದರು ಜನರು ಭಯಪಟ್ಟುಕೊಂಡಿದ್ದಾರೆ. ಕೇಂದ್ರ ಬಿಂದುವಿನಿಂದ ಸುಮಾರು 15-20 ಕಿ.ಮೀ. ಆಸುಪಾಸಿನ ವರೆಗೆ ಭೂಮಿಯ ಕಂಪನದ ಸ್ಪಷ್ಟ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಯಿಂದ ತಾಲೂಕಿನ ಯಾವ ಗ್ರಾಮದಲ್ಲೂ ಹಾನಿ, ತೊಂದರೆ ಆಗಲಿ ಆಗಿಲ್ಲ.
ಭೂಕಂಪನದ ತೀವ್ರತೆ ಪ್ರಮಾಣ 1.6 ರಷ್ಟು ದಾಖಲಾಗಿದೆ. ಇದರಿಂದ ಹಾನಿ ಸಾಧ್ಯತೆ ತೀರಾ ಕಡಿಮೆ. ವಿನಾಶಕಾರಿಯಲ್ಲದ ಘಟನೆಯಿಂದ ಯಾರು ಭಯಪಡುವ ಅಗತ್ಯ ಇಲ್ಲ ಎಂದು KSNDMC ಮಾಹಿತಿ ನೀಡಿದೆ.

ಭೂಕಂಪ ಏಕೆ ಸಂಭವಿಸುತ್ತದೆ?
ಭೂಮಿಯ ಒಳಗೆ ಇರುವ 07 ಟೆಕ್ಟೋನಿಕ್ ಪ್ಲೇಟ್‌ಗಳು ಸುತ್ತುತ್ತಿರುವಾಗ ಅವರು ಒಂದಕ್ಕೊಂದು ಡಿಕ್ಕಿ ಹೊಡೆದರೆ, ಒಂದರ ಮೇಲೊಂದು ಏರಳಿತ ಘಟನೆ ಆದಾಗ ಇಲ್ಲವೇ ದೂರು ಸಂಚರಿಸಲಾದ ಭೂಮಿ ಒಳಗೆ ಕಂಪನದ ಅನುಭವವಾಗುತ್ತದೆ. ಈ ಡಿಕ್ಕಿ ಪ್ರಮಾಣವು ಹವಾಮಾನ ತಜ್ಞರು ಅಳವಡಿಸಿರುವ ರಿಕ್ಟರ್ ಮಾಪಕದಲ್ಲಿ ದಾಖಲಾಗುತ್ತವೆ.
ಕೊಡಗು, ಚಾಮರಾಜನಗರ ಸೇರಿ ವಿವಿಧೆಡೆ ಮಳೆ ಸಿಂಚನ
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಪೂರ್ವ ಮುಂಗಾರು ಮಳೆ ಚುರುಕಾಗಿದೆ. ಬೆಂಗಳೂರು ಸೇರಿ ವಿವಿಧಡೆ ಸುರಿದಿದ್ದ ಮಳೆ ಬುಧವಾರ ಮಡಿಕೇರಿ, ದಕ್ಷಿಣ ಕನ್ನಡ, ಚಾಮರಾಜಗರ, ಮೈಸೂರು ಸುತ್ತಮುತ್ತಲಿ ಭಾಗ ಸೇರಿದಂತೆ ಕೆಲವು ಕಡೆಗಳಲ್ಲಿ ಪೂರ್ವ ಮುಂಗಾರು ಅಬ್ಬರಿಸಿದೆ.
Moderate - Heavy thunders showers in Chamarajanagara now ⛈️☔️#KarnatakaRains https://t.co/IGyvDBMLyz pic.twitter.com/zFcnHeh6jr
— ರವಿ ಕೀರ್ತಿ ಗೌಡ (@ravikeerthi22) March 12, 2025
ಶಿರಾಡಿ ಘಾರ್ಟ್, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಧ್ಯಾಹ್ನ ನಂತರ ಗುಡಗು ಮಿಂಚು ಸಹಿತ ಜೋರು ಮಳೆ ದಾಖಲಾಯಿತು. ಕೊಡಗು ಜಿಲ್ಲೆಯ ಕೆಲವೆಡೆ ಹಗುರದಿಂದ ಸಾಧಾರಣವಾಗಿ ಮಳೆ ಬಿದ್ದಿದೆ. ಚಾಮರಾಜನಗರ ಮಲೆ ಮಾದೇಶ್ವರ ಬೆಟ್ಟ, ಅರಣ್ಯ ಪ್ರದೇಶದಲ್ಲಿ ಮಳೆ ತಂಪೆರೆದಿದೆ.
ಇದಷ್ಟೇ ಅಲ್ಲದೇ ಮಂಡ್ಯ, ಮೈಸೂರು, ತುಮಕೂರು, ಉಡುಪಿ, ಶಿವಮೊಗ್ಗ ಸೇರಿದಂತೆ ನಾನಾ ಕಡೆಗಳಲ್ಲಿ ಮಳೆಯ ದರ್ಶನವಾಗುತ್ತಿದೆ. ಪೂರ್ವ ಮುಂಗಾರು ಆರಂಭದಲ್ಲೇ ಅಬ್ಬರಿಸಲು ಶುರು ಮಾಡಿದೆ. ಬೇಸಿಗೆಯ ಕಾಲದಲ್ಲಿ ಮಳೆಗಾಲದ ವಾತವರಣ ನಿರ್ಮಾಣವಾಗಿದೆ.
ಅಧಿಕ ತಾಪಮಾನಕ್ಕೆ ತತ್ತರಿಸಿದ ಈ ಭಾಗದ ಜನರಿಗೆ ಮಳೆ ತಂಪು ವಾತಾವರಣ ಸೃಷ್ಟಿಸಿ ಮುದ ನೀಡಿದೆ. ಬಿಸಿಲಿನ ಝಳ ಕಡಿಮೆ ಆಗಿದ್ದಲ್ಲದೇ, ಮಬ್ಬು ವಾತವರಣ ಕಂಡು ಬಂತು. ಈ ಭಾಗದಲ್ಲಿಯೇ ಪೂರ್ವ ಮುಂಗಾರು ಮಳೆ ಹೆಚ್ಚು ಚುರುಕಾಗಿದ್ದು, ಮುಂದಿನ ಒಂದೆರಡು ದಿನ ಇನ್ನಷ್ಟು ಮಳೆ ಬರುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ಪರಿಚಲನೆಯ ಕಾರಣದಿಂದಾಗಿ ಬೆಂಗಳೂರು, ಕರ್ನಾಟಕ ಮಾತ್ರವಲ್ಲದೇ, ಕೇರಳ, ತಮಿಳುನಾಡಿನ ಹತ್ತಾರು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಈ ವಾರಪೂರ್ತಿ ಮಳೆ ಸಕ್ರಿಯವಾಗಿರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.












Click it and Unblock the Notifications