ಗಣಪತಿ ಆತ್ಮಹತ್ಯೆ : ನ್ಯಾಯಾಂಗ ತನಿಖೆಗೆ ವ್ಯವಸ್ಥೆಗಳೇ ಇಲ್ಲ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 04 : ಕರ್ನಾಟಕ ಸರ್ಕಾರ ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ. ಆದರೆ, ಈ ಆದೇಶ ಹೊರಬಿದ್ದು ಸುಮಾರು 20 ದಿನಗಳು ಕಳೆದರೂ ತನಿಖೆ ನಡೆಸಲು ಅಗತ್ಯ ಸೌಕರ್ಯಗಳನ್ನು ನೀಡಿಲ್ಲ.

ಸರ್ಕಾರ ಜುಲೈ 16ರಂದು ನ್ಯಾಯಮೂರ್ತಿ ಕೇಶವನಾರಾಯಣ ಅವರ ನೇತೃತ್ವದಲ್ಲಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಆದೇಶ ಹೊರಡಿಸಿತ್ತು. ಆದರೆ, ಇದುವರೆಗೂ ತನಿಖೆಗೆ ಅಗತ್ಯವಾದ ಸಿಬ್ಬಂದಿ, ಕಚೇರಿ, ವಾಹನಗಳ ವ್ಯವಸ್ಥೆಯನ್ನು ಮಾಡಿಲ್ಲ.[ಕೇಂದ್ರ ಸೇವೆಗೆ ಹೊರಟು ನಿಂತ ಪ್ರಣಬ್ ಮೊಹಾಂತಿ]

mk ganapati

ಬಾಲಬ್ರೂಯಿ ಅತಿಥಿಗೃಹದಲ್ಲಿ ತನಿಖೆಗೆ ಅಗತ್ಯವಾದ ಕಚೇರಿ, ಸಿಬ್ಬಂದಿ, ಕೋರ್ಟ್‌ ಹಾಲ್, ದೂರವಾಣಿ ಸಂಪರ್ಕ ಮುಂತಾದ ವ್ಯವಸ್ಥೆಗಳನ್ನು ಮಾಡಿಕೊಡಿ ಎಂದು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ ಜುಲೈ 20ರಂದು ಪತ್ರ ಬರೆಯಲಾಗಿತ್ತು. ಆದರೆ, ಯಾವ ವ್ಯವಸ್ಥೆಗಳೂ ಆಗಿಲ್ಲ.[ಗಣಪತಿ ಸಾವಿನ ಪ್ರಕರಣದ Timeline]

ಸಿಐಡಿ ತನಿಖೆಗೆ ಸೂಚನೆ : ಎಂ.ಕೆ.ಗಣಪತಿ ಅವರ ಪುತ್ರ ನೇಹಾಲ್ ಅವರು ಮಡಿಕೇರಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಐಪಿಎಸ್ ಅಧಿಕಾರಿಗಳಾದ ಪ್ರಣಬ್‌ ಮೊಹಾಂತಿ, ಎ.ಎಂ.ಪ್ರಸಾದ್ ಮತ್ತು ಕೆ.ಜೆ.ಜಾರ್ಜ್ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು ಎಂದು ಖಾಸಗಿ ದೂರು ಸಲ್ಲಿಸಿದ್ದರು.[ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸುವಂತೆ ಮಡಿಕೇರಿ ನಗರ ಪೊಲೀಸರಿಗೆ ಸೂಚನೆ ನೀಡಿತ್ತು. ಕರ್ನಾಟಕ ಹೈಕೋರ್ಟ್‌ ಆಗಸ್ಟ್‌ 4ರಂದು ಮಡಿಕೇರಿ ಪೊಲೀಸರು ತನಿಖೆ ನಡೆಸುವುದು ಬೇಡ. ಸಿಐಡಿ ತಂಡವೇ ತನಿಖೆ ನಡೆಸಬೇಕು ಎಂದು ಆದೇಶ ನೀಡಿದೆ.

ಅಂದಹಾಗೆ ಜುಲೈ 7ರಂದು ಮಂಗಳೂರು ಐಜಿ ಕಚೇರಿಯ (ಪಶ್ಚಿಮ ವಲಯ) ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರು ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರ್ಕಾರ ಮೊದಲು ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ನಂತರ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government had formed judicial commission on July 16, 2016 to enquiry about the suicide committed by deputy superintendent of police (DySP), M.K.Ganapati. But Justice Keshavanarayana commission is yet to be allotted space, staff, and vehicle for the purpose.
Please Wait while comments are loading...