ಮಡಿಕೇರಿ : ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದ ತಾಯಿ, ಮಗನ ಶವ ಪತ್ತೆ

ಮಡಿಕೇರಿ, ಆಗಸ್ಟ್ 22 : ಮಡಿಕೇರಿಯಲ್ಲಿ ಗುಡ್ಡ ಕುಸಿದು ಸಾವನ್ನಪ್ಪಿದ್ದ ತಾಯಿ ಮತ್ತು ಮಗನ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಸತತ ಕಾರ್ಯಾಚರಣೆ ನಡೆಸಿದ ಸೇನಾಪಡೆ ಮೃತದೇಹ ಪತ್ತೆ ಮಾಡಿದೆ.

ಮಡಿಕೇರಿ ತಾಲೂಕಿನ ಹೆಮ್ಮತ್ತಾಳು ಗ್ರಾಮದ ಚಂದ್ರಾವತಿ (66) ಮತ್ತು ಉಮೇಶ (36) ಮನೆಯ ಸಮೇತ ಕೊಚ್ಚಿ ಹೋಗಿದ್ದರು. ಸತತ ಮೂರು ದಿನಗಳ ಹುಡುಕಾಟದ ಬಳಿಕ ಬುಧವಾರ ಶವ ಪತ್ತೆಯಾಗಿದೆ.

ಹೆಮ್ಮತ್ತಾಳು ಗ್ರಾಮದಲ್ಲಿ ಉಂಟಾದ ಭೂ ಕುಸಿತದಿಂದ ಗ್ರಾಮವೇ ಕಣ್ಮರೆಯಾಗಿದೆ. ಮಣ್ಣಿನೊಂದಿಗೆ 20ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿವೆ. ಗ್ರಾಮದ ಹಲವು ಮನೆಗಳಿಗೆ ಭಾರೀ ಹಾನಿ ಉಂಟಾಗಿದೆ. ಹಲವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

Dead bodies of mother-son recovered from a landslide Madikeri

ಸೇನಾಪಡೆ ಹುಡುಕಾಟ : ಮತ್ತೊಂದು ಕಡೆ ಹೆಬ್ಬಟ್ಟಗೆರೆ ಗ್ರಾಮದಲ್ಲಿಯೂ ಸೇನಾಪಡೆಗಳು ಡ್ರೋಣ್ ಮೂಲಕ ನಾಪತ್ತೆಯಾದವರಿಗೆ ಹುಡುಕಾಟ ನಡೆಸುತ್ತಿದೆ. 40 ಮನೆಗಳಿರುವ ಗ್ರಾಮ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.

ಗ್ರಾಮದಲ್ಲಿ 72 ವರ್ಷದ ಅಜ್ಜಿ ಸೇರಿ ಆರು ಜನರು ನಾಪತ್ತೆಯಾಗಿದ್ದಾರೆ. ಶವಗಳನ್ನು ಹುಡುಕಲು ಇಂದು ಸೇನಾಪಡೆ ಕಾರ್ಯಾಚರಣೆಯನ್ನು ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+