ಕೊಡಗಿನಲ್ಲಿ ಪ್ರವಾಸಿಗರ ಬಳಿ ಬೇಕಾಬಿಟ್ಟಿ ಹಣ ವಸೂಲಿ, ಟ್ಯಾಕ್ಸಿ ಚಾಲಕರ ವಿರುದ್ಧ ಕ್ರಮಕ್ಕೆ ಒತ್ತಾಯ
ಮಡಿಕೇರಿ, ಮೇ, 26: ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಕೊಡಗಿನಲ್ಲಿ ಕಳೆದ ಒಂದೆರಡು ದಶಕಗಳಿಂದ ಪ್ರವಾಸೋದ್ಯಮ ಅಭಿವೃದ್ಧಿ ಕಂಡಿದೆ. ಹೀಗಾಗಿ ವ್ಯಾಪಾರ, ವ್ಯವಹಾರಗಳು ಜಿಗಿತ ಕೊಂಡಿದ್ದು, ಇದರಿಂದಲೇ ಜಿಲ್ಲೆಗೆ ಹೆಚ್ಚು ಆದಾಯ ಹರಿದುಬರುತ್ತಿದೆ. ಇಲ್ಲಿನ ನಿಸರ್ಗ ಸೌಂದರ್ಯ ಮತ್ತು ವಾತಾವರಣವನ್ನು ಇಷ್ಟಪಡುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಮುಖ ಮಾಡುತ್ತಿದ್ದಾರೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರ ಬಳಿ ಟ್ಯಾಕ್ಸಿ ಚಾಲಕರು ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ
ಇತ್ತೀಚೆಗೆ ಕೊಡಗಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದ್ದಂತೆಯೇ ಹೊರಗಿನಿಂದ ಬರುವ ಪ್ರವಾಸಿಗರನ್ನು ಕೇವಲ ವ್ಯಾಪಾರಿ ಮನೋಭಾವದಿಂದ ನೋಡುವುದು ಜಾಸ್ತಿಯಾಗುತ್ತಿದೆ. ಇದರಿಂದ ಮೋಸ ವಂಚನೆಗಳು, ಪ್ರವಾಸಿಗರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ಹತ್ತಿಕ್ಕದಿದ್ದರೆ ಮುಂದಿನ ದಿನಗಳಲ್ಲಿ ಪ್ರವಾಸಿಗರು ಇತ್ತ ಬರಲು ಭಯಪಡುವಂತಹ ಪರಿಸ್ಥಿತಿ ಎದುರಾದರೆ ಅಚ್ಚರಿ ಪಡಬೇಕಾಗಿಲ್ಲ.

ಈಗಾಗಲೇ ಕೆಲವು ಕಡೆ ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ ದೂರುಗಳು ಕೇಳಿಬಂದಿವೆ. ಮಡಿಕೇರಿ ಬಳಿಯಿರುವ ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಮೇಲೆ ದೊಣ್ಣೆ ಹಾಗೂ ಕೈಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆಯೆ ಹಲ್ಲೆ ನಡೆಸಿದವರ ಮೇಲೆ ಮೊಕದ್ದಮೆ ದಾಖಲು ಮಾಡಲಾಗಿದೆ.
ಈ ಘಟನೆ ಹಸಿರುವಾಗಲೇ ಮತ್ತೊಂದು ಪ್ರವಾಸಿ ತಾಣ ಮಾಂದಲಪಟ್ಟಿಯಲ್ಲಿ ಸ್ಥಳೀಯ ಜೀಪ್ ಚಾಲಕರು ಹಾಗೂ ಸ್ಥಳೀಯ ಮುಖಂಡರೊಬ್ಬರ ನಡುವೆ ಘರ್ಷಣೆ ನಡೆದಿದ್ದು, ಇಲ್ಲೂ ಕೂಡ ಭಯದ ವಾತಾವರಣ ಸೃಷ್ಟಿಸಿದೆ. ಹೀಗೆ ಮಾಂದಾಲಪಟ್ಟಿಯಲ್ಲಿ ಜೀಪು ಚಾಲಕರು, ಪ್ರವಾಸಿಗೆ ನಡುವೆ ಗಲಾಟೆಗಳು ನಡೆಯುತ್ತಿರುತ್ತಲೇ ಇರುತ್ತವೆ.
ಪ್ರವಾಸಿಗರಿಂದ ಎಗ್ಗಿಲ್ಲದ ಸುಲಿಗೆ
ಇಲ್ಲಿ ಖಾಸಗಿ ಜೀಪುಗಳ ಚಾಲಕರು ಪ್ರವಾಸಿಗರನ್ನು ಸುಲಿಗೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದ್ದು, ಈ ಕಾರಣಕ್ಕಾಗಿ ಜಿಲ್ಲಾಡಳಿತ ಖಾಸಗಿ ಜೀಪುಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಇದರಿಂದ ಇದೀಗ ಪ್ರವಾಸಿಗರು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಪ್ರವಾಸಿಗರ ಸುಲಿಗೆ ನಡೆಯುತ್ತಿದ್ದು, ಬೆಟ್ಟಗುಡ್ಡದ ಕಡಿದಾದ, ಏರು ರಸ್ತೆಯಲ್ಲಿ ವಾಹನಗಳು ಸಾಗುವುದು ಕಷ್ಟ. ಇಲ್ಲಿ ಪ್ರಯಾಣ ಮಾಡಲು ಫೋರ್ ವೀಲ್ ಜೀಪುಗಳೇ ಬೇಕು.
ಇಲ್ಲಿ ಬಾಡಿಗೆ ಓಡಿಸಲೆಂದೇ ಬಹಳಷ್ಟು ಮಂದಿ ಕಾರು ಚಾಲಕರಿದ್ದು, ಬಾಡಿಗೆ ವಿಚಾರದಲ್ಲಿ ಜಗಳಗಳು ನಡೆಯುತ್ತಲೇ ಇರುತ್ತದೆ. ಜೊತೆಗೆ ಪ್ರವಾಸಿಗರಿಂದ ಸುಲಿಗೆಯೂ ಎಗ್ಗಿಲ್ಲದೆ ನಡೆಯುತ್ತಿದೆ. ಇನ್ನು ದೂರದಿಂದ ಬರುವ ಪ್ರವಾಸಿಗರ ವಾಹನಗಳನ್ನು ತಡೆದು ಹೋಗದಂತೆ ತಾಕೀತು ಮಾಡಿ ತಮ್ಮ ವಾಹನಗಳಲ್ಲಿ ಕರೆದೊಯ್ಯುವ ಘಟನೆಗಳು ನಡೆಯುತ್ತವೆ. ಇದರಿಂದ ಒಮ್ಮೆ ಬಂದವರು ಮತ್ತೆ ಈ ಕಡೆ ಬರಬಾರದಪ್ಪಾ ಅಂದುಕೊಂಡು ಅಸಮಾಧನ ಹೊರಹಾಕಿ ಹೋಗುತ್ತಿದ್ದಾರೆ.
ಕೆಲವು ಖಾಸಗಿ ಜೀಪುಗಳ ಚಾಲಕರು ಪ್ರವಾಸಿಗರನ್ನು ಅಡ್ಡಗಟ್ಟಿ ಹೆಚ್ಚಿನ ದರವನ್ನು ವಿಧಿಸಿ ಸುಲಿಗೆ ಮಾಡುತ್ತಾರೆ. ಇದನ್ನು ಪ್ರಶ್ನಿಸಲು ಹೋದವರ ಮೇಲೆ ಹಲ್ಲೆ ಮಾಡಲು ಹೇಸುವುದಿಲ್ಲ ಅವರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಖಾಸಗಿ ಜೀಪುಗಳನ್ನು ಬಾಡಿಗೆಗೆ ಓಡಿಸಲು ತಡೆ ಒಡ್ಡಿಗೆ. ಹಾಗೆಯೆ ಮಡಿಕೇರಿ ನಗರದಿಂದ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರಿಂದ ದುಬಾರಿ ಬಾಡಿಗೆ ವಸೂಲಿ ಮಾಡುತ್ತಿರುವ ದೂರು ಕೇಳಿಬರುತ್ತಿವೆ.
ದುಬಾರಿ ಬೆಲೆ ವಿಧಿಸಿ ಹಗಲು ದರೋಡೆ
ಕೊಡಗಿನಲ್ಲಿರುವ ಪ್ರವಾಸಿ ತಾಣಗಳು ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ. ಆದರೂ ತಾಣಗಳ ವಿಶೇಷತೆಗಳನ್ನು ತಿಳಿದು ಅವುಗಳನ್ನು ನೋಡುವ ಉದ್ದೇಶದಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅವರನ್ನು ಪ್ರವಾಸಿ ಸ್ನೇಹಿಯಾಗಿ ಸ್ವಾಗತಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ ಪ್ರವಾಸಿಗರಿಂದ ಸುಲಿಗೆ ಮಾಡುವುದೆಷ್ಟು ಸರಿ ಎಂಬುದು ಇಲ್ಲಿಗೆ ಆಗಮಿಸುವ ಪ್ರವಾಸಿಗರ ಪ್ರಶ್ನೆಯಾಗಿದೆ.
ಇನ್ನು ಪ್ರವಾಹ, ಭೂಕುಸಿತ, ಕೊರೊನಾದಿಂದಾಗಿ ಪ್ರವಾಸಿಗರು ಜಿಲ್ಲೆಯತ್ತ ಸುಳಿದಿರಲಿಲ್ಲ. ಈ ವೇಳೆ ಪ್ರವಾಸಿಗರನ್ನು ನಂಬಿ ಸ್ಥಾಪನೆ ಮಾಡಿದ್ದ ಹೋಟೆಲ್, ಹೋಂಸ್ಟೇ, ಅಂಗಡಿಗಳು ಸೇರಿದಂತೆ ವ್ಯಾಪಾರಗಳು ಪಾತಾಳಕ್ಕೆ ಕುಸಿದು ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ಕಳೆದೊಂದು ವರ್ಷದಿಂದ ನಿಧಾನವಾಗಿ ಪ್ರವಾಸೋದ್ಯಮ ಚೇತರಿಸುತ್ತಿದೆ.
ಹೀಗಿರುವಾಗ ಖುಷಿಯಿಂದ ಆಗಮಿಸುವವರಿಗೆ ದುಬಾರಿ ಬೆಲೆ ವಿಧಿಸಿ ಹಗಲು ದರೋಡೆ ಮಾಡುವುದು, ಸಂಬಾರ ಪದಾರ್ಥಗಳು, ತಿಂಡಿ ತಿನಿಸುಗಳು, ಹೋಟೆಲ್ ರೂಂಗಳು ಹೀಗೆ ಎಲ್ಲದಕ್ಕೂ ನಿಗದಿತ ದರ ವಿಧಿಸದೆ ತಮಗಿಷ್ಟ ಬಂದ ದರವನ್ನು ಪ್ರವಾಸಿಗರಿಂದ ವಸೂಲಿ ಮಾಡುವುದು ಎಷ್ಟು ಸರಿ? ಇದು ಹೀಗೆಯೇ ಮುಂದುವರೆದರೆ ಪ್ರವಾಸಿಗರು ಕೊಡಗಿಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಹಾಗೆಯೆ ಇಲ್ಲಿನ ಬಗ್ಗೆ ಕೆಟ್ಟ ಸಂದೇಶವೂ ರವಾನೆ ಆಗಬಹುದು.
ಪ್ರವಾಸಿ ಸ್ನೇಹಿ ವಾತಾವರಣ ಕಲ್ಪಿಸಲಿ
ಈ ಬಗ್ಗೆ ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳು ಗಮನಹರಿಸಿ ಪ್ರವಾಸಿಗರಿಗೆ ಅನುಕೂಲ ವಾತಾವರಣ ನಿರ್ಮಿಸಿಕೊಡುವ ಕೆಲಸ ಮಾಡಬೇಕಿದೆ. ಪ್ರವಾಸಿಗರ ಮೇಲೆ ಹಲ್ಲೆ, ಸುಲಿಗೆ ತಡೆಗೆ ಗಮನಹರಿಸಬೇಕಿದೆ. ಆಗ ಮಾತ್ರ ಕೊಡಗಿನಲ್ಲಿ ಪ್ರವಾಸೋದ್ಯಮ ಇನ್ನಷ್ಟು ಪ್ರಗತಿ ಕಾಣಲು ಅನುಕೂಲವಾಗುವುದರೊಂದಿಗೆ ಕೊಡಗಿನ ಭೇಟಿ ಪ್ರತಿಯೊಬ್ಬ ಪ್ರವಾಸಿಗರ ಮನದಲ್ಲಿ ಉಳಿಯಲು ಸಾಧ್ಯವಾಗುತ್ತದೆ ಎನ್ನುವುದು ಪ್ರವಾಸಿಗೆ ಅಭಿಪ್ರಾಯ ಆಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications