ಕೊಡಗು ಸಂತ್ರಸ್ಥರಿಗೆ 5 ಲಕ್ಷ ನೆರವು ನೀಡಿದ ನಟ ಪ್ರಕಾಶ್ ರೈ

Recommended Video

      ಕೊಡಗು ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂಪಾಯಿ ನೆರವು ನೀಡಿದ ನಟ ಪ್ರಕಾಶ್ ರಾಜ್ ( ರೈ )

      ಭಾರಿ ಮಳೆಯಿಂದ ತತ್ತರಗೊಂಡಿರುವ ಕೊಡಗು ಜಿಲ್ಲೆಯನ್ನ ಮತ್ತೆ ಮೊದಲಿನಂತೆ ಮಾಡಲು ಕರ್ನಾಟಕದ ವಿವಿಧ ಭಾಗದ ಜನತೆ ನೆರವು ನೀಡುತ್ತಿದ್ದಾರೆ. ತಿನ್ನಲು ಆಹಾರ, ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನ ಕೊಡಗು ಜನತೆಗೆ ಕಳುಹಿಸಿ ಸಹಾಯ ಮಾಡುತ್ತಿದ್ದಾರೆ.

      ಕನ್ನಡ ಸಿನಿಮಾ ನಟರು ಹಾಗೂ ಅವರ ಅಭಿಮಾನಿ ಸಂಘಗಳು ಕೂಡ ಮಲೆನಾಡಿನ ಮಕ್ಕಳ ಸಹಾಯಕ್ಕೆ ನಿಂತಿದ್ದಾರೆ. ಇದೀಗ, ಬಹುಭಾಷಾ ನಟ ಪ್ರಕಾಶ್ ರೈ ಕೊಡಗು ಜನತೆ ಹಣದ ನೆರವು ನೀಡಿದ್ದಾರೆ.

      actor prakash rai donate 5 lakh to kodagu flood

      ಸದ್ಯಕ್ಕೆ 5 ಲಕ್ಷ ಹಣ ನೀಡುತ್ತಿರುವುದಾಗಿ ಖುದ್ದು ಪ್ರಕಾಶ್ ರೈ ಅವರೇ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಕೊಡಗು ಜಲ್ಲೆಯ ಏಳಿಗಿಗೆ ಎಲ್ಲ ರೀತಿಯಲ್ಲೂ ಬೆಂಬಲವಾಗಿರುತ್ತೇನೆ ಎಂದು ಹೇಳಿದ್ದಾರೆ.

      ಜೊತೆಗೆ #justaskingfiundation ಮತ್ತು #prakashrajfiundation ಮೂಲಕ ಕೊಡಗನ್ನ ಕಟ್ಟುವ ಹಲವು ಯೋಜನೆಗಳನ್ನ ಮುಂದೆ ರೂಪಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.

      ಕೊಡಗಿನವರ ನೆರವಿಗೆ ಧಾವಿಸಿದ ಕನ್ನಡ ಚಿತ್ರರಂಗದ ತಾರೆಯರು

      ಪ್ರಕಾಶ್ ರೈ ಅವರಂತೆ ನಟ ದರ್ಶನ್, ಸುದೀಪ್, ಗಣೇಶ್, ಶಿವರಾಜ್ ಕುಮಾರ್ ಹೀಗೆ ಕನ್ನಡದ ಹಲವು ಸಿನಿತಾರೆಯರು ಕೊಡಗಿನ ಜನತೆಗೆ ನೆರವಾಗುವಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡು ಬೆಂಬಲ ನೀಡುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+