ಮಡಿಕೇರಿ ಬಾರ್ ಮೇಲೆ ದಾಳಿ ಮಾಡಿದ 6 ಜನ ಅರೆಸ್ಟ್

By: ಬಿಎಂ ಲವಕುಮಾರ್
Subscribe to Oneindia Kannada

ಮಡಿಕೇರಿ, ಜುಲೈ 14: ನಗರದ ಹೃದಯ ಭಾಗದಲ್ಲಿರುವ ಮಾರುತಿ ಬಾರ್ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿದ ಆರು ಮಂದಿ ದುಷ್ಕರ್ಮಿಗಳನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.

ಡಿವೈಎಸ್ಪಿ ಗಣಪತಿ ಕೇಸ್: ಸಚಿವ ಜಾರ್ಜ್ ಗೆ ಸುಪ್ರೀಂನಿಂದ ನೋಟಿಸ್

ಮಡಿಕೇರಿ ಮೆಡಿಕಲ್ ಕಾಲೇಜಿನಲ್ಲಿ ಸ್ಟೋರ್ ಕೀಪರ್ ಆಗಿರುವ ಅರ್ವತ್ತೊಕ್ಲು ಗ್ರಾಮದ ಗಂಗಾಧರ ಎಂಬವರ ಪುತ್ರ ದೇಶಿಕ್, ಕಾರುಗುಂದದ ಕಡಿಯತ್ತೂರು ಗ್ರಾಮದ ನಿವಾಸಿ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಸೆಕ್ಯೂರಿಟಿಯಾಗಿರುವ ನಾಣಯ್ಯ ಅವರ ಪುತ್ರ ಮನೋಜ್, ಅರ್ವತ್ತೊಕ್ಲು ಗ್ರಾಮದ ದೇವಯ್ಯ ಎಂಬವರ ಪುತ್ರ ಹಾಗೂ ಫ್ಯಾಷನ್ ಡಿಸೈನರ್ ವಿದ್ಯಾರ್ಥಿಯಾಗಿರುವ ಪಿ.ಡಿ.ಕುಶ, ಚೆಟ್ಟಳ್ಳಿಯ ಕಂಡಕೆರೆಯ ಕಾರ್ಪೆಂಟರ್ ಕಾರ್ಮಿಕ ಬಾಬು ಎಂಬವರ ಪುತ್ರ ಶ್ರವಣ್, ಚೆಟ್ಟಳ್ಳಿಯ ಕಂಡಕೆರೆಯ ಕಾರ್ಪೆಂಟರ್ ಕಾರ್ಮಿಕರಾಗಿರುವ ಮುಸ್ತಾಫ ಎಂಬವರ ಪುತ್ರ ಫಯಾಜ್ ಮತ್ತು ಮಡಿಕೇರಿ ಮಂಗಳದೇವಿ ನಗರದ ಕಾಂತರಾಜ್ ಎಂಬವರ ಪುತ್ರ ಕಿರಣ್ ಬಂಧಿತರು.

6 people arrested on Madikeri bar attack

ಘಟನೆಯ ವಿವರ

ಮಡಿಕೇರಿಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮುಂಭಾಗವಿರುವ ಮಾರುತಿ ಬಾರ್‍ ಗೆ ಜು.10 ರಂದು ಸಂಜೆ 4 ಗಂಟೆ ಸಮಯಕ್ಕೆ ಬಂದಿದ್ದ ಗಾಳಿಬೀಡು ಗ್ರಾಮದ ಮೊಣ್ಣಪ್ಪ (ಸರಾ) ಎಂಬವರು ಮನೆಯಲ್ಲಿಟ್ಟಿದ್ದ ಕೋವಿ ಕಾಣೆಯಾದ ಬಗ್ಗೆ ಅದೇ ಗ್ರಾಮದ ಕುಡಿಯರ ಲವ ಮತ್ತು ಕೀರ್ತನ್ ಅವರ ಜೊತೆಯಲ್ಲಿ ವಾಗ್ವಾದಕ್ಕಿಳಿದಿದ್ದರು.

ಈ ವೇಳೆ ಅಲ್ಲಿಗೆ ಮದ್ಯಪಾನ ಮಾಡಲು ಬಂದ ದೇಶಿಕ್ ಮತ್ತು ಮನೋಜ್ ತಮಗೆ ಸಂಬಂಧವಿಲ್ಲದ ವಿಷಯದಲ್ಲಿ ತಲೆ ಹಾಕಿದ್ದಾರೆ. ಆಗ ಬಾರ್‍ನ ಸಿಬ್ಬಂದಿಗಳು ಎರಡೂ ಕಡೆಯವರನ್ನು ಸಮಾಧಾನಗೊಳಿಸಿ ಹೊರಗೆ ಕಳುಹಿಸಿದ್ದಾರೆ.

ಕೊಡವರ ನಿಸರ್ಗ ಆರಾಧನೆ ಸಾಕ್ಷಿಯಾದ 'ದೇವರಕಾಡು'

ಆಗ ತಾನೇ ಐಟಿಐ ಮುಗಿಸಿರುವ ದೇಶಿಕ್ ಮತ್ತು ಮನೋಜ್ ತಮಗೆ ಬಾರ್‍ನಲ್ಲಿದ್ದವರು ಹಲ್ಲೆ ಮಾಡಿದರೆಂದು ಮೊಬೈಲ್‍ನಲ್ಲಿ ತಮ್ಮ ಗೆಳೆಯರನ್ನು ಮಡಿಕೇರಿಗೆ ಕರೆಸಿದ್ದಾರೆ. ಸ್ನೇಹಿತನ ಮೇಲೆ ಹಲ್ಲೆಗೆ ಕಾರಣವಾದ ಬಾರಿನ ಮೇಲೆ ಪ್ರತಿಕಾರ ತೀರಿಸಲು ಮಡಿಕೇರಿಗೆ ಬಂದ ಗೆಳೆಯರು ರಾತ್ರಿ ವೇಳೆ ಹೆಲ್ಮೆಟ್ ಹಾಕಿ ಕೊಂಡು ಕಲ್ಲು ಮತ್ತು ಸೋಡಾ ಬಾಟಲ್‍ಗಳನ್ನು ಸಂಗ್ರಹಿಸಿ ಹಠಾತ್ ಸಿನಿಮೀಯ ಶೈಲಿಯಲ್ಲಿ ಬಾರ್ ಮೇಲೆ ದಾಳಿ ಮಾಡಿದ್ದಾರೆ. ಜತೆಗೆ ಬಾರ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಮದ್ಯದ ಬಾಟಲ್‍ಗಳನ್ನು ನಾಶ ಪಡಿಸಿದ್ದರು. ದಾಂಧಲೆ ನಡೆಸಿದ ಸಂದರ್ಭ ಸಿಬ್ಬಂದಿ ತಪ್ಪಿಸಿಕೊಂಡಿದ್ದಾರೆ.

ಈ ಸಂಬಂಧ ಬಾರ್ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.

ಸಿ.ಸಿ ಟಿವಿಯಲ್ಲಿ ಚಿತ್ರೀಕರಣಗೊಂಡ ದೃಶ್ಯಗಳನ್ನಾಧರಿಸಿ ದಾಂಧಲೆ ನಡೆಸಿದ ಯುವಕರ ಗುಂಪನ್ನು ಬಂಧಿಸಲಾಗಿದೆ. ಘಟನೆ ಬಳಿಕ ದೇಶಿಕ್ ಮತ್ತು ಮನೋಜ್ ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Madikeri district crime detectives police arrested six people who were accused of attacking Maruti bar at the heart of the city.
Please Wait while comments are loading...