'ಯೋಗಿ ಸ್ಥಳಗಳ ಮರುನಾಮಕರಣ ಮಾಡುವ ಜ್ವರದಿಂದ ಬಳಲುತ್ತಿದ್ದಾರೆ': ಓವೈಸಿ
ಫಿರೋಜಾಬಾದ್ ಡಿಸೆಂಬರ್ 26: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವ ಹೊತ್ತಲ್ಲೆ ಜನಪ್ರತಿನಿಧಿಗಳ ಆರೋಪ ಪ್ರತ್ಯಾರೋಪ ಜೋರಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಥಳಗಳನ್ನು ಮರುನಾಮಕರಣ ಮಾಡುವ ಜ್ವರದಿಂದ ಬಳಲುತ್ತಿದ್ದಾರೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ.
ಶನಿವಾರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, "ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಫಿರೋಜಾಬಾದ್‌ನಲ್ಲಿ 45-200 ಮಕ್ಕಳು ವೈರಲ್ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ನೀವು ಬಾಬಾ (ಸಿಎಂ) ಅನ್ನು ಪ್ರಶ್ನಿಸಿದರೆ, ಜಿಲ್ಲೆಯ ಹೆಸರಿನಿಂದಾಗಿ ಜ್ವರ ಬಂದಿದೆ ಎಂದು ಅವರು ಹೇಳುತ್ತಾರೆ. ಅವರು ಸ್ಥಳಗಳನ್ನು ಮರುನಾಮಕರಣ ಮಾಡುವ ಜ್ವರದಿಂದ ಬಳಲುತ್ತಿದ್ದಾರೆ" ಎಂದು ದೂರಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಓವೈಸಿ ಅವರು ರಾಜ್ಯದ 19 ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆಗೆ ಮತ ಚಲಾಯಿಸಲು ಮತ್ತು ತಮ್ಮದೇ ಆದ ರಾಜಕೀಯ ನಾಯಕತ್ವವನ್ನು ಆಯ್ಕೆ ಮಾಡಲು ತಮ್ಮ ಮನವಿಯನ್ನು ಪುನರುಚ್ಚರಿಸಿದರು.

#WATCH | Media reports say 45-200 children died of viral fever in Firozabad in Aug-Sept. If you would question Baba (CM), he would say fever hit the district because of its name. He is suffering from the fever of renaming places: AIMIM chief Asaduddin Owaisi in Firozabad (25.12) pic.twitter.com/RlYQS87DEj
— ANI UP/Uttarakhand (@ANINewsUP) December 25, 2021
ಮೊನ್ನೆಯಷ್ಟೇ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಒಡ್ಡುವ ವಿಡಿಯೋ ಭಾರಿ ವಿವಾದ ಸೃಷ್ಟಿಸಿದ ಬಳಿಕ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸ್ಪಷ್ಟೀಕರಣ ನೀಡಿದ್ದರು. ತಾವು ಹಿಂಸಾಚಾರಕ್ಕೆ ಪ್ರಚೋದನೆ ಅಥವಾ ಬೆದರಿಕೆ ಒಡ್ಡಿರುವುದಿಲ್ಲ ಎಂದು ಹೇಳಿದ್ದರು. ಕಾನ್ಪುರದಲ್ಲಿ ಓವೈಸಿ ನೀಡಿದ್ದ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಭಾರಿ ವಿರೋಧಕ್ಕೆ ಒಳಗಾಗಿತ್ತು. ಹರಿದ್ವಾರದಲ್ಲಿ ನಡೆದಿದ್ದ ಧಾರ್ಮಿಕ ಸಮ್ಮೇಳನ ಒಂದರಲ್ಲಿ ಹಿಂದುತ್ವ ನಾಯಕರು ದ್ವೇಷ ಭಾಷಣ ಮಾಡಿದ್ದಾರೆ ಎನ್ನಲಾದ ವಿಡಿಯೋಗಳು ವೈರಲ್ ಆಗಿದ್ದವು. ಅದರಲ್ಲಿ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡುವ ಹೇಳಿಕೆಗಳು ದಾಖಲಾಗಿದ್ದವು. ಈ ವಿವಾದದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ತಮ್ಮ ವಿಡಿಯೋವನ್ನು ಹರಿಬಿಡಲಾಗಿದೆ ಎಂದು ಓವೈಸಿ ಆರೋಪ ಮಾಡಿದ್ದಾರೆ. 'ದಯವಿಟ್ಟು ನೆನಪಿಡಿ, ಯೋಗಿ (ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್) ಯಾವಾಗಲೂ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ. ಮೋದಿ'ಕಾನ್ಪುರದಲ್ಲಿ ನಾನು ಮಾಡಿದ 45 ನಿಮಿಷಗಳ ಭಾಷಣದಲ್ಲಿ 1 ನಿಮಿಷದ ವಿಡಿಯೋವನ್ನು ಮಾತ್ರ ಹರಿಬಿಡಲಾಗಿದೆ. ಹೀಗಾಗಿ ನನ್ನ ವಾದಗಳನ್ನು ನೇರವಾಗಿ ಮಂಡಿಸುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದರು. ನಾನು ಹಿಂಸೆಗೆ ಪ್ರಚೋದನೆ ನೀಡಿಲ್ಲ ಅಥವಾ ಬೆದರಿಕೆ ಒಡ್ಡಿಲ್ಲ. ಪೊಲೀಸರ ದೌರ್ಜನ್ಯದ ವಿರುದ್ಧ ನಾನು ಮಾತನಾಡಿದ್ದೇನೆ. ಅದರ ಪೂರ್ಣ ವಿಡಿಯೋ ಎರಡು ಭಾಗಗಳಲ್ಲಿವೆ.
Arrest Owaisi without trial https://t.co/BUhXZIt3SJ
— Hemant@KVG (@HemantKVG1) December 25, 2021
ನೀವು ಮೇಲಿನ ವಿಡಿಯೋದಲ್ಲಿ ನೋಡಿರುವಂತೆ, ನಾನು ಇದರಲ್ಲಿ ಪೊಲೀಸ್ ದೌರ್ಜನ್ಯಗಳ ಬಗ್ಗೆ ಕಾನ್ಪುರದಲ್ಲಿ ಮಾತನಾಡಿದ್ದೆ. ಮೋದಿ-ಯೋಗಿ ಅವರ ಕಾರಣಕ್ಕಾಗಿ ಜನರ ಸ್ವಾತಂತ್ರ್ಯಗಳನ್ನು ಹತ್ತಿಕ್ಕುವ ಅಧಿಕಾರ ತಮಗಿದೆ ಎಂದು ಭಾವಿಸುವ ಅಂತಹ ಪೊಲೀಸರನ್ನು ಉದ್ದೇಶಿಸಿ ಹೇಳಿದ್ದೆ. ನಮ್ಮ ಮೌನವನ್ನು ಒಪ್ಪಿಗೆ ಎಂದು ಗೊಂದಲ ಮಾಡಿಕೊಳ್ಳುವುದು ಬೇಡ ಎಂದಿದ್ದೆ' ಎಂದು ಓವೈಸಿ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.ಓವೈಸಿ ಹೇಳಿಕೆಗೆ ಬಿಜೆಪಿ ಅಲ್ಲದೆ, ಇತರೆ ಕೆಲವು ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿವೆ. ಓವೈಸಿ ಭಾಷಣವು ನಾಚಿಕೆಗೇಡಿನದ್ದು ಎಂದು ಶಿವಸೇನಾದ ಪ್ರಿಯಾಂಕಾ ಚತುರ್ವೇದಿ ಟೀಕಿಸಿದ್ದಾರೆ. ಎಂದೆಂದಿಗೂ ಪ್ರಧಾನಿಯಾಗಿ ಇರುವುದಿಲ್ಲ. ನಾವು ಮುಸ್ಲಿಮರು ನಿಮ್ಮ ಅನ್ಯಾಯಗಳನ್ನು ಮರೆಯುವುದಿಲ್ಲ. ಈ ಅನ್ಯಾಯವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅಲ್ಲಾಹು ತನ್ನ ಶಕ್ತಿಯಿಂದ ನಿಮ್ಮನ್ನು ನಾಶಪಡಿಸುತ್ತಾನೆ. ಸನ್ನಿವೇಶಗಳು ಬದಲಾಗಲಿವೆ. ಆಗ ನಿಮ್ಮನ್ನು ರಕ್ಷಿಸಲು ಯಾರು ಬರುತ್ತಾರೆ? ಯೋಗಿ ತಮ್ಮ ಮಠಕ್ಕೆ ಮರಳಿದಾಗ ಮತ್ತು ಮೋದಿ ಪರ್ವತಗಳತ್ತ ಹಿಮ್ಮೆಟ್ಟಿದ ಬಳಿಕ ಯಾರು ಬರುತ್ತಾರೆ?' ಎಂದು ಹೇಳುವುದು ವಿಡಿಯೋದಲ್ಲಿ ದಾಖಲಾಗಿತ್ತು.
ಉತ್ತರ ಪ್ರದೇಶ ಪೊಲೀಸರು ಮುಸ್ಲಿಮರ ವಿರುದ್ಧ ನಡೆಸಿದ ದೌರ್ಜನ್ಯಗಳ ಪಟ್ಟಿ ಮಾಡುವಾಗ ಈ ಹೇಳಿಕೆಯನ್ನು ನೀಡಿದ್ದು, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಬಿಂಬಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಇತರೆ ಪ್ರಮುಖ ಸಾಲುಗಳನ್ನು ಎಡಿಟ್ ಮಾಡಿ ವಿಡಿಯೋ ಬಿಡುಗಡೆ ಮಾಡಲಾಗಿದೆ ಎಂದು ಓವೈಸಿ ಆರೋಪಿಸಿದ್ದಾರೆ.












Click it and Unblock the Notifications