ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಠಿಣ ನಿರ್ಧಾರ ಘೋಷಿಸಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

|
Google Oneindia Kannada News

ಲಕ್ನೋ, ಮಾರ್ಚ್ 12: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ಕಠಿಣ ನಿರ್ಧಾರಗಳಿಂದಲೇ ದೇಶಾದ್ಯಂತ ಸುದ್ದಿಯಾಗುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈಗ ಅಂಥಹದ್ದೇ ಮತ್ತೊಂದು ಕ್ರಮಕ್ಕೆ ಮುಂದಾಗಿದ್ದಾರೆ.

ರಸ್ತೆಗಳನ್ನು ಒತ್ತುವರಿ ಮಾಡಿ ಅಕ್ರಮವಾಗಿ ನಿರ್ಮಿಸಲಾಗಿರುವ ಎಲ್ಲಾ ಧಾರ್ಮಿಕ ಕಟ್ಟಡಗಳನ್ನೂ ತೆರವುಗೊಳಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಈ ರೀತಿಯಾಗಿ ನಿರ್ಮಿಸಲಾಗಿರುವ ಎಲ್ಲಾ ಧಾರ್ಮಿಕ ಕಟ್ಟಡಗಳನ್ನೂ ತಕ್ಷಣವೇ ತೆರವುಗೊಳಿಸಬೇಕೆಂಬ ಆದೇಶ ನೀಡಲಾಗಿದೆ.

ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಪ್ರದಾಯಕ್ಕೆ ಜಾತ್ಯತೀತತೆ ಬಹುದೊಡ್ಡ ಬೆದರಿಕೆ: ಯೋಗಿ ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಪ್ರದಾಯಕ್ಕೆ ಜಾತ್ಯತೀತತೆ ಬಹುದೊಡ್ಡ ಬೆದರಿಕೆ: ಯೋಗಿ

ಉತ್ತರ ಪ್ರದೇಶ ಗೃಹ ಇಲಾಖೆ ಮಾ.11 ರಂದು ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೂ ಈ ಆದೇಶದ ಸುತ್ತೋಲೆಯನ್ನು ರವಾನೆ ಮಾಡಲಾಗಿದ್ದು, ರಸ್ತೆಗಳನ್ನು ಅತಿಕ್ರಮಿಸಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.

ಮಾರ್ಚ್ 14ರೊಳಗೆ ವರದಿ ನೀಡಬೇಕು

ಮಾರ್ಚ್ 14ರೊಳಗೆ ವರದಿ ನೀಡಬೇಕು

ಕಾನೂನು ಬಾಹಿರವಾಗಿ ನಿರ್ಮಿಸಲಾದ ಧಾರ್ಮಿಕ ರಚನೆಗಳು ಸೇರಿದಂತೆ ಎಲ್ಲಾ ಅತಿಕ್ರಮ ಕಟ್ಟಡಗಳನ್ನು ತೆಗೆದುಹಾಕಬೇಕು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ, ಮಾರ್ಚ್ 14ರೊಳಗೆ ವರದಿ ನೀಡುವಂತೆ ಕೇಳಿದ್ದಾರೆ.

ಒಂದು ಜಿಲ್ಲೆ ಒಂದು ಉತ್ಪನ್ನ

ಒಂದು ಜಿಲ್ಲೆ ಒಂದು ಉತ್ಪನ್ನ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಮುಂದಿನ ಹಣಕಾಸು ವರ್ಷದಲ್ಲಿ ಒಂದು ಜಿಲ್ಲೆ, ಒಂದು ಉತ್ಪನ್ನಕ್ಕೆ 250 ಕೋಟಿ ರೂ. ಮೀಸಲಿಡಲಿದ್ದಾರೆ.

ನಾಲ್ಕು ಆನ್‌ಲೈನ್ ಮೇಳಗಳ ಆಯೋಜನೆ

ನಾಲ್ಕು ಆನ್‌ಲೈನ್ ಮೇಳಗಳ ಆಯೋಜನೆ

ಕಳೆದ ವರ್ಷ ಒಡಿಒಪಿಯಲ್ಲಿ, ಮೇ 14, ಜೂನ್ 26., ಆಗಸ್ಟ್ 7 ಹಾಗೂ ಡಿಸೆಂಬರ್ 3 ರಂದು 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನಾಲ್ಕು ಆನಲ್‌ಲೈನ್ ಮೇಳಗಳ ಮೂಲಕ ಸುಮಾರು 30,000 ಕೋಟಿ ರೂ ಸಾಲ ನೀಡಲಾಯಿತು.

ಸೂಕ್ಷ್ಮ, ಸಣ್ಣ ಕೈಗಾರಿಗೆಗಳಿಗೆ ಬ್ಯಾಂಕ್‌ನಿಂದ ಸಾಲ

ಸೂಕ್ಷ್ಮ, ಸಣ್ಣ ಕೈಗಾರಿಗೆಗಳಿಗೆ ಬ್ಯಾಂಕ್‌ನಿಂದ ಸಾಲ

ಮುಂದಿನ ಹಣಕಾಸು ವರ್ಷದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ 80,000 ಕೋಟಿ ರೂ ಸಾಲ ನೀಡಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಸರ್ಕಾರವಿದೆ.

English summary
Uttar Pradesh government led by Chief Minister Yogi Adityanath has taken a serious note of all illegally built religious structures encroaching roads across the state and ordered their immediate removal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X