ಅಯೋಧ್ಯಾದಲ್ಲಿ ಶ್ರೀರಾಮ ಪ್ರತಿಮೆ ಸ್ಥಾಪನೆಗೆ ಮುಂದಾದ ಯೋಗಿ

ಲಕ್ನೋ, ನವೆಂಬರ್ 04: ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಶ್ರೀರಾಮಚಂದ್ರನ ಪ್ರತಿಮೆ ಸ್ಥಾಪಿಸಲು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ.

ದೀಪಾವಳಿ ವಿಶೇಷ ಪುರವಣಿ

ಸುಮಾರು 151 ಮೀಟರ್​ ಎತ್ತರದ ಪ್ರತಿಮೆ ನಿರ್ಮಾಣ ಮಾಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಹೇಳಿದ್ದಾರೆ.

ಆದಿತ್ಯನಾತ್ ಹೇಳಿಕೆಯನ್ನು ಸ್ವಾಗತಿಸಿರುವ ಎಸ್​ಪಿ ಮುಖಂಡ ಅಜಂ ಖಾನ್​, " ಉದ್ದೇಶಿತ ರಾಮನ ಪ್ರತಿಮೆಯು ಸರ್ದಾರ್ ಪಟೇಲ್​ ಪ್ರತಿಮೆಗಿಂತಲೂ ಎತ್ತರವಿರಬೇಕು" ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

Yogi Adityanath govt plans to build 100-metre statue of Lord Ram on banks of Saryu River

"ಗುಜರಾತ್​ನಲ್ಲಿ ಪಟೇಲ್​ ಪ್ರತಿಮೆ ನಿರ್ಮಿಸುವುದಕ್ಕೂ ಮೊದಲೇ ರಾಮನ ಪ್ರತಿಮೆ ನಿರ್ಮಾಣ ಮಾಡಲು ಅವರೇಕೆ ಮನಸ್ಸು ಮಾಡಲಿಲ್ಲ," ಎಂದೂ ಅವರು ಇದೇ ವೇಳೆ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

'ಈ ಬಾರಿ ದೀಪವಾಳಿಗೆ ರಾಮನಿಗಾಗಿ ದೀಪ ಬೆಳಗುತ್ತೇವೆ. ಕೆಲಸ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ದೀಪಾವಳಿ ನಂತರ ಈ ಕಾರ್ಯ ಆರಂಭವಾಗಲಿದೆ," ಎಂದು ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

ಸಂತ ತುಳಸೀದಾಸ್ ಘಾಟ್ ಬಳಿ ಸುಮಾರು 330 ಕೋಟಿ ರು ವೆಚ್ಚದಲ್ಲಿ 151 ಮೀಟರ್ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ, ದೀಪಾವಳಿ ಸಂದರ್ಭದಲ್ಲಿ ಈ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಅವರು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಅಯೋಧ್ಯ ನಗರದ ಮೇಯರ್ ಋಷಿಕೇಶ್ ಉಪಾಧ್ಯಾಯ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+