ದಿನವಿಡೀ AC ಕೆಳಗೆ ಕುಳಿತು ಕೆಲಸ ಮಾಡುತ್ತೀರಾ? ನೀವು ಸೇವಿಸುವ ಆಹಾರ ಹೀಗೆಯೇ ಇರಬೇಕು

ಬೇಸಿಗೆಯಲ್ಲಿ, ಹೆಚ್ಚಿನವರು ಹವಾನಿಯಂತ್ರಿತ ಕೋಣೆಗಳಲ್ಲಿಯೇ ಇರಲು ಬಯಸುತ್ತಾರೆ. ಕಚೇರಿಯಲ್ಲಾಗಲೀ, ಮನೆಯಲ್ಲಾಗಲೀ ಅಥವಾ ಕಾರುಗಳಲ್ಲಿಯಾಗಲೀ ಎಲ್ಲೇ ಇದ್ದರೂ ಎಸಿ ಬೇಕೇ ಬೇಕು. ಹವಾನಿಯಂತ್ರಣವು ಶಾಖದಿಂದ ತ್ವರಿತ ಪರಿಹಾರವನ್ನು ನೀಡುತ್ತದೆ ನಿಜ. ಆದರೆ ನಿರಂತರವಾಗಿ ಶೀತ, ಒಣ ಗಾಳಿಗೆ ದೇಹ ಒಡ್ಡಿಕೊಳ್ಳುವುದು ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಬೀರುತ್ತದೆ. ಡಿಹೈಡ್ರೇಶನ್‌, ಒಣ ಚರ್ಮ, ಆಯಾಸ, ತಲೆನೋವು ಅಥವಾ ಜೀರ್ಣಕಾರಿ ಸಮಸ್ಯೆಗಳು ಕಾಡಬಹುದು. ಆದ್ದರಿಂದ, ದಿನ ಪೂರ್ತಿ ಹವಾನಿಯಂತ್ರಿತ ಕೋಣೆಗಳಲ್ಲಿ ಇರುವವರು ಸರಿಯಾದ ಆಹಾರ ಪದ್ದತಿಯನ್ನು ಅನುಸರಿಸುವುದು ಬಹಳ ಮುಖ್ಯ. ಹವಾನಿಯಂತ್ರಿತ ಕೋಣೆಗಳಲ್ಲಿ ದೀರ್ಘಕಾಲದವರೆಗೆ ಕಾಲ ಕಳೆಯುವವರು ತಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ದೇಹವನ್ನು ಒಳಗಿನಿಂದ ಬಲಪಡಿಸುವ ಆಹಾರವನ್ನು ಸೇವಿಸಬೇಕು.

ಹವಾನಿಯಂತ್ರಿತ ಕೋಣೆಗಳಲ್ಲಿ ಇರುವವರು ಯಾವ ಆಹಾರವನ್ನು ಸೇವಿಸಬೇಕು:

ದೇಹವನ್ನು ಹೈಡ್ರೇಟ್ ಆಗಿಡುವುದು ಅತ್ಯಂತ ಮುಖ್ಯ:

ಎಸಿಯಲ್ಲಿದ್ದಾಗ ದೇಹವು ಹೆಚ್ಚು ಬೆವರುವುದಿಲ್ಲ. ಬಾಯಾರಿಕೆಯೂ ಕಡಿಮೆಯಾಗುವುದು. ಬಾಯಾರಿಕೆಯಾಗದೆ ಇರುವುದರಿಂದ ಜನರು ಸಾಮಾನ್ಯವಾಗಿ ಕಡಿಮೆ ನೀರು ಕುಡಿಯುತ್ತಾರೆ. ಆದರೆ ಈ ವಿಧಾನ ಸರಿಯಲ್ಲ. ಎಸಿಯಲ್ಲಿನ ಒಣ ಗಾಳಿಯು ದೇಹದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಮುಖ್ಯ. ಕಾಲಕಾಲಕ್ಕೆ ಎಳ ನೀರು, ಮಜ್ಜಿಗೆ ಮತ್ತು ನಿಂಬೆ ಪಾನಕವನ್ನು ಸೇವಿಸಬಹುದು.

Working All Day in AC

ಆಹಾರದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ:

ಬೇಸಿಗೆಯಲ್ಲಿ ನಿಮ್ಮ ದೇಹವನ್ನು ಹೈಡ್ರೇಟ್ ಆಗಿಡಲು, ತಾಜಾ ಹಣ್ಣುಗಳು ಮತ್ತು ಸಲಾಡ್‌ಗಳನ್ನು ಸೇರಿಸಿ. ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ದೇಹವು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಸಲಾಡ್‌ಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವ ಮೂಲಕ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ.

ಬೇಸಿಗೆಯಲ್ಲಿ ಆರೋಗ್ಯವಾಗಿರಬೇಕಾ ? ಈ 7 ಸರಳ ಅಭ್ಯಾಸಗಳನ್ನು ಇಂದೇ ಆರಂಭಿಸಿ
ಬೇಸಿಗೆಯಲ್ಲಿ ಆರೋಗ್ಯವಾಗಿರಬೇಕಾ ? ಈ 7 ಸರಳ ಅಭ್ಯಾಸಗಳನ್ನು ಇಂದೇ ಆರಂಭಿಸಿ

ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ:

ದಿನವಿಡೀ ಎಸಿಯಲ್ಲಿ ಕುಳಿತುಕೊಳ್ಳುವುದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ.ಆದ್ದರಿಂದ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ಆಲಸ್ಯ ಮತ್ತು ಹೊಟ್ಟೆ ಉಬ್ಬರ ಹೆಚ್ಚಾಗುತ್ತದೆ . ಆದ್ದರಿಂದ, ಈ ರೀತಿಯ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು.

ಹೆಚ್ಚು ಚಹಾ ಅಥವಾ ಕಾಫಿ ಕುಡಿಯಬಾರದು:

ಕೆಲವರಿಗೆ ಕಚೇರಿಯಲ್ಲಿ ಕುಳಿತು ನಿರಂತರವಾಗಿ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ, ಹೆಚ್ಚು ಕೆಫೀನ್ ದೇಹದಲ್ಲಿ ನೀರಿನ ಅಂಶ ಕಡಿಮೆ ಮಾಡುತ್ತದೆ. ಹಾಗಾಗಿ ಎಸಿಯಲ್ಲಿ ದಿನವಿಡೀ ಕುಳಿತು ಕೆಲಸ ಮಾಡುವವರು ಚಹಾ ಮತ್ತು ಕಾಫಿ ಸೇವನೆಯನ್ನು ಮಿತಿಗೊಳಿಸಬೇಕು. ಆಗಾಗ ನೀರು, ಮಜ್ಜಿಗೆ, ಪಾನಕಗಳನ್ನು ಸೇವಿಸುತ್ತಲೇ ಇರಬೇಕು.

ದೇಹದ ಕೊಬ್ಬು ಕರಗಿಸಲು ಬೇಸಿಗೆಯೇ ಬೆಸ್ಟ್‌:ಈ ಆಹಾರ ಸೇವಿಸುವ ಮೂಲಕ ಸುಲಭವಾಗಿ ಕಳೆದುಕೊಳ್ಳಬಹುದು ತೂಕ!
ದೇಹದ ಕೊಬ್ಬು ಕರಗಿಸಲು ಬೇಸಿಗೆಯೇ ಬೆಸ್ಟ್‌:ಈ ಆಹಾರ ಸೇವಿಸುವ ಮೂಲಕ ಸುಲಭವಾಗಿ ಕಳೆದುಕೊಳ್ಳಬಹುದು ತೂಕ!

ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ಅತ್ಯಗತ್ಯ:

ಹವಾನಿಯಂತ್ರಿತ ಗಾಳಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದಲ್ಲಿ ಶಕ್ತಿಯ ಕೊರತೆ ಉಂಟಾಗುತ್ತದೆ. ಇದನ್ನು ಎದುರಿಸಲು, ನಿಮ್ಮ ಆಹಾರದಲ್ಲಿ ಪ್ರೋಟೀನ್ ಸೇರಿಸಿ. ಬೇಳೆ, ಚೀಸ್, ಮೊಟ್ಟೆ, ಮೊಸರು ಮತ್ತು ಬೀಜಗಳಂತಹ ಆಹಾರಗಳು ದೇಹವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಬಾದಾಮಿ, ವಾಲ್ನಟ್‌ ಮತ್ತು ಬೀಜಗಳಂತಹ ಆರೋಗ್ಯಕರ ಕೊಬ್ಬನ್ನು ಸೇರಿಸಬೇಕು.

ಆಗಾಗ ಸ್ವಲ್ಪ ಸ್ವಲ್ಪ ಆಹಾರ ಸೇವಿಸಬೇಕು:

ದಿನವಿಡೀ ಕುಳಿತು ಕೆಲಸ ಮಾಡುವವರು ಒಮ್ಮೆಲೇ ಹೆಚ್ಚು ಆಹಾರ ಸೇವಿಸುವ ಬದಲು ಆಗಾಗಾ ಸ್ವಲ್ಪ ಸ್ವಲ್ಪ ಸಮತೋಲಿತ ಆಹಾರವನ್ನು ಸೇವಿಸಬೇಕು. ಇದು ದೇಹವನ್ನು ಹಗುರವಾಗಿರಿಸಲು ಸಹಾಯ ಮಾಡುತ್ತದೆ. ಮತ್ತು ದೇಹದಲ್ಲಿನ ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ.

ಜೀವನಶೈಲಿಯ ಬಗ್ಗೆಯೂ ಗಮನ ಕೊಡಿ:

ಕೇವಲ ಆಹಾರ ಕ್ರಮದ ಬಗ್ಗೆ ಮಾತ್ರವಲ್ಲ, ಜೀವನಶೈಲಿಯ ಬಗ್ಗೆಯೂ ಗಮನಹರಿಸಬೇಕು. ಸ್ವಲ್ಪ ವಾಕ್‌ ಮಾಡುವುದು, ಸ್ಟ್ರೆಚಿಂಗ್ ಮಾಡುವುದು ಮತ್ತು ನೈಸರ್ಗಿಕ ಗಾಳಿಯಲ್ಲಿ ಸ್ವಲ್ಪ ಸಮಯ ಕಳೆಯುವುದು ಬಹಳ ಮುಖ್ಯ. ಇದು ದೇಹವನ್ನು ಸಕ್ರಿಯವಾಗಿರಿಸುತ್ತದೆ ಮತ್ತು ನಿರಂತರ ಹವಾನಿಯಂತ್ರಣದ ಪರಿಣಾಮಗಳಿಂದ ದೇಹದ ಮೇಲೆ ಆಗುವ ದುಷ್ಪರಿಣಾಮಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+