ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಗೆ ಒಪ್ಪದ ಮಹಿಳಾ ಕಾನ್ ಸ್ಟೇಬಲ್ ಮೇಲೆ ಆಸಿಡ್ ದಾಳಿ

|
Google Oneindia Kannada News

ಮಥುರಾ (ಉತ್ತರಪ್ರದೇಶ), ಏಪ್ರಿಲ್ 4: ಉತ್ತರಪ್ರದೇಶದ ಮಥುರಾದಲ್ಲಿ ಗುರುವಾರ ನಾಲ್ವರು ಸೇರಿ ಮಹಿಳಾ ಕಾನ್ ಸ್ಟೇಬಲ್ ಮೇಲೆ ಆಸಿಡ್ ದಾಳಿ ನಡೆಸಿದ್ದಾರೆ. ಮದುವೆ ಪ್ರಸ್ತಾವವನ್ನು ನಿರಾಕರಿಸಿದ್ದಕ್ಕೆ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪೈಕಿ ಒಬ್ಬಾತ ಆಕೆಗೆ ಮದುವೆ ಪ್ರಸ್ತಾವ ಮಾಡಿದ್ದ. ಅದನ್ನು ಒಪ್ಪಿಕೊಳ್ಳದ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ.

ಬೆಳಗ್ಗೆ ನಾಲ್ಕೂ ಮೂವತ್ತರ ವೇಳೆಗೆ ದಾಮೋದರ್ ಪುರ ಹಳ್ಳಿಯಲ್ಲಿ ಘಟನೆ ನಡೆದಿದೆ. ಆ ಮಹಿಳಾ ಕಾನ್ ಸ್ಟೇಬಲ್ ಕರ್ತವ್ಯ ನಿರ್ವಹಿಸಲು ತೆರಳುವ ವೇಳೆ ಕಾರಿನಲ್ಲಿ ಬಂದ ನಾಲ್ವರು ದಾಳಿ ನಡೆಸಿದ್ದಾರೆ. ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಗುರುತಿಸಲಾಗಿದ್ದು, ಸಂಜಯ್ ಮತ್ತು ಸೋನು ಸಿಂಗ್ ಎನ್ನಲಾಗಿದೆ.

Woman constable attacked with acid in Mathura

ಬಾಡಿಗೆ ತಾಯ್ತನದಿಂದ ಹಣ ಗಣಿಸುವ ಆಸೆಗೆ ತಣ್ಣೀರು, ಪತ್ನಿ ಮೇಲೆ ಆ್ಯಸಿಡ್ ದಾಳಿಬಾಡಿಗೆ ತಾಯ್ತನದಿಂದ ಹಣ ಗಣಿಸುವ ಆಸೆಗೆ ತಣ್ಣೀರು, ಪತ್ನಿ ಮೇಲೆ ಆ್ಯಸಿಡ್ ದಾಳಿ

ಆಕೆಯ ಕೂಗಾಟ- ಚೀರಾಟ ಕೇಳಿ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ತಕ್ಷಣಕ್ಕೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶೇಕಡಾ ನಲವತ್ತೈದರಷ್ಟು ಸುಟ್ಟ ಗಾಯಗಳಾಗಿದ್ದ ಆಗ್ರಾದ ಎಂ.ಎನ್.ಮೆಡಿಕಲ್ ಕಾಲೇಜಿಗೆ ದಾಖಲು ಮಾಡಲಾಗಿದೆ. ಆರೋಪಿ ಸಂಜಯ್ ಸಿಂಗ್ ಆಕೆಯನ್ನು ಮದುವೆ ಆಗಲು ಬಯಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಲೆ ಮರೆಸಿಕೊಂಡಿರುವ ಇತರ ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

English summary
A woman police constable was attacked with acid allegedly by four men in Uttar Pradesh's Mathura on Thursday after she refused to marry one of the accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X