ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿನ ಬರ್ಬರ ಹತ್ಯೆ : ತುಕ್ಡೇ ಗ್ಯಾಂಗ್ ಎಲ್ಲಿದೆ, ಆಷಾಡಭೂತಿ ತಾರೆಯರೇ ಎಲ್ಲಿದ್ದೀರಿ?

|
Google Oneindia Kannada News

ಲಕ್ನೋ, ಜೂನ್ 07 : ಕೇವಲ 10 ಸಾವಿರ ರುಪಾಯಿ ಸಾಲ ತೀರಿಸದಿದ್ದಕ್ಕಾಗಿ ಮೂರು ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ತುಂಡುತುಂಡು ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಹತ್ಯೆಯನ್ನು ಮೊಹಮ್ಮದ್ ಜಾಹಿದ್ ಎಂಬ ಮುಸಲ್ಮಾನ ಯುವಕ ಮಾಡಿದ್ದಾನೆಂದು ತಿಳಿದುಬಂದಿದೆ. ಬಾಲಕಿಯ ಪೋಷಕರು ಜಾಹಿದ್ ನಿಂದ 10 ಸಾವಿರ ರುಪಾಯಿ ಸಾಲ ಪಡೆದಿದ್ದರು. ಅದನ್ನು ತೀರಿಸಲು ಸಾಧ್ಯವಾಗದ ಕಾರಣ, ಆತ ಬಾಲಕಿಯನ್ನೇ ಅಪಹರಿಸಿ, ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದಲ್ಲದೆ, ಕಣ್ಣುಗುಡ್ಡೆಯನ್ನು ಕಿತ್ತುಹಾಕಿ ಪೈಶಾಚಿಕ ಕೃತ್ಯ ಎಸಗಿದ್ದ.

ಯುವತಿಯ ಮಾರಾಟ, ಸಾಮೂಹಿಕ ಅತ್ಯಾಚಾರ, ಅವಮಾನ ಸಹಿಸದೆ ಆತ್ಮಹತ್ಯೆಗೆ ಯತ್ನಯುವತಿಯ ಮಾರಾಟ, ಸಾಮೂಹಿಕ ಅತ್ಯಾಚಾರ, ಅವಮಾನ ಸಹಿಸದೆ ಆತ್ಮಹತ್ಯೆಗೆ ಯತ್ನ

ಈ ಕೃತ್ಯವನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ನಡೆದಿದ್ದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯ ಜೊತೆ ಟ್ವಿಟ್ಟಿಗರು ಹೋಲಿಸುತ್ತಿದ್ದು, ಅಂದು ಪ್ಲಕಾರ್ಡ್ ಹಿಡಿದು ಹಿಂದೂಗಳ ಮೇಲೆ ಕೆಂಡ ಕಾರಿದ್ದ ಬಾಲಿವುಡ್ ಬಿನ್ನಾಣಗಿತ್ತಿಯರು ಈಗೆಲ್ಲಿದ್ದಾರೆ ಎಂದು ಕೆಂಡ ಕಾರುತ್ತಿದ್ದಾರೆ.

ಆ ಪುಟ್ಟ ಮಗುವಿನ ಮೇಲೆ ಆಸಿಡ್ ಸುರಿಯಲಾಗಿದೆ. ದೇಹವನ್ನು ತಿರುಚಲಾಗಿದೆ, ಕಣ್ಣುಗಳನ್ನು ಕಿತ್ತು ಹಾಕಲಾಗಿದೆ. ಹತ್ಯೆ ಮಾಡುವ ಮುನ್ನ ಅತ್ಯಾಚಾರವನ್ನೂ ಎಸಗಲಾಗಿದೆ ಮತ್ತು ಆಕೆಯ ದೇಹವನ್ನು ತಿಪ್ಪೆಗುಂಡಿಗೆ ಎಸೆಯಲಾಗಿತ್ತು. ಆ ದೇಹವನ್ನು ಬೀದಿ ನಾಯಿಗಳು ಕಿತ್ತು ತಿಂದಿವೆ.

ಆಳ್ವಾರ್ ಮಹಿಳೆಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ : ನರೇಂದ್ರ ಮೋದಿ ಕಿಡಿಆಳ್ವಾರ್ ಮಹಿಳೆಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ : ನರೇಂದ್ರ ಮೋದಿ ಕಿಡಿ

ಈ ಹತ್ಯೆ ಮಾಡಿದ ಮೊಹಮ್ಮದ್ ಜಾಹಿದ್ ಮತ್ತು ಸ್ನೇಹಿತರನ್ನು ಬಂಧಿಸಲಾಗಿದೆ. ಬಾಲಕಿಗೆ ಬಿಸ್ಕತ್ ತಿನ್ನಿಸುವ ಆಸೆ ಹುಟ್ಟಿಸಿ ಅಪಹರಿಸಿದ್ದಾಗಿ, ನಂತರ ದುಪಟ್ಟಾದಿಂದ ಕತ್ತು ಹಿಸುಕಿದ್ದಾಗಿ ಒಪ್ಪಿಕೊಂಡಿದ್ದಾನೆ.

ಕಾಶ್ಮೀರದ ಪೊಲೀಸರನ್ನು ಏಕೆ ದೂರಲಿಲ್ಲ

ಕಾಶ್ಮೀರದ ಪೊಲೀಸರನ್ನು ಏಕೆ ದೂರಲಿಲ್ಲ

ಈ ಘಟನೆಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ಅವರು ಕೂಡ ಬರ್ಬರತೆಯ ಬಗ್ಗೆ ಟೀಕಾ ಪ್ರಹಾರ ಮಾಡಿದ್ದಾರೆ. ಅವರ ಟ್ವೀಟಿಗೆ ಕೂಡ ಜನರು ಪ್ರತಿಕ್ರಿಯಿಸುತ್ತಿದ್ದು, ಇಂದು ಉತ್ತರ ಪ್ರದೇಶದ ಪೊಲೀಸರನ್ನು ದೂರುವವರು, ಕಥುವಾದಲ್ಲಿ ದೇವಸ್ಥಾನವೊಂದರಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ನಡೆದಾಗ ಜಮ್ಮು ಮತ್ತು ಕಾಶ್ಮೀರದ ಪೊಲೀಸರನ್ನು ಏಕೆ ದೂರಲಿಲ್ಲ ಎಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸುತ್ತಿದ್ದಾರೆ.

ಆಘಾತ ಉಂಟುಮಾಡಿದೆ : ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅವರ ಟ್ವೀಟ್ ಹೀಗಿದೆ : "ಉತ್ತರ ಪ್ರದೇಶದ ಅಲಿಘರ್ ನಲ್ಲಿ ನಡೆದ ಬರ್ಬರ ಹತ್ಯೆ ನನಗೆ ಆಘಾತ ಉಂಟು ಮಾಡಿದ್ದು, ನನ್ನನ್ನು ವಿಚಲಿತನನ್ನಾಗಿ ಮಾಡಿದೆ. ಒಬ್ಬ ಮಾನವೀಯತೆ ಇರುವ ವ್ಯಕ್ತಿ ಒಂದು ಮಗುವನ್ನು ಇಷ್ಟು ಪೈಶಾಚಿಕವಾಗಿ ಹೇಗೆ ಹತ್ಯೆ ಮಾಡಬಲ್ಲ? ಈ ಅಪರಾಧ ಮಾಡಿದವನನ್ನು ಶಿಕ್ಷಿಸದೆ ಬಿಡಬಾರದು. ಉತ್ತರ ಪ್ರದೇಶದ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆಗಿಳಿದು ನ್ಯಾಯ ಒದಗಿಸಬೇಕು."

ಆಳ್ವಾರ್ : ಗಂಡನೆದುರೇ ಐವರಿಂದ ಹೆಂಡತಿಯ ಸಾಮೂಹಿಕ ಅತ್ಯಾಚಾರ ಆಳ್ವಾರ್ : ಗಂಡನೆದುರೇ ಐವರಿಂದ ಹೆಂಡತಿಯ ಸಾಮೂಹಿಕ ಅತ್ಯಾಚಾರ

ಬಾಲಿವುಡ್ ತಾರೆಯರ ಆಷಾಡಭೂತಿತನ

ಬಾಲಿವುಡ್ ತಾರೆಯರ ಆಷಾಡಭೂತಿತನವನ್ನು ಟೀಕಿಸಿರುವ ಸೋನಮ್ ಮಹಾಜನ್ ಎಂಬುವವರು, ಈ ಬಾಲಿವುಡ್ ತಾರೆಯರು ಈ ಪೈಶಾಚಿಕ ಕೃತ್ಯದ ಬಗ್ಗೆ ಪ್ಲಕಾರ್ಡ್ ಹಿಡಿಯುತ್ತಾರೋ ಬಿಡುತ್ತಾರೆ, ಮೊಹಮ್ಮದ್ ಜಾಹಿದ್ ಬಗ್ಗೆ ಅಸಹ್ಯ ಪಟ್ಟುಕೊಳ್ಳುತ್ತಾರೋ ಬಿಡುತ್ತಾರೋ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ವಸ್ತುಸ್ಥಿತಿ ಏನೆಂದರೆ 3 ವರ್ಷದ ಕಂದಮ್ಮ ಟ್ವಿ** ಶರ್ಮಾ ಹತ್ಯೆಗೀಡಾಗಿದ್ದಾಳೆ. ಕಣ್ಣು ಕಿತ್ತಲಾಗಿದೆ, ಆಕೆಯ ದೇಹ ಸುಡಲಾಗಿದೆ ಮತ್ತು ತಿರುಚಲಾಗಿದೆ. ಮತ್ತು ಇದನ್ನೆಲ್ಲ ಪವಿತ್ರ ರಂಜಾನ್ ತಿಂಗಳಲ್ಲಿಯೇ ಆತ ಮಾಡಿದ್ದಾನೆ. ಕರ್ಮಾ ತನ್ನ ಕಾರ್ಯಾಚರಣೆ ನಡೆಸುವ ಮುನ್ನ ಪೊಲೀಸರು ಕಾರ್ಯಾಚರಣೆ ನಡೆಸುತ್ತಾರೆಂದು ನಂಬಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.

ಸ್ವಾರ್ಥಕ್ಕಾಗಿ ಬಳಸಬೇಡಿ : ಸೋನಮ್ ಕಪೂರ್

ಈ ಹತ್ಯೆಯ ಬಗ್ಗೆ ಬಾಲಿವುಡ್ ತಾರೆ ಸೋನಮ್ ಕಪೂರ್ ಆಹುಜಾ ಅವರು ಟ್ವೀಟ್ ಮಾಡಿದ್ದು ಕೂಡ ಟೀಕೆಗೆ ಗುರಿಯಾಗಿದೆ. ಹಿಂದೆ ಕಥುವಾದಲ್ಲಿ ಬಾಲಕಿಯ ಹತ್ಯೆಯಾಗಿದ್ದಾಗ, ಸುಂದರವಾದ ಸೋನಮ್, ಪ್ಲಕಾರ್ಡ್ ಹಿಡಿದುಕೊಂಡು, ನಾನು ಹಿಂದೂಸ್ತಾನಿ, ನನಗೆ ನಾಚಿಕೆಯಾಗುತ್ತಿದೆ, ದೇವಿಸ್ಥಾನದಲ್ಲಿ 8 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ, ಮರ್ಡರ್ ಆಗಿದೆ ಎಂದಿದ್ದ ಫೋಟೋ ಅಂಟಿಸಿದ್ದಾರೆ. ಆದರೆ, ಈಗ ಏಕೆ ಪ್ಲಕಾರ್ಡ್ ಹಿಡಿದು ಅಲಿಘರ್ ನಲ್ಲಿ ನಡೆದ ಈ ಘಟನೆಯನ್ನು ಟೀಕಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಸೋನಮ್ ಮಾಡಿರುವ ಟ್ವೀಟ್ ಹೀಗಿದೆ : "ಟ್ವಿ**ಗೆ ಆಗಿರುವುದು ಬರ್ಬರವಾದದ್ದು ಮತ್ತು ಹೃದಯ ಬಿರಿಯುವಂಥದ್ದು. ಆಕೆಯ ಕುಟುಂಬಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಈ ಘಟನೆಯನ್ನು ಸ್ವಾರ್ಥಕ್ಕಾಗಿ ಬಳಸಬೇಡಿ ಎಂದು ಜನರಲ್ಲಿ ಆಗ್ರಹಿಸುತ್ತೇನೆ. ಇದು ಪುಟ್ಟ ಬಾಲಕಿಯ ಸಾವು, ದ್ವೇಷ ಬಿತ್ತಲು ಕಾರಣವಾಗಬಾರದು!"

ಅತ್ಯಾಚಾರಿಯನ್ನು ನೇಣಿಗೆ ಹಾಕಿ : ಅನುಪಮ್ ಖೇರ್

ಬಾಲಿವುಡ್ ಖ್ಯಾತ ನಟ ಅನುಮಪ್ ಖೇರ್ ಅವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ : "ಸಿಟ್ಟು ಕುದಿಯುತ್ತಿದೆ, ಆಘಾತವಾಗಿದೆ, ನಾಚಿಕೆಯಾಗುತ್ತಿದೆ, ಮೂರು ವರ್ಷದ ಟ್ವಿ** ಶರ್ಮಾಳ ಬರ್ಬರ ಹತ್ಯೆಯ ನೋವನ್ನು ವ್ಯಕ್ತಪಡಿಸಲು ಮಾತುಗಳೇ ಬರುತ್ತಿಲ್ಲ. ಅತ್ಯಾಚಾರಿಯನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು. ಇಂಥ ಹೇಯ ಕೃತ್ಯಕ್ಕಾಗಿ ಬೇರೆ ಯಾವ ಶಿಕ್ಷೆಯೂ ಕಡಿಮೆಯೇ. ಟ್ವಿ** ಶರ್ಮಾಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ನಾನು ಆಗ್ರಹಿಸುತ್ತೇನೆ." ವಿಕ್ಕಿ ಡೋನರ್ ಖ್ಯಾತಿಯ ಆಯುಶ್ಮಾನ್ ಖುರಾನಾ ಕೂಡ ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ಅಕ್ಷಯ್ ಕುಮಾರ್ ಕಿಡಿನುಡಿ

ಮತ್ತೊಬ್ಬ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರು, "ಮಗು ಟ್ವಿ** ಶರ್ಮಾಳ ಹತ್ಯೆಯಿಂದ ಭಯಭೀತನಾಗಿದ್ದೇನೆ, ತೀರ ಆಘಾತಕ್ಕೊಳಗಾಗಿದ್ದೇನೆ. ಇಂಥ ಭಯಾನಕ ಜಗತ್ತು ನಮ್ಮ ಮಕ್ಕಳಿಗೆ ಖಂಡಿತ ಸಿಗಬೇಕಿಲ್ಲ. ಈ ಹೇಯ ಕೃತ್ಯಕ್ಕಾಗಿ ಅತ್ಯಾಚಾರಿಯ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಕೋರುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

ತುಕ್ಡೇ ಗ್ಯಾಂಗ್ ಪ್ರತಿಭಟನಾಕಾರರೇ ಎಲ್ಲಿದ್ದೀರಿ?

ಜಾತ್ಯತೀತವಾದಿಗಳೇ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ! ಅಲಿಘರ್ ನಲ್ಲಿ 3 ವರ್ಷದ ಕಂದಮ್ಮನನ್ನು ಅತ್ಯಾಚಾರ ಮಾಡಿ, ಬರ್ಬರವಾಗಿ ಕಗ್ಗೊಲೆ ಮಾಡಲಾಗಿದೆ. ತುಕ್ಡೇ ಗ್ಯಾಂಗ್ ನಿಂದ, ಪೇಯ್ಡ್ ಸೆಲೆಬ್ರಿಟಿಗಳಿಂದ, ದಲಾಲ್ ಪತ್ರಕರ್ತರಿಂದ ಏಕೆ ಪ್ಲಕಾರ್ಡ್ ಚಳವಳಿಗಾರರಿಂದ ಪ್ರತಿಭಟನೆಯಿಲ್ಲ, ಕ್ಯಾಂಡಲ್ ಹಿಡಿದು ಏಕೆ ಪ್ರತಿಭಟಿಸುತ್ತಿಲ್ಲ? ಕಥುವಾದ 8 ವರ್ಷದ ಬಾಲಕಿಯ ಹತ್ಯೆಗೂ, ಅಲಿಘರ್ ನ 3 ವರ್ಷದ ಬಾಲಕಿಯ ಈ ಹೇಯ ಹತ್ಯೆಗೂ ಏನು ವ್ಯತ್ಯಾಸ? ಅತ್ಯಾಚಾರಿಯನ್ನು ನೇಣಿಗೆ ಹಾಕಬೇಕು ಎಂದು ಮೇಜರ್ ಸುರೇಂದ್ರ ಪೂನಿಯಾ ಎಂಬುವವರು ತುಕ್ಡೇ ಗ್ಯಾಂಗಿನ ಮೇಲೆ, ಸೆಲೆಬ್ರಿಟಿಗಳ ಮೇಲೆ ಮತ್ತು ಕೆಲ ಪತ್ರಕರ್ತರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ತಾರೆಯರ ಆಕ್ರೋಶದ ನುಡಿ

ನೆನೆಸಿಕೊಂಡರೆ ರಕ್ತ ಕುದಿಯುವಂತಹ ಈ ಕೃತ್ಯದ ಬಗ್ಗೆ ಬಾಲಿವುಡ್ ತಾರೆಯರಾದ ರವೀನಾ ಟಂಡನ್, ಅಭಿಷೇಕ್ ಬಚ್ಚನ್, ಗುಲ್ ಪನಾಗ್, ಊರ್ಮಿಳಾ ಮಾತೋಂಡ್ಕರ್, ಕೋಯ್ನಾ ಮಿತ್ರಾ, ರಾಜಕಾರಣಿ ಮಿಲಿಂದ್ ದಿಯೋರಾ, ಶೆಹಜಾದ್ ಜೈ ಹಿಂದ್ ಮುಂತಾದವರು ಕಂಬನಿ ಮಿಡಿದಿದ್ದಾರೆ. ಆ ಕುಟುಂಬದ ಮತ್ತು ಮಗುವನ್ನು ಕಳೆದುಕೊಂಡ ಪೋಷಕರ ದುಃಖವನ್ನು ಊಹಿಸಲು ಕೂಡ ಸಾಧ್ಯವಾಗುತ್ತಿಲ್ಲ. ಇದು ಇಡೀ ಸಮಾಜದ ಸಾಂಘಿಕ ಸೋಲು ಎಂದು ಗುಲ್ ಪನಾಗ್ ಅವರು ಕಿಡಿ ಕಾರಿದ್ದಾರೆ.

ಪೊಲೀಸರು ಕೂಡಲೆ ದೂರು ಸ್ವೀಕರಿಸಿದ್ದರೆ...

ಪೊಲೀಸರು ಕೂಡಲೆ ದೂರು ಸ್ವೀಕರಿಸಿದ್ದರೆ...

ದುರಾದೃಷ್ಟವೆಂದರೆ, ಬಾಲಕಿ ಕಾಣೆಯಾಗುತ್ತಲೇ ಪೊಲೀಸರು ಕೂಡಲೆ ದೂರು ಸ್ವೀಕರಿಸಿಲ್ಲ. ಕೂಡಲೆ ದೂರು ಸ್ವೀಕರಿಸಿದ್ದರೆ, ಬೆದರಿಕೆ ಒಡ್ಡಿದ್ದ ಪಾತಕಿಯನ್ನು ಪತ್ತೆ ಹಚ್ಚಬಹುದಾಗಿತ್ತು ಮತ್ತು ಬಾಲಕಿಯನ್ನು ರಕ್ಷಿಸಬಹುದಾಗಿತ್ತು. ಸಾಲದ ಹಣ ಹಣ ವಾಪಸ್ ನೀಡಲು ತಡ ಮಾಡಿದ್ದರಿಂದಾಗಿ ಅಮಾಯಕ ಬಾಲಕಿಯ ಹತ್ಯೆ ನಡೆದುಹೋಗಿದೆ. ಮಗುವನ್ನು ಅಹರಿಸಿದ 30 ಗಂಟೆಗಳ ನಂತರವಷ್ಟೇ ಎಫ್ಐಆರ್ ದಾಖಲಿಸಲಾಗಿದೆ. ಬಾಲಕಿ ಪತ್ತೆಯಾದಾಗ, ಆಕೆಯ ಕೈಯನ್ನೇ ಕತ್ತರಿಸಲಾಗಿತ್ತು ಮತ್ತು ಗುರುತಿಸಲಾಗದಷ್ಟು ದೇಹ ಹಾಳಾಗಿತ್ತು ಎಂದು ಪೋಷಕರು ಹೇಳಿದ್ದಾರೆ. ಮತ್ತೊಂದು ಸಂಗತಿಯೆಂದರೆ, ಇದೇ ಮೊಹಮ್ಮದ್ ಜಾಹಿದ್ ಇನ್ನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದು, ಜಾಮೀನಿನ ಮೇಲಿದ್ದ.

English summary
Widespread anger against brutal murder of baby in Aligarh. Rahul Gandhi, Abhishek Bachchan, Gul Panag, Sonam Kapoor, Raveena Tandon, Akshay Kumar have condemned the barbaric murder of 3 year old girl in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X