ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಾಂತರ ಪರ ಪ್ರಚಾರ; ಐಎಎಸ್‌ ಅಧಿಕಾರಿ ವಿರುದ್ಧ ಆರೋಪ; ತನಿಖೆಗೆ ಆದೇಶ

|
Google Oneindia Kannada News

ಕಾನ್ಪುರ, ಸೆಪ್ಟೆಂಬರ್‌, 28: ಕಾನ್ಪುರದ ಐಎಎಸ್‌ ಅಧಿಕಾರಿಯೊಬ್ಬರು ಧಾರ್ಮಿಕ ಮತಾಂತರದ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹಾಗೆಯೇ ಹಿಂದುತ್ವ ವಿರುದ್ಧವಾಗಿಯೂ ಪ್ರಚಾರ ಮಾಡುತ್ತಿದ್ದಾರೆ ಎಂದು ಕೂಡಾ ಆರೋಪಿಸಲಾಗಿದೆ.

ಈ ಕಾನ್ಪುರದ ಹಿರಿಯ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಇಫ್ತಿಖರುದ್ಧಿನ್‌ ಎಂಬವರು ಧಾರ್ಮಿಕ ಮತಾಂತರದ ಪ್ರಚಾರ ಮಾಡುತ್ತಿರುವ ಹಾಗೂ ಹಿಂದುತ್ವ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಲಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು ಈ ವಿಚಾರದಲ್ಲಿ ಈಗ ತನಿಖೆಗೆ ಆದೇಶ ನೀಡಲಾಗಿದೆ.

ಕಾನ್ಪುರದಲ್ಲಿ ಮಗಳ ಎದುರಲ್ಲೇ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆಕಾನ್ಪುರದಲ್ಲಿ ಮಗಳ ಎದುರಲ್ಲೇ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ

ಹಿರಿಯ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಇಫ್ತಿಖರುದ್ಧಿನ್‌ ಹಿಂದುತ್ವದ ವಿರುದ್ದವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಆರೋಪವನ್ನು ಮಠ ಮಂದಿರ ಸಮನ್ವಯ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಭೂಪೇಶ್‌ ಅವಸ್ತಿ ಮಾಡಿದ್ದಾರೆ.

Viral video: Kanpur IAS officer accused of promoting conversion to Islam, probe ordered

ಹಿರಿಯ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಇಫ್ತಿಖರುದ್ಧಿನ್‌ ಪ್ರಸ್ತುತ ಯುಪಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಮೊಹಮ್ಮದ್‌ ಇಫ್ತಿಖರುದ್ಧಿನ್‌ರದ್ದು ಎಂದು ಹೇಳಲಾದ ವಿಡಿಯೋವನ್ನು ಭೂಪೇಶ್‌ ಅವಸ್ತಿ ಬಿಡುಗಡೆ ಮಾಡಿದ್ದಾರೆ. ಆದರೆ ಈ ವಿಡಿಯೋ ನಿಜವಾಗಿಯೂ ಮೊಹಮ್ಮದ್‌ ಇಫ್ತಿಖರುದ್ಧಿನ್‌ ಅವರದ್ದೆ ಅಥವಾ ಆ ವಿಡಿಯೋದಲ್ಲಿ ಇರುವ ವ್ಯಕ್ತಿ ಮೊಹಮ್ಮದ್‌ ಇಫ್ತಿಖರುದ್ಧಿನ್‌ ಅವರೇ ಎಂದು ಇನ್ನು ಕೂಡಾ ದೃಢಪಟ್ಟಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ.

ಇನ್ನು ಈ ವಿಡಿಯೋದಲ್ಲಿ ಹಿರಿಯ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಇಫ್ತಿಖರುದ್ಧಿನ್‌ ಕಾನ್ಪುರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಜನರು ನೆಲದ ಮೇಲೆ ಕುಳಿತಿರುವುದು ಹಾಗೂ ಮೌಲ್ವಿ ಧಾರ್ಮಿಕ ಪ್ರವಚನ ನೀಡುತ್ತಿರುವುದು ಕಂಡು ಬಂದಿದೆ. ಹಾಗೆಯೇ ಈ ಧಾರ್ಮಿಕ ಪ್ರವಚನದಲ್ಲಿ ಹಿರಿಯ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಇಫ್ತಿಖರುದ್ಧಿನ್‌ ಇದ್ದಾರೆ ಎಂದು ಹೇಳಲಾಗಿದೆ.

ಯುಪಿಯಲ್ಲಿ ವ್ಯಕ್ತಿಗೆ ಹಲ್ಲೆ ಮಾಡಿದ್ದ ಆರೋಪಿಗಳಿಗೆ 24 ಗಂಟೆಯೊಳಗೆ ಜಾಮೀನುಯುಪಿಯಲ್ಲಿ ವ್ಯಕ್ತಿಗೆ ಹಲ್ಲೆ ಮಾಡಿದ್ದ ಆರೋಪಿಗಳಿಗೆ 24 ಗಂಟೆಯೊಳಗೆ ಜಾಮೀನು

ವಿಡಿಯೋದಲ್ಲಿರುವ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಇಫ್ತಿಖರುದ್ಧಿನ್‌ ಎಂದು ಹೇಳಲಾದ ವ್ಯಕ್ತಿಯು ನೆಲದಲ್ಲಿ ಕುಳಿತಿದ್ದ ಜನರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಧಾರ್ಮಿಕ ಮತಾಂತರದ ಬಗ್ಗೆಯೂ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ವಿಶೇಷ ತನಿಖಾ ದಳವು ತನಿಖೆಯನ್ನು ನಡೆಸಲು ಆರಂಭಿಸಿದೆ. ಈ ತನಿಖೆಯು ಡಿಜಿ ಸಿಬಿಸಿಐಡಿ ಜಿಎಲ್‌ ಮೀನಾ ನೇತೃತ್ವದಲ್ಲಿ ನಡೆಯಲಿದೆ.

ಆದರೆ ಈ ವಿಡಿಯೋ ಯಾವ ದಿನದಂದು, ಸರಿಯಾಗಿ ಯಾವ ಸ್ಥಳದಲ್ಲಿ ಮಾಡಲಾಗಿದೆ ಎಂಬುವುದು ಇನ್ನೂ ಕೂಡಾ ತಿಳಿದು ಬಂದಿಲ್ಲ. ಹಾಗೆಯೇ ಈ ಆರೋಪವನ್ನು ಮಾಡಿರುವ ಮಠ ಮಂದಿರ ಸಮನ್ವಯ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಭೂಪೇಶ್‌ ಅವಸ್ತಿಯು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಬದಲಾಗಿ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಇಫ್ತಿಖರುದ್ಧಿನ್‌ ಧಾರ್ಮಿಕ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದಷ್ಟೇ ಆರೋಪ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರವು ಮತಾಂತರ ವಿರೋಧಿ ಕಾನೂನನ್ನು ಕಳೆದ ವರ್ಷ ಜಾರಿಗೆ ತಂದಿದೆ. ಈ ಕಾನೂನನ್ನು ಜಾರಿಗೆ ತಂದ ಒಂದು ತಿಂಗಳಿನಲ್ಲೇ ಉತ್ತರ ಪ್ರದೇಶ ಪೊಲೀಸರು 14 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. ಈ ಪ್ರಕರಣದಲ್ಲಿ 51 ಮಂದಿಯನ್ನು ಬಂಧನ ಮಾಡಲಾಗಿದೆ. ಈ 14 ಪ್ರಕರಣಗಳ ಪೈಕಿ 13 ಪ್ರಕರಣಗಳು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರ ಮಾಡಲು ಒತ್ತಡ ಹೇರಿದ ಆರೋಪಗಳಡಿ ದಾಖಲಾಗಿವೆ. ಆದರೆ ಕೇವಲ ಎರಡು ಪ್ರಕರಣಗಳಲ್ಲಿ ಸ್ವತಃ ಮಹಿಳೆಯರೇ ದೂರು ನೀಡಿದ್ದಾರೆ. ಉಳಿದವು ಕುಟುಂಬಸ್ಥರು ತಾವಾಗಿಯೇ ಅಥವಾ ಹಿಂದೂ ಸಂಘಟನೆಗಳು ಮಧ್ಯ ಪ್ರವೇಶ ಮಾಡಿ ಒತ್ತಡ ಹೇರಿದ ಹಿನ್ನೆಲೆ ನೀಡಲಾದ ದೂರುಗಳು ಆಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Viral video: Kanpur IAS officer accused of promoting conversion to Islam, probe ordered. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X