ವಿಡಿಯೋ: ತಂದೂರಿ ರೊಟ್ಟಿ ಮೇಲೆ ಉಗುಳಿದ ತಯಾರಕ
ಲಕ್ನೋ ಜನವರಿ 12: ಇತ್ತೀಚೆಗೆ ಬೀದಿ ಬದಿ ತಯಾರಾಗುವ ಆಹಾರ ಶುಚಿಯಾದ ಜಾಗದಲ್ಲಿ ತಯಾರಿಸುವುದಿರಲಿ ತಯಾರಕರ ಅಸಭ್ಯ ವರ್ತನೆಗಳಿಗೆ ಹೇಸಿಗೆ ಹುಟ್ಟಿಸಿವೆ. ತಂದೂರಿ ಹಿಟ್ಟಿಯ ಮೇಲೆ ಉಗುಳುವ ಮೂಲಕ ರೊಟ್ಟಿ ಮಾಡುವ ಮತ್ತೊಂದು ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಈ ವಿಡಿಯೋ ಲಕ್ನೋದ ಕಾಕೋರಿ ಪಟ್ಟಣದ್ದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಪೊಲೀಸರು ಹೋಟೆಲ್ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಹೋಟೆಲ್ ಮಾಲೀಕ ಸೇರಿದಂತೆ ಆರು ಮಂದಿ ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇನ್‌ಸ್ಪೆಕ್ಟರ್ ಪ್ರಕಾರ, ಸೆಕ್ಷನ್‌ಗಳು ಜಾಮೀನು ನೀಡಬಹುದಾದವುಗಳಾಗಿವೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆತಂದು ಕಟ್ಟುನಿಟ್ಟಿನ ಸೂಚನೆ ನೀಡಿ ತಡರಾತ್ರಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಲಕ್ನೋ ಹೋಟೆಲ್‌ನಲ್ಲಿ ಉದ್ಯೋಗಿಗಳ ಕೈಚಳಕ
ಕಾಕೋರಿಯ ಹೌದಾ ತಲಾಬ್ ವಾರ್ಡ್ ಬಳಿಯ ರಸ್ತೆ ಬದಿಯ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್‌ನ ಹೆಸರು ಇಮಾಮ್ ಅಲಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ, ಹಗಲಿನಲ್ಲಿ ನೌಕರ ತಂದೂರಿ ರೊಟ್ಟಿ ಬೇಯಿಸುತ್ತಿದ್ದಾನೆ. ಈ ವೇಳೆ ಇನ್ನೂ ಮೂವರು ಯುವಕರು ತಂದೂರಿನ ಅಂಗಡಿ ಬಳಿ ನಿಂತಿದ್ದಾರೆ. ಗ್ರಾಹಕರೂ ಬಂದು ಹೋಗುತ್ತಿದ್ದಾರೆ. ಇದೇ ವೇಳೆ ಹೋಟೆಲ್ ಸಿಬ್ಬಂದಿ ರೊಟ್ಟಿ ಹಿಟ್ಟಿನ ಮೇಲೆ ಉಗುಳುತ್ತಾನೆ. ಇದರ ನಂತರ ತಯಾರಕ ರೋಟಿಯನ್ನು ಬೇಯಿಸಲು ಹಾಕುತ್ತಾನೆ. ಪಕ್ಕದಲ್ಲಿ ನಿಂತಿದ್ದ ಇನ್ನಿಬ್ಬರು ನೌಕರರೂ ಇದನ್ನು ವಿರೋಧಿಸುವುದಿಲ್ಲ. ಉದ್ಯೋಗಿ ಈ ಕೃತ್ಯವನ್ನು ನಿರಂತರವಾಗಿ ಮಾಡುತ್ತಾನೆ. ಇಷ್ಟೆಲ್ಲಾ ಆದರೂ ಅಲ್ಲಿರುವ ಯಾವ ಗ್ರಾಹಕನೂ ಆತನನ್ನು ವಿರೋಧಿಸುವುದಿಲ್ಲ.

ಹೋಟೆಲ್ ಮಾಲೀಕರು ಸೇರಿದಂತೆ 6 ಮಂದಿ ವಿರುದ್ಧ ಪ್ರಕರಣ
ಇಮಾಮ್ ಅಲಿ ಹೋಟೆಲ್‌ನ ಈ ವಿಡಿಯೋ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಳಿಕ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತರಲಾಗಿದೆ. ಕಾಕೋರಿಯ ಎಸಿಪಿ ಅಶುತೋಷ್ ಕುಮಾರ್ ಅವರು ಕ್ರಮ ಕೈಗೊಳ್ಳುವಂತೆ ಇನ್ಸ್ ಪೆಕ್ಟರ್ ಜಿತೇಂದ್ರ ಬಹದ್ದೂರ್ ಸಿಂಗ್ ಸೂಚನೆ ನೀಡಿದರು. ಎಸಿಪಿ ಸೂಚನೆಯಂತೆ ವೀಡಿಯೋ ಆಧರಿಸಿ ಹೋಟೆಲ್ ಮಾಲೀಕ ಯಾಕೂಬ್, ನೌಕರರಾದ ಡ್ಯಾನಿಶ್, ಹಫೀಜ್, ಮುಖ್ತಾರ್, ಫಿರೋಜ್, ಅನ್ವರ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೈರಲ್ ಆಗಿರುವ ವಿಡಿಯೋ ನೋಡಿದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.

ಮೀರತ್‌ನಲ್ಲಿ ಉಗುಳಿ ರೊಟ್ಟಿ ತಯಾರು
ಲಕ್ನೋದ ಈ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮೊದಲು ಗಾಜಿಯಾಬಾದ್ ಮತ್ತು ಮೀರತ್‌ನಿಂದಲೂ ಇಂತಹ ವೀಡಿಯೊಗಳು ಹೊರಬಂದಿವೆ. ಮೀರತ್‌ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಉಗುಳುವ ಮೂಲಕ ರೊಟ್ಟಿ ಮಾಡುವ ವಿಡಿಯೋ ವೈರಲ್ ಆಗಿತ್ತು. ಠಾಣಾ ಕಂಕರಖೇಡದಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ತಂದೂರಿ ತಯಾರಕ ನೌಶಾದ್ ಉಗುಳುವ ಮೂಲಕ ರೊಟ್ಟಿ ಮಾಡುತ್ತಿದ್ದ ದೃಶ್ಯ ಕಂಡುಬಂದಿತ್ತು. ಈ ಘಟನೆಯ ನಂತರ ಅವರನ್ನು ಬಂಧಿಸಲಾಗಿದೆ. ಗಾಜಿಯಾಬಾದ್ ಪ್ರಕರಣದಲ್ಲೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
|
ಪಾನಿ ಪೂರಿಯಲ್ಲಿ ಮೂತ್ರ ಮಿಕ್ಸ್
ಕಳೆದ ವರ್ಷ ಪಾನಿ ಪೂರಿಯಲ್ಲಿ ಮೂತ್ರ ಮಿಕ್ಸ್ ಮಾಡುವ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಅಸ್ಸಾಂ ರಾಜ್ಯದ ಗುವಾಹತಿಯಲ್ಲಿ ರಸ್ತೆ ಬದಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೋರ್ವ ಮೂತ್ರವನ್ನು ಪಾನಿಪೂರಿಗೆ ಬಳಸುವ ನೀರಿಗೆ ಮಿಕ್ಸ್ ಮಾಡುತ್ತಿದ್ದನು. ವ್ಯಾಪಾರಿಯ ಕಳ್ಳಾಟವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದ್ದು, ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದರು.












Click it and Unblock the Notifications