ಮಸೀದಿಯಲ್ಲಿ ಹೋಮ ಮಾಡ್ತೀವಿ ಎಂಬ ಹೇಳಿಕೆ ಹಿಂಪಡೆದ ವಿಎಚ್‌ಪಿ ನಾಯಕಿ
ಲಕ್ನೋ, ನವೆಂಬರ್ 07: ಮಸೀದಿಯಲ್ಲಿ ಹೋಮ ಮಾಡುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ ಇದೀಗ ಹೇಳಿಕೆ ಹಿಂಪಡೆದಿದ್ದಾರೆ.
ಮುಸ್ಲಿಂ ಧರ್ಮಸವರು ಹಿಂದೂ ದೇವಾಲಯದಲ್ಲಿ ನಮಾಜ್ ಮಾಡಿ ಪ್ರಕರಣ ದಾಖಲಾದ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ನಾಯಕಿ ವಿವಾದಾತ್ಮಕ ಹೇಳಿಕೆಯೊಂದನ್ನು ಹಿಂಪಡೆದಿದ್ದಾರೆ.
ಮುಸಲ್ಮಾನರು ಸಾಮಾಜಿಕ ಸಮನ್ವಯದ ಹೆಸರಿನಲ್ಲಿ ಹಿಂದೂ ದೇವಾಲಯಗಳಿಗೆ ಬಂದು ನಮಾಜ್ ಮಾಡುತ್ತಾರೆ. ನಾವು ಹಿಂದೂಗಳು ಅದೇ ರೀತಿಯಲ್ಲಿ ಮಸೀದಿಗಳಿಗೆ ತೆರಳಿ ಹೋಮ, ಹವನ ಮಾಡಬೇಕು. ನಾನು ಲಕ್ನೋನ ಪುರಾತನ ಮಸೀದಿಯಲ್ಲಿ ಹೋಮ ಮಾಡುತ್ತೇನೆ ಎಂದು ಸಾದ್ವಿ ಪ್ರಾಚಿ ಹೇಳಿಕೆ ನೀಡಿದ್ದರು.

ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಬಲಿ ತೆಗೆದುಕೊಳ್ಳುವ ಮುಸ್ಲಿಂ ಯುವಕರನ್ನು ನೇರವಾಗಿ ನೇಣಿಗೆ ಏರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ತಿಂಗಳ ಆರಂಭದಲ್ಲಿ ಮಥುರಾದ ನಂದಗಾಂವ್ ನಂದ್ ಬಾಬಾ ಮಂದಿರದಲ್ಲಿಇಬ್ಬರು ಮುಸ್ಲಿಂದ ಯುವಕರು ನಮಾಜ್ ಮಾಡಿದ್ದರು. ಆ ಸಂಬಂಧ ಫೈಜಲ್ ಖಾನ್ , ಚಂದ್ ಮೊಹಮ್ಮದ್ ವಿರುದ್ಧ ಮಥುರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications