• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಟ್ಟ ಕೈಬರಹ ಎಂಬ ಕಾರಣಕ್ಕೆ ಮೂವರು ವೈದ್ಯರಿಗೆ ತಲಾ ಐದು ಸಾವಿರ ದಂಡ

|

ಲಖನೌ, ಅಕ್ಟೋಬರ್ 4: ವೈದ್ಯರ ಕೈ ಬರವಣಿಗೆ ಕೆಟ್ಟದಾಗಿರುತ್ತದೆ, ಅದನ್ನು ಮೆಡಿಕಲ್ ಷಾಪ್ ನವರನ್ನು ಬಿಟ್ಟು ಉಳಿದವರು ಅರ್ಥ ಮಾಡಿಕೊಳ್ಳುವುದು ಅಸಾಧ್ಯ...ಇತ್ಯಾದಿ ಇತ್ಯಾದಿ ಆಕ್ಷೇಪಗಳನ್ನು ಅಚ್ಚರಿ ಎಂಬಂತೆ ನೋಡುವ ಹಂತ ಮೀರಿಹೋಗಿದೆ. ಆದರೆ ಕೆಟ್ಟ ಕೈ ಬರವಣಿಗೆ ಎಂಬ ಕಾರಣಕ್ಕೆ ಉತ್ತರಪ್ರದೇಶದ ಕೋರ್ಟ್ ದಂಡ ವಿಧಿಸಿದೆ.

ಅಲಹಾಬಾದ್ ಹೈ ಕೋರ್ಟ್ ನ ಲಖನೌ ಪೀಠವು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ವೈದ್ಯರಿಗೆ ತಲಾ ಐದು ಸಾವಿರ ರುಪಾಯಿ ದಂಡ ವಿಧಿಸಿದೆ. ಅದಕ್ಕೆ ಕಾರಣ ಆಗಿರುವುದು ಓದಲು ಸಾಧ್ಯವೇ ಇಲ್ಲದಂಥ ಕೈ ಬರಹ. ಕಳೆದ ವಾರ ಮೂರು ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಂದಿದೆ.

ನೆಚ್ಚಿನ '20 ರೂಪಾಯಿ ಡಾಕ್ಟರ್' ಶರೀರದ ಮುಂದೆ ಕಣ್ಣೀರಿಟ್ಟರು ಜನ

ಗಾಯಗೊಂಡ ಸಂತ್ರಸ್ತರ ಬಗ್ಗೆ ವರದಿಯನ್ನು ಸೀತಾಪುರ್, ಉನ್ನಾವೋ ಹಾಗೂ ಗೊಂಡಾ ಜಿಲ್ಲಾಸ್ಪತ್ರೆಯಿಂದ ನೀಡಿದ್ದು, "ಓದಲು ಸಾಧ್ಯವಾಗಿಲ್ಲ" ಏಕೆಂದರೆ, ವರದಿ ವಿತರಿಸಿದ ವೈದ್ಯರ ಕೈ ಬರಹ ಬಹಳ ಕೆಟ್ಟದಾಗಿದೆ. ಇದು ಕೋರ್ಟ್ ಕಲಾಪಕ್ಕೆ ಅಡ್ಡಿ ಮಾಡಿದೆ ಎಂದು ಪರಿಗಣಿಸಿ, ವೈದ್ಯರಾದ ಜೈಸ್ವಾಲ್, ಪಿ.ಕೆ.ಗೋಯೆಲ್ ಆಶಿಶ್ ಸಕ್ಸೇನಾಗೆ ನೋಟಿಸ್ ನೀಡಲಾಗಿದೆ.

ನ್ಯಾ.ಅಜಯ್ ಲಾಂಬಾ, ಸಂಜಯ್ ಹರ್ಕೌಲಿ ಒಳಗೊಂಡ ಪೀಠವು ಈ ವೈದ್ಯರಿಗೆ ತಲಾ ಐದು ಸಾವಿರ ರುಪಾಯಿ ದಂಡ ವಿಧಿಸಿ, ಕೋರ್ಟ್ ಲೈಬ್ರರಿಯಲ್ಲಿ ಪಾವತಿಸುವಂತೆ ಸೂಚಿಸಿದೆ. ಇನ್ನು ಮುಂದೆ ಮೆಡಿಕಲ್ ರಿಪೋರ್ಟ್ ಹಳು ಸುಲಭ ಭಾಷೆಯಲ್ಲಿ ಹಾಗೂ ಅರ್ಥವಾಗುವ ಕೈ ಬರಹದಲ್ಲಿ ಇರಬೇಕು. ಅಂಥ ವರದಿಗಳನ್ನು ಕಂಪ್ಯೂಟರ್ ನಲ್ಲೇ ಟೈಪ್ ಮಾಡಿರಬೇಕು ಎಂದು ಕೂಡ ಸೂಚಿಸಲಾಗಿದೆ.

ಕೊಕ್ಕರೆ ಬೆಳ್ಳೂರಲ್ಲಿ ನಕಲಿ ವೈದ್ಯೆ ಪತ್ತೆ:ದಾಳಿ ವಿಷಯ ತಿಳಿದು ಪರಾರಿ

ಮೆಡಿಕೋ- ಲೀಗಲ್ ವರದಿಗಳು ಓದಲು ಅನುಕೂಲ ಆಗುವಂತೆಯೇ ಇರಬೇಕು ಎಂದು ಆರು ವರ್ಷದ ವೈದ್ಯರಿಗೆ ಕೋರ್ಟ್ ನೀಡಿದ್ದ ಸೂಚನೆಯನ್ನು ಮತ್ತೊಮ್ಮೆ ನೆನಪಿಸಲಾಗಿದೆ.

English summary
A Lucknow bench of Allahabad high court has imposed Rs 5,000 penalty each on three doctors in separate cases for their illegible handwriting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X