ಯುಪಿ ಚುನಾವಣೆ: ಜಾಟ್ ಪ್ರಭಾವಿಗಳೊಂದಿಗೆ ಅಮಿತ್ ಶಾ ಸಭೆ

ಲಕ್ನೋ ಜನವರಿ 26: ಉತ್ತರಪ್ರದೇಶ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಜಾಟ್ ಮತಗಳ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಇಂದು ನವದೆಹಲಿಯಲ್ಲಿ 100 ಕ್ಕೂ ಹೆಚ್ಚು ಜಾಟ್ ಸಮುದಾಯದ ಮುಖಂಡರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಇದರಲ್ಲಿ ಹೆಚ್ಚಿನ ಜಾಟ್ ನಾಯಕರು ಮತ್ತು ಪ್ರಭಾವಿಗಳು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

2014 ರಿಂದಲೂ ಬಿಜೆಪಿ ಈ ಸಮುದಾಯದಿಂದ ಸಾಕಷ್ಟು ಬೆಂಬಲವನ್ನು ಪಡೆಯುತ್ತಿದೆ. ಮಾತ್ರವಲ್ಲದೆ ಇದು ಕಳೆದ ಮೂರು ಚುನಾವಣೆಗಳಲ್ಲಿ ಯುಪಿಯಲ್ಲಿ ಬಿಜೆಪಿ ಮುನ್ನಡೆಸಲು ಅನುವು ಮಾಡಿಕೊಟ್ಟಿದೆ. ಯುಪಿ ಚುನಾವಣೆಯ ಮೊದಲ ಹಂತದ ಮತದಾನ ಫೆಬ್ರವರಿ 10 ರಂದು ಪಶ್ಚಿಮ ಯುಪಿಯಿಂದ ಪ್ರಾರಂಭವಾಗುತ್ತಿದ್ದಂತೆ, ಬಿಜೆಪಿ ಸಮುದಾಯದ ಮನಸ್ಥಿತಿಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನದಲ್ಲಿ ಸಭೆ ನಡೆಸಲಿದೆ.

ಸಮುದಾಯದ ಮನಸ್ಥಿತಿಯ ಅವಲೋಕನೆ

ಸಮುದಾಯದ ಮನಸ್ಥಿತಿಯ ಅವಲೋಕನೆ

ಮತ್ತೊಂದೆಡೆ ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಯು ಮುಖ್ಯವಾಗಿ ರೈತರಾಗಿರುವ ಜಾಟ್‌ಗಳು ಕೇಸರಿ ಪಕ್ಷದೊಂದಿಗೆ ಹೋಗುವುದಿಲ್ಲ ಎಂದು ಹೇಳಿಕೊಂಡಿದೆ. ಆದರೆ ಬಿಜೆಪಿ ಮೂರು ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಪಡಿಸುವಲ್ಲಿ, 2013 ರ ಮುಜಫರ್‌ನಗರ ಗಲಭೆಯ ನಂತರ ಜಾಟ್‌ಗಳು ಮತ್ತು ಮುಸ್ಲಿಮರ ನಡುವಿನ ವಿಭಜನೆಯಿಂದಾಗಿ ಈ ಬಾರಿಯ ಚುನಾವಣೆಗಾಗಿ ಲಾಭದಾಯಕವಾಗಿದೆ ಎಂದು ನಂಬುತ್ತದೆ.

ಬಿಜೆಪಿಗೆ ರೈತ ಬೆಂಬಲದ ಭರವಸೆ

ಬಿಜೆಪಿಗೆ ರೈತ ಬೆಂಬಲದ ಭರವಸೆ

ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡ ನಂತರ ರೈತರಲ್ಲಿ, ವಿಶೇಷವಾಗಿ ಜಾಟ್‌ಗಳಲ್ಲಿ ಕೋಪವು ಕಡಿಮೆಯಾಗಿದೆ ಎಂಬುದು ಬಿಜೆಪಿಯ ಸಾಮಾನ್ಯ ನಂಬಿಕೆಯಾಗಿದೆ. ಆದರೆ ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ ಬಿಜೆಪಿ ಯಾವುದನ್ನೂ ಊಹೆಗೆ ಬಿಡಲು ಬಯಸುವುದಿಲ್ಲ. ಆದ್ದರಿಂದ ಸಮುದಾಯವನ್ನು ತಲುಪುವ ಕ್ರಮ ಇದಾಗಿದೆ.

ಯುಪಿಯಲ್ಲಿ ಮತದಾನ ಪ್ರಾರಂಭವಾಗುವ ಎರಡು ವಾರಗಳ ಮೊದಲು ಜಾಟ್ ಪ್ರಭಾವಿಗಳ ಜೊತೆ ಶಾ ಸಭೆ ನಡೆಸುತ್ತಿದ್ದು ಇದು ಅವರನ್ನು ಉತ್ತಮವಾಗಿಡಲು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಜಾಟ್ ಹಿಂಡುಗಳನ್ನು ಒಟ್ಟಿಗೆ ಇಡುವ ಮಾರ್ಗಗಳು ಮತ್ತು ವಿಧಾನಗಳನ್ನು ಶಾ ಚರ್ಚಿಸುವ ಸಾಧ್ಯತೆಯಿದೆ.

"ಜಾಟ್‌ಗಳ ಬೆಂಬಲದ ಬಗ್ಗೆ ಯಾವುದೇ ಮನಸ್ತಾಪವಿರಲಿ ನಾವು ಜಾಟ್‌ಗಳ ನಡುವಿನ ಗೊಂದಲವನ್ನು ನಿರ್ಲಕ್ಷಿಸುವ ಮನಸ್ಥಿತಿಯಲ್ಲಿಲ್ಲ ಮತ್ತು ಆದ್ದರಿಂದ ಅವರನ್ನು ಗೆಲ್ಲಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ" ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಯೋಗಿ ಸಂಪುಟದಲ್ಲಿ ಸಚಿವರಾಗಿರುವ ಭೂಪೇಂದ್ರ ಚೌಧರಿ ಮತ್ತು ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರಂತಹ ಜಾಟ್ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ನೆಲಮಟ್ಟದಲ್ಲಿ ಜಾರಿಗೆ ತರಲಾಗುವುದು ಎಂದು ಅವರು ಹೇಳುತ್ತಾರೆ.

ಜಾಟ್ ನಾಯಕರೊಂದಿಗೆ ಶಾ ಸಭೆ

ಜಾಟ್ ನಾಯಕರೊಂದಿಗೆ ಶಾ ಸಭೆ

ಜಾಟ್‌ಗಳನ್ನು ಓಲೈಸಲು ಇದು ಶಾ ಅವರ ಮೊದಲ ಪ್ರಯತ್ನವಲ್ಲ. 2017 ರ ವಿಧಾನಸಭಾ ಚುನಾವಣೆಗೂ ಮುನ್ನ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿತ್ತು ಮತ್ತು ಆಗಿನ ಬಿಜೆಪಿ ಅಧ್ಯಕ್ಷ ಶಾ ಅವರು ಈ ಪ್ರದೇಶದ ಜಾಟ್ ನಾಯಕರನ್ನು ಭೇಟಿ ಮಾಡಬೇಕಾಗಿತ್ತು. ಮೂರು ಡಜನ್ ಜಾಟ್ ನಾಯಕರು ಆಗ ಶಾ ಅವರನ್ನು ಭೇಟಿ ಮಾಡಿದ್ದರು.

ಜಾಟ್ ಮತದಾರರನ್ನು ತಲುಪಲು ತಂತ್ರ

ಜಾಟ್ ಮತದಾರರನ್ನು ತಲುಪಲು ತಂತ್ರ

2019ರ ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿಯ ಪ್ರಯತ್ನಗಳು ನಡೆದಿದ್ದವು. ಆದಾಗ್ಯೂ, ಜಾಟ್ ಪ್ರಭಾವಿಗಳು ಶಾ ಅವರನ್ನು ಭೇಟಿ ಮಾಡುವ ಬದಲು, ಪಶ್ಚಿಮ ಯುಪಿಯಲ್ಲಿ ಜಾಟ್ ಮತದಾರರನ್ನು ತಲುಪಲು ತಂತ್ರವನ್ನು ರೂಪಿಸಲಾಯಿತು. ಇದು ಯುಪಿಯಲ್ಲಿ 64 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಹಾಯ ಮಾಡಿತು.

ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಸೋಲು

ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಸೋಲು

2013 ರ ಮುಜಫರ್‌ನಗರ ಗಲಭೆಯ ನಂತರ, ಮುಸ್ಲಿಮರ ವಿರುದ್ಧ ಜಾಟ್‌ಗಳನ್ನು ಎತ್ತಿಕಟ್ಟಲಾಯಿತು. ಆಗ ಇವರು 2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ನಿಂತರು. ಬಿಜೆಪಿಗೆ ಜಾಟ್ ಸಮುದಾಯದ ಬೆಂಬಲದಿಂದಾಗಿ ಈ ಪ್ರದೇಶದ ಅತ್ಯಂತ ಪ್ರಮುಖ ಜಾಟ್ ನಾಯಕ ಎಂದು ಪರಿಗಣಿಸಲಾದ ಅಂದಿನ ಆರ್‌ಎಲ್‌ಡಿ ಮುಖ್ಯಸ್ಥ ದಿವಂಗತ ಅಜಿತ್ ಸಿಂಗ್ ಕೂಡ ತಮ್ಮ ಪಾಕೆಟ್ ಬರೋ ಬಾಗ್‌ಪತ್‌ನಿಂದ ಸೋತಿದ್ದರು. ಈ ಬಾರಿ ಅಜಿತ್ ಸಿಂಗ್ ಅವರ ಪುತ್ರ ಮತ್ತು ಪ್ರಸ್ತುತ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರ ನಾಯಕತ್ವವು ಅಪಾಯದಲ್ಲಿದೆ. ಏಕೆಂದರೆ ಅವರು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಯುಪಿಯಲ್ಲಿ ಸತತ ಎರಡನೇ ಅವಧಿಗೆ ಬಿಜೆಪಿಯನ್ನು ಗೆಲ್ಲುವುದನ್ನು ತಡೆಯಲು ಮೈತ್ರಿ ಮಾಡಿಕೊಂಡಿದ್ದಾರೆ.

ಎಸ್‌ಪಿಗೆ ಕೈ ಹಿಡಿಯಲಿವೆ ಮುಸ್ಲಿಂ ಮತ

ಎಸ್‌ಪಿಗೆ ಕೈ ಹಿಡಿಯಲಿವೆ ಮುಸ್ಲಿಂ ಮತ

ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ನಡೆಸಿದ ಪ್ರತಿಭಟನೆಯು ರಾಷ್ಟ್ರೀಯ ಲೋಕದಳ (RLD) ಪಕ್ಷದ ಜನಪ್ರಿಯತೆ ಮತ್ತು ಪ್ರಭಾವವನ್ನು ಹೆಚ್ಚಿಸಿದೆ. ಇದು ಭಾರತೀಯ ಜನತಾ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಈ ಮಧ್ಯೆ ಎಲ್ಲಾ ಜಾಟ್ ಮತಗಳು ಆರ್‌ಎಲ್‌ಡಿಯೊಂದಿಗೆ ಇಲ್ಲ ಎಂದು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಅದಾಗ್ಯೂ, ಪ್ರಾದೇಶಿಕ ಸಂಘಟನೆಯು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮುಸ್ಲಿಮರ ಮತಗಳನ್ನು ಭದ್ರಪಡಿಸುವ ಸಾಧ್ಯತೆಯಿದೆ.ರಾಷ್ಟ್ರೀಯ ಲೋಕದಳ ಪಕ್ಷವನ್ನು ಸಾಂಪ್ರದಾಯಿಕವಾಗಿ ಜಾಟ್ ಪಕ್ಷವೆಂದು ಪರಿಗಣಿಸಲಾಗುತ್ತದೆ. ಆದರೆ ಮುಸ್ಲಿಂ ಸಮುದಾಯದ ಮತಗಳು ಬಿಜೆಪಿ ವಿರುದ್ಧ ಬೀಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಈ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ ಅಥವಾ ಸಮಾಜವಾದಿ ಪಕ್ಷ ಇಲ್ಲದಿರುವುದರಿಂದ ಮುಸ್ಲಿಮರು ಆರ್‌ಎಲ್‌ಡಿ ಅನ್ನು ಬೆಂಬಲಿಸುವ ಸಾಧ್ಯತೆಗಳು ಹೆಚ್ಚಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+