ಯುಪಿ: ದಲಿತ ಯುವಕನ ಮೇಲೆ ಅಮಾನುಷ ಹಲ್ಲೆ, ಖಾಸಗಿ ಅಂಗಕ್ಕೆ ಥಳಿಸಿದ ಗುಂಪು

ಲಕ್ನೋ, ಜು.10: ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಗುಂಪೊಂದು 20 ವರ್ಷದ ದಲಿತ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಯುವಕನನ್ನು ಎಳದಾಡಿ, ಕೋಲುಗಳಿಂದ ಹೊಡೆಯುವ, ಕಾಲಿಂದ ಒದೆಯುವ, ಪ್ಯಾಂಟ್‌ ಜಾರಿಸಿ ಖಾಸಗಿ ಅಂಗಕ್ಕೆ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಎರಡು ದಿನಗಳ ಹಿಂದೆ ನಡೆದು ತಡವಾಗಿ ಬೆಳಕಿಗೆ ಬಂದಿರುವ ಈ ಘಟನೆ ಕಾನ್ಪುರ್ ದೇಹತ್‌ನ ಅಕ್ಬರ್‌ಪುರ ಪ್ರದೇಶದಿಂದ ಬಂದಿದೆ.

ಇನ್ನು ''ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇತರ ಅಪರಾಧಿಗಳ ಪತ್ತೆ ಕಾರ್ಯ ನಡೆಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ,'' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Uttar Pradesh: Dalit Man Beaten Up, Hit On Private parts

ಯುವಕನನ್ನು ಥಳಿಸಿದ ಈ ಗುಂಪು ಆತನ ಬಳಿ ಜಾತಿ ಯಾವುದೆಂದು ಕೇಳಿದ್ದು, ಯುವಕ ತನ್ನ ಜಾತಿ ಹೇಳುತ್ತಿದ್ದಂತೆ ಇನ್ನಷ್ಟು ಕ್ರೂರವಾಗಿ ಥಳಿಸಲು ಆರಂಭಿಸಿದ್ದಾರೆ.

ಇನ್ನು ಈ ಬಗ್ಗೆ ಎನ್‌ಡಿ ಟಿವಿಗೆ ಪ್ರತಿಕ್ರಿಯೆ ನೀಡಿದ ಕಾನ್ಪುರ್ ದೇಹತ್ ಹೆಚ್ಚುವರಿ ಎಸ್ಪಿ ಘಾನ್ಶ್ಯಾಮ್ ಚೌರಾಸಿಯಾ, ವಿಡಿಯೋ ಬಗ್ಗೆ ನಮಗೆ ತಿಳಿದ ಕೂಡಲೇ ಈ ವಿಷಯದಲ್ಲಿ ಪೊಲೀಸ್ ಪ್ರಕರಣ ದಾಖಲಾಗಿತ್ತು. ವೈರಲ್ ವೀಡಿಯೊದಲ್ಲಿ ಗುರುತಿಸಲಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ಜನರು ದಲಿತ ಯುವಕರನ್ನು ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಆ ಇಬ್ಬರ ವಿವರವನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ಇಬ್ಬರ ಬಂಧನಕ್ಕೆ ತಂಡಗಳನ್ನು ರಚಿಸಲಾಗಿದೆ," ಎಂದು ತಿಳಿಸಿದ್ದಾರೆ.

ಇನ್ನು ಮತ್ತೊಂದು ವಿಡಿಯೋದಲ್ಲಿ ಯುವಕನ ಪ್ಯಾಂಟ್‌ ಅನ್ನು ಜಾರಿಸಿ ಆತನನ್ನು ಮರಕ್ಕೆ ತಳ್ಳಿ ಹಿಡಿದು, ಖಾಸಗಿ ಅಂಗಗಳಿಗೆ ಕೋಲಿನಿಂದ ಥಳಿಸಿದ್ದಾರೆ. ಯುವಕನನ್ನು ಕಾನ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದಕ್ಕೂ ಮುನ್ನ, ಉತ್ತರ ಪ್ರದೇಶದದ ಲಖಿಂಪುರ ಖೇರಿಯಲ್ಲಿ ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದಿದ್ದ ಮಹಿಳಾ ಅಭ್ಯರ್ಥಿಯ ಸೀರೆ ಎಳೆದು ಅವಮಾನ ಮಾಡಿರುವ ಘಟನೆ ಲ್ಲಿ ನಡೆದಿದೆ. ವ್ಯಕ್ತಿಗಳಿಬ್ಬರು ಮಹಿಳೆಯೊಬ್ಬರ ಮೇಲೆ ಕೈ ಮಾಡಿ, ಬಳಿಕ ಸೀರೆ ಎಳೆದು ಅವಮಾನ ಮಾಡಿದ್ದಾರೆ, ಅಖಿಲೇಶ್ ಯಾದವ್‌ರ ಸಮಾಜವಾದಿ ಪಕ್ಷದ ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+